ಕೊಳ್ಳುರು ಗ್ರಾಮದಲ್ಲಿ ಹರ್ ಘರ್ ಜಲೋತ್ಸವ

ಕಲಬುರಗಿ.ಜು.27: ಜಿಲ್ಲೆಯ ಕಲಬುರಗಿ ತಾಲೂಕಿನ ಶರಣಸಿರಸಗಿ ಗ್ರಾಮ ಪಂಚಾಯತ ವ್ಯಾಪ್ತಿಯ ಕೊಳ್ಳುರು ಗ್ರಾಮದಲ್ಲಿ ಸರ್ಕಾರದ ಆದೇಶ ಮೇರೆಗೆ ಗ್ರಾಮದಲ್ಲಿ ಮನೆ-ಮೆನಗೆ ನಳ ಸಂಪರ್ಕ ಶೇ.100% ರಷ್ಟು ನೀಡಿದ್ದಲ್ಲಿ ಅಂತಹ ಗ್ರಾಮಗಳಲ್ಲಿ ಹರ್-ಘರ್-ಜಲೋತ್ಸವ ಆಚರಣೆ ಮಾಡಬೇಕೆಂಬ ಸರ್ಕಾರದ ಆದೇಶದ ನಿಟ್ಟಿನಲಿ,್ಲ ಇಂದು ಜಿಲ್ಲಾ ಪಂಚಾಯತ್ ಕಲಬುರಗಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಕಲಬುರಗಿ ಹಾಗೂ ಗ್ರಾಮ ಪಂಚಾಯತ್ ಶರಣ ಸಿರಸಗಿ ಹಾಗೂ ಹಸ್ತಕಲಾ ಸಂಸ್ಥೆ ವತಿಯಿಂದ ಗ್ರಾಮದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು ಕಾರ್ಯಕ್ರಮದಲ್ಲಿ ಎಲ್ಲಾ ಗ್ರಾಮಗಳಿಗೆ ನೀರು ಸಂಪರ್ಕ ನೀಡಿರುವ ಕುರಿತು ಸಭೆ ಜರುಗಿಸಲಾಯಿತು ಹಾಗೂ ಅಂಗನವಾಡಿ ಮತ್ತು ಶಾಲೆಗಳಿಗೆ ನಳ ಸಂಪರ್ಕ ನೀಡಿರುವ ಕುರಿತು ಎಲ್ಲ ಅಧಿಕಾರಿಗಳು ಮತ್ತು ಗ್ರಾಮಸ್ಥರು ಗ್ರಾಮ ವೀಕ್ಷಣೆ ಮಾಡಿ ನಳ ಸಂಪರ್ಕ ನೀಡಿರುವ ಕುರಿತು ಖಾತ್ರಿ ಪಡಿಸಿಕೊಂಡ ಮೇಲೆ ಕಾರ್ಯಕ್ರಮ ಪ್ರಾರಂಭಿಸಲಾಯಿತು .
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು ಶ್ರೀಮತಿ ಲಕ್ಷ್ಮಿಬಾಯಿ, ಮಾತನಾಡುತ್ತ ಜಲ ಜೀವನ ಮಿಷನ್ ಕಾರ್ಯಕ್ರಮದಡಿ ಮನೆ-ಮನೆಗೆ ನಳ ಸಂಪರ್ಕ ನೀಡಲಾಗಿದೆ ಎಂದರು. ಕಲಬುರಗಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಪ್ರವೀಣಕುಮಾರ ಮಾತನಾಡುತ್ತ ನಮ್ಮ ಇಲಾಖೆ ವತಿಯಿಂದ ಎಲ್ಲ ಗ್ರಾಮಗಳಿಗೂ ಮನೆ-ಮೆನೆ ಗಂಗೆ ಮೂಲಕ ನೀರನ್ನು ಒದಗಿಸಲಾಗುವುದು ಎಂದರು. ಜಲ ಜೀವನ್ ಮಿಷನ್ ಜಿಲ್ಲಾ ಯೋಜನಾ ವ್ಯವಸ್ಥಾಪಕರಾದ ಡಾ.ರಾಜು ಕಂಬಾಳಿಮಠ ರವರು ಯೋಜನೆ ಕುರಿತು ಠರಾವು ಪಾಸು ಮಾಡಿದರು.

ಕಾರ್ಯಕ್ರಮದ ವೇದಿಕೆ ಮೇಲೆ ಗ್ರಾ,ಪಂ. ಉಪಾಧ್ಯಕ್ಷರು ಅನಿಲ ಧರಣಿ, ಗ್ರಾಮ ಪಂಚಾಯತ್ ಸದಸ್ಯರು ಖಾಸಿಂ ಪಟೇಲ್ ಕೂಡಿ, ಮಲ್ಲಪ್ಪ ಕಾಂಬಳೆ , ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಅಮರ್ ಎಕಲೂರು, ಜೆಜೆಎಂ ಎಂ.ಐ.ಎಸ್. ಜಿಲ್ಲಾ ಸಂಯೋಜಕರಾದ ಸಿದ್ಧಲಿಂಗ ಮುಗಳಿ, ಸಹಾಯಕ ನಿದೇರ್ಶಕರಾದ ಶಿವಾನಂದ ಪವಾರ್ ಸಹಾಯಕ ಅಭಿಯಂತರರು, ವಿಕಾಸ , ಹಸ್ತಕಲಾ ಸಂಸ್ಥೆಯ ತಂಡದ ನಾಯಕರಾದ ರೇಖಾ ವಾಡಿ, ಸಮುದಾಯ ಸಂಘಟಕರಾದ ಕಾಳಮ್ಮ, ಹಣಮಂತ ರೂಢಾ ಸಂಸ್ಥೆಯ ತಂಡದ ನಾಯಕರಾದ ಸಂತೊಷ ಮೂಲಗೆ, ಕಾರ್ಯಕ್ರಮ ನಿರೂಪಿಸಿದರು. ಮತ್ತು ಹೆಚ್.ಆರ್.ಡಿ ಸಮಾಲೋಚಕರಾದ ಶ್ರವಣಕುಮಾರ ಅಂಗನವಾಡಿ ಕಾರ್ಯಕರ್ತೆ ಗೌಸಿಯಾ ಗುತ್ತಿಗೆದಾರರಾದ ವೀರಶೆಟ್ಟಿ ಉಪಸ್ಥಿತರಿದ್ದರು.