ಕೊಳೆಗೇರಿ ನಿವಾಸಿಗಳಿಗೆ ೩೦ ಹಕ್ಕು ಪತ್ರ ವಿತರಿಸಿದ ಶಾಸಕ ಹೂಲಗೇರಿ

ಲಿಂಗಸುಗೂರು.ಜು.೩೦- ಲಿಂಗಸುಗೂರು ಪುರಸಭೆ ವ್ಯಾಪ್ತಿಯಲ್ಲಿ ಬರುವ ಕೊಳೆಗೇರಿ ನಿವಾಸಿಗಳಿಗೆ ೩೦ ಹಕ್ಕು ಪತ್ರಗಳನ್ನು ಶಾಸಕ ಡಿ ಎಸ್ ಹೂಲಗೇರಿ ಇವರು ಕೊಳೆಗೇರಿ ನಿವಾಸಿಗಳಿಗೆ ವಿತರಣೆ ಮಾಡಿದರು.
ಇಂದು ಪುರಸಭೆ ಕಾರ್ಯಾಲಯದಲ್ಲಿ ಸಾಂಕೇತಿಕ ವಾಗಿ ೦೫ ಜನ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡಲಾಯಿತು.
ಪಟ್ಟಣದಲ್ಲಿ ಕೊಳೆಗೇರಿ ನಿವಾಸಿಗಳಲ್ಲಿ ವಾಸಿಸುವ ಅನೇಕ ಕುಟುಂಬಗಳು ವಾಸಿಸುತ್ತಿದ್ದು ಅಧಿಕಾರಿಗಳು ಬೇಕಾಬಿಟ್ಟಿ ಯಾಗಿ ಹಕ್ಕು ಪತ್ರಗಳನ್ನು ಶಾಸಕರ ಮೂಲಕ ವಿತರಣೆ ಮಾಡುವ ಮೂಲಕ ಇನ್ನುಳಿದ ಕೊಳೆಗೇರಿ ನಿವಾಸಿಗಳಿಗೆ ಅನ್ಯಾಯ ಮಾಡಿದ್ದಾರೆ ಎಂದು ಹಕ್ಕು ಪತ್ರ ವಂಚಿತ ನಿವಾಸಿಗಳು ಶಾಸಕರ ಮುಂದೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪುರಸಭೆ ವ್ಯಾಪ್ತಿಯಲ್ಲಿ ಕೊಳೆಗೇರಿ ಏರಿಯಾದಲ್ಲಿ ವಾಸಿಸುವ ಜನರಿಗೆ ಪುರಸಭೆ ವತಿಯಿಂದ ಖಾತಾ ನಕಲು ನೀಡಿದ್ದಾರೆ ಇದರಿಂದ ಅವರಿಗೆ ಮಾನಸಿಕವಾಗಿ ಹಿಂಸಿಸುವ ಮೂಲಕ ಪುರಸಭೆ ಅಧಿಕಾರಿಗಳು ಖಾತ ನಕುಲ ವಿತರಣೆ ಮಾಡಿ ಕೊಳೆಗೇರಿ ನಿವಾಸಿಗಳಿಗೆ ವಂಚಿಸಿ ಬದುಕಿನ ಮೇಲೆ ಬರೆ ಎಳೆಯುವ ಪ್ರಯತ್ನವನ್ನು ಮಾಡಲಾಗಿದೆ ಇಂದು ಬೆಳಗ್ಗೆ ಕಾರ್ಯಾಲಯದಲ್ಲಿ ಸಾಂಕೇತಿಕ ವಾಗಿ ೦೫ ಜನ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡುವ ಸಂದರ್ಭದಲ್ಲಿ ಆರೋಪ ಕೇಳಿಬಂದಿದೆ ಸರ್ಕಾರದಿಂದ ಇಂದು ವಿತರಣೆ ಮಾಡಿದ ಹಕ್ಕು ಪತ್ರ ಅಧಿಕ್ರೃತ ಈಗಾಗಲೇ ನೀಡಿರುವ ಖಾತ ನಕುಲ್ ಯಾವುದೇ ಕೇಲಸಕ್ಕೆ ಬರುವುದಿಲ್ಲ ಎಂದು ಕೊಳೆಗೇರಿ ನಿವಾಸಿಗಳಿಗೆ ಶಾಸಕ ಡಿ ಎಸ್ ಹೂಲಗೇರಿ ಇವರು ತಿಳಿಸಿದರೂ
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಸುನೀತಾ ಕೆಂಭಾವಿ ಉಪಾಧ್ಯಕ್ಷ ಎಂಡಿ ರಫೀ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಮೋದ್ ಕುಲಕರ್ಣಿ ಪುರಸಭೆಯ ಸದಸ್ಯೆರಾದ ರುದ್ರಪ್ಪ ಭ್ಯಾಗಿ ದೊಡ್ಡನಗೌಡ ಪಾಟೀಲ್ ಹೊಸಮನಿ ಬಾಬು ರೇಡ್ಡಿ ರೌಪ್ ಗ್ಯಾರಂಟಿ ಸೋಮನಗೌಡ ಪಾಟೀಲ್ ಕರಡಕಲ್ ಅಬ್ದುಲ್ಲಾ ಬೇಕರಿ ಶಿವಪ್ಪಾ ನಾಯಕ ಬಸವರಾಜ ಯತಗಲ್ ಸೇರಿದಂತೆ ಹಾಗೂ ಪುರಸಭೆ ಮುಖ್ಯಾಧಿಕಾರಿ ಜಗನ್ನಾಥ ಜೋಷಿ ಕೊಳೆಗೇರಿ ಅಧಿಕಾರಿ ಎಇಇ ದೇವೆಂದ್ರಕುಮಾರ ಸೇರಿದಂತೆ ಇತರರು ಪುರಸಭೆಯ ಅಧಿಕಾರಿಗಳು ಇದ್ದರು.