
ಚಾಮರಾಜನಗರ, ಮಾ.10:- ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ಅಮಿಗಾ ಫೌಂಡೇಶನ್ ಸಹಯೋಗದಲ್ಲಿ ಕೊಳ್ಳೇಗಾಲ ತಾಲೂಕಿನ ಅಂಗನವಾಡಿಗಳಲ್ಲೂ ಉಚಿತವಾಗಿ ಮಾಂಟೆಸ್ಸರಿ ಶಿಕ್ಷಣ ಆರಂಭಗೊಂಡಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಇಲಾಖೆಯು ಅಮಿಗಾ ಫೌಂಡೇಶನ್ ಸಹಯೋಗದಲ್ಲಿ ಮೊದಲ ಬಾರಿಗೆ ಕೊಳ್ಳೇಗಾಲ ತಾಲೂಕಿನಐದುಅಂಗನವಾಡಿ ಕೇಂದ್ರಗಳಲ್ಲಿ ಉಚಿತ ಮಾಂಟೆಸ್ಸರಿ ಶಿಕ್ಷಣ ಆರಂಭಿಸಿದ್ದು, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕಅಧಿಕಾರಿಎಸ್. ಪೂವಿತಾಅವರುಇಂದು ಕೊಳ್ಳೇಗಾಲದ ಉಪ್ಪಲಗೆರೆ ಮೋಳೆಯ ಅಂಗನವಾಡಿಕೇಂದ್ರದಲ್ಲಿ ಉದ್ಘಾಟಿಸಿದರು. ಮಕ್ಕಳ ಕಲಿಕಾ ಪ್ರಕ್ರಿಯೆಯನ್ನು ವೀಕ್ಷಿಸಿದರು.
ಕೊಳ್ಳೇಗಾಲದ ಉಪ್ಪಲಗೆರೆ ಮೋಳೆ, ಉತ್ತಂಬಳ್ಳಿ, ಬಸ್ತೀಪುರ, ಜಿನಕನಹಳ್ಳಿ ಮತ್ತು ಹೊಸಹಂಪಾಪುರ ಈ 5 ಅಂಗನವಾಡಿ ಕೇಂದ್ರಗಳಲ್ಲಿ 100ಕ್ಕೂ ಹೆಚ್ಚು ಮಕ್ಕಳಿಗೆ ಕನ್ನಡ ಮತ್ತುಇಂಗ್ಲೀμï ನಲ್ಲಿಉಚಿತ ಮಾಂಟೆಸ್ಸರಿ ಶಿಕ್ಷಣವನ್ನು ನೀಡಲು ಪ್ರಾರಂಭಿಸಲಾಗಿದೆ.
ಬಿಳಿಗಿರಿರಂಗನ ಬೆಟ್ಟದಲ್ಲಿರುವ ಎರಡು ಅಂಗನವಾಡಿಗಳು ಸೇರಿದಂತೆ ಭಾರತದಾದ್ಯಂತ 20 ಅಂಗನವಾಡಿಗಳಲ್ಲಿ ಸುಮಾರು 450 ಮಕ್ಕಳಿಗೆ ಉಚಿತ ಮಾಂಟೆಸ್ಸರಿ ಶಿಕ್ಷಣವನ್ನು ಅಮಿಗಾ ದಾನದತ್ತಿಟ್ರಸ್ಟ್ ನೀಡುತ್ತಿದೆ.
ಅಮಿಗಾ ಫೌಂಡೇಶನ್ ಇಂಟರ್‍ಪಂಪ್ ಗ್ರೂಪ್‍ನಿಂದ ಪ್ರಾಯೋಜಿತ ಉಚಿತ ಮಾಂಟೆಸ್ಸರಿ ಸಾಮಗ್ರಿಗಳನ್ನು ಒದಗಿಸಲಾಗಿದೆ. ಐದು ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಮಾಂಟೆಸ್ಸರಿ ಶಿಕ್ಷಣವನ್ನು ಒದಗಿಸಲು ಮಾಂಟೆಸ್ಸರಿ ತರಬೇತಿ ಪಡೆದ ಶಿಕ್ಷಕರನ್ನು ನೇಮಿಸಲಾಗಿದೆ. ಗ್ರಾಮೀಣ ಮಕ್ಕಳಿಗೆ ವಿಶ್ವದರ್ಜೆಯ ಶಿಕ್ಷಣವನ್ನು ಉಚಿತವಾಗಿ ನೀಡಲಾಗುತ್ತಿದೆ.
ಜಿಲ್ಲಾ ಪಂಚಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಎಸ್, ಪೂವಿತಾ ಅವರು ಉದ್ಘಾಟನಾ ಸಂದರ್ಭದಲ್ಲಿ ಮಾತನಾಡಿ ಗ್ರಾಮೀಣ ಮಕ್ಕಳಿಗೆ ಇದೊಂದು ಉತ್ತಮ ಅವಕಾಶವಾಗಿದೆ. ಪೋಷಕರು ಮಕ್ಕಳನ್ನು ತಪ್ಪದೇ ಅಂಗನವಾಡಿಗೆ ಕಳುಹಿಸಬೇಕು ಎಂದರು. ಇದೇ ವೇಳೆ ಉಪ್ಪಲಗೆರೆಯ ಪೋಷಕರು ಬಡಾವಣೆಯಲ್ಲಿರುವಇನ್ನೂಎರಡು ಅಂಗನವಾಡಿ ಕೇಂದ್ರಗಳಲ್ಲಿಯೂ ಮಾಂಟೆಸ್ಸರಿ ಶಿಕ್ಷಣ ಪ್ರಾರಂಭಿಸುವಂತೆ ಮಾಡಿದ ಮನವಿಗೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕಅಧಿಕಾರಿ ಪೂವಿತಾಅವರು ಈ ಬಗ್ಗೆ ಕ್ರಮ ವಹಿಸುವುದಾಗಿ ನುಡಿದರು.
ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್, ತಾಲೂಕು ಶಿಶು ಅಭಿವೃದ್ದಿ ಯೋಜನಾ ಇಲಾಖೆಯ ಮೇಲ್ವಿಚಾರಕರಾದ ಶಿವಲೀಲಾ, ಅಮಿಗಾ ಫೌಂಡೇಶನ್‍ನ ಟ್ರಸ್ಟಿಗಳಾದ ಲಕ್ಷ್ಮೀರಾಮಮೂರ್ತಿ, ಎಂ.ಆರ್. ಧರ್ಮರಾಜನ್ ಉಪಸ್ಥಿತರಿದ್ದರು.