ಕೊಳಾರ ಕೈಗಾರಿಕಾ ಏರಿಯಾದಲ್ಲಿ ಪ್ರತ್ಯೆಕ ಪೆÇೀಲಿಸ್ ಠಾಣೆ ಸ್ಥಾಪಿಸಿ

(ಸಂಜೆವಾಣಿ ವಾರ್ತೆ)
ಬೀದರ್: ಜು.30: ನಗರದ ಹೊರವಲಯದಲ್ಲಿರುವ ಕೊಳಾರ ಕೈಗಾರಿಕಾ ಪ್ರದೇಶದಲ್ಲಿ ಪ್ರತ್ಯೇಕ ಪೆÇೀಲಿಸ್ ಠಾಣೆ ಸ್ಥಾಪಿಸಬೇಕೆಂದು ಎಸ್ಸಿ ಎಸ್ಟಿ ಸಣ್ಣ ಕೈಗಾರಿಕೋದ್ಯಮಿದಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪೃಥ್ವಿರಾಜ್ ಎಸ್ ಆಗ್ರಹಿಸಿದ್ದಾರೆ.
ಈ ಕುರಿತು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ನಂತರ ಪ್ರಕಟಣೆಗೆ ಬಿಡುಗಡೆ ಮಾಡಿರುವ ಅವರು, ಪಾರ್ಕ್ ಕೈಗಾರಿಕಾ ಪ್ರದೇಶದಲ್ಲಿ ವಿದ್ಯುತ್ ದೀಪಗಳ ಅಭಾವ ಇರುವ ಕಾರಣ ರಾತ್ರಿ ವೇಳೆಯಲ್ಲಿ ಅಲ್ಲಿಯ ಸಿಬ್ಬಂದಿ ಹಾಗೂ ಕಾರ್ಮಿಕರು ಮನೆಗೆ ತೆರಳುವ ಸಂದರ್ಭದಲ್ಲಿ ಕಳ್ಳಕಾಕರು ದರೋಡೆಗಿಳಿದಿದ್ದಾರೆ. ಎಷ್ಟೋ ಅಮಾಯಕ ಸಿಬ್ಬಂದಿ ಹಾಗೂ ಕಾರ್ಮಿಕರು ಈಗಾಗಲೇ ಕಳ್ಳರ ಕಾಟಕ್ಕೆ ಸುಸ್ತಾಗಿದ್ದು, ಅದರಲ್ಲೂ ಮಹಿಳಾ ಕಾರ್ಮಿಕರ ಸ್ಥಿತಿ ಶೋಚನೀಯವಾಗಿದೆ. ಕೈಗಾರಿಕಾ ಪ್ರದೇಶದಲ್ಲಿ ವಾಸಿಸುವ ಸಿಬ್ಬಂದಿ ಹಾಗೂ ಕಾರ್ಮಿಕರ ಹಿತದೃಷ್ಟಿಯಿಂದ ಕೂಡಲೇ ಅಲ್ಲಿ ಪ್ರತ್ಯೇಕ ಪೆÇಲೀಸ್ ಠಾಣೆ ಸ್ಥಾಪಿಸಿ ಕಳ್ಳಕಾಕರ ಭಯ ದಿಂದ ಆ ಪ್ರದೇಶವನ್ನು ಮುಕ್ತಗೆuಟಿಜeಜಿiಟಿeಜಳಿಸಬೇಕೆಂದು ಪೃಥ್ವಿರಾಜ್ ಪ್ರಕಟಣೆ ಮೂಲಕ ಒತ್ತಾಯಿಸಿದ್ದಾರೆ.