
ಔರಾದ : ಎ.8:ಕ್ರೈಸ್ತ ಸಮುದಾಯದ ಪವಿತ್ರ ದಿನವಾದ ಶುಭ ಶುಕ್ರವಾರವನ್ನು(ಗುಡ್ ಫ್ರೈಡೆ) ತಾಲೂಕಿನ ಕೊಳ್ಳೂರ ಗ್ರಾಮದ ಸೆಂಟ ಪಾಲ್ ಮೆಥೋಡಿಸ್ಟ ಚರ್ಚನಲ್ಲಿ ಪ್ರಾರ್ಥನೆ ಮಾಡುವ ಮೂಲಕ ಆಚರಣೆ ಮಾಡಲಾಯಿತು.
ಗುಡ್ ಫ್ರೈಡೆ ಸಂದೇಶ ನೀಡಿ ಮಾತನಾಡಿದ ಪಾಸ್ಟರ್ ಸಂಜುಕುಮಾರ,
ಶೋಷಿತರ ಕಣ್ಣೀರನ್ನು ಒರೆಸುವ, ಸತ್ಯ ಮಾರ್ಗದಲ್ಲಿ ಜಗತ್ತನ್ನು ಮುನ್ನಡೆಸಬಲ್ಲ ಮಹಾಶಕ್ತಿಯಾಗಿರುವ ಯೇಸು ಜಗದ ದುಃಖವನ್ನು ತೊಡೆಯಲು ಶಕ್ತನಾಗಿದ್ದಾರೆ ಎಂದು ನುಡಿದರು.
ಜಗತ್ತಿನಾದ್ಯಂತ ಇರುವ ಕೆಟ್ಟತನಕ್ಕೆ ಯೇಸುವಿನ ಪ್ರೀತಿ, ಕರುಣೆ, ಕ್ಷಮೆ, ಔದಾರ್ಯಗಳು ಔಷಧವಾಗಬೇಕು. ಹೊಣೆಗೇಡಿತನ, ಕ್ರೋಧ, ತಿಳಿಗೇಡಿತನಕ್ಕೆ ಯೇಸು ಉತ್ತರವಾಗಿದ್ದಾರೆ.
ಮುಖಂಡ ಸುಧಾಕರ ಕೊಳ್ಳುರ ಮಾತನಾಡಿ, ಯೇಸುಕ್ರಿಸ್ತ ಶಿಲುಬೆಯನ್ನು ಹೊತ್ತು ನಡೆದಂತೆ ನಾವೂ ಜೀವನದಲ್ಲಿ ಎದುರಾಗುವ ಕಷ್ಟ, ಸಾವು, ನೋವು, ಸಂಕಟಗಳನ್ನು ಎದುರಿಸಿ ಮುನ್ನಡೆಬೇಕಿದೆ. ಸ್ವಾರ್ಥ ತ್ಯಜಿಸಿ ಪರರ ಪ್ರೀತಿಯಲ್ಲಿ ಬದುಕಲು ದೇವರು ತೋರಿರುವ ದಾರಿಯೇ ಶಿಲುಬೆಯ ಹಾದಿ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಸಂಗಪ್ಪ ಸಾಕರೆ, ನರಸಪ್ಪ ಉಪಕಾರೆ, ನಾಗನಾಥ ಸಾಕರೆ, ಪರಶುರಾಮ ಪಡಸಾಲೆ, ಬಸವರಾಜ ಉಪಕಾರೆ, ಸೋಪಾನ ಮೇತ್ರೆ, ಸುಭಾಷ ಉಪಕಾರೆ, ನಾಗನಾಥ ಜಾಧವ್, ಧರ್ಮ ವರ್ಮಾ, ಮೂಗಲಪ್ಪ ಜಾಧವ್, ಸುನಿಲ್ ಜಾಧವ, ರಮೇಶ್ ಸಾವಳೆ, ರಾಮಣ್ಣ ಕೌಡಗಾಂವ, ನಾಗನಾಥ ಪಡಸಾಲೆ, ಶಿರೋಮಣಿ ಸಾವಳೆ, ದಶವಂತ ಕೌಡಗಾಂವ, ಸಚಿನ್ ಸಾವಳೆ, ಏವನ ವರ್ಮಾ, ಜೀವನ, ಸುನೀಲ ಸೇರಿದಂತೆ ಇತರರು ಇದ್ದರು.