ಕೊಳಾರ್‍ದಲ್ಲಿ ನಾಗರ ಪಂಚಮಿ ನಿಮಿತ್ತ ಕಬ್ಬಡ್ಡಿ ಟೂರ್ನಿಓಂ ಸಾಯಿ ತಂಡಕ್ಕೆ ಟ್ರೋಫಿ

ಬೀದರ್:ಆ.4: ನಾಗರ ಪಂಚಮಿ ನಿಮಿತ್ತ ತಾಲೂಕಿನ ಕೊಳಾರ್ (ಕೆ) ಗ್ರಾಮದಲ್ಲಿ ಮಂಗಳವಾರ ಕಬ್ಬಡ್ಡಿ ಪದ್ಯಾವಳಿ ಜರುಗುತಿ.

ಬೆಳಗ್ಗೆಯಿಂದ ಸಂಜೆ ವರೆಗೆ ಪಂದ್ಯಗಳು ನಡೆದವು. ಕೊಳಾರ್ (ಕೆ) ಗ್ರಾಮದ ಓಂ ಸಾಯಿ ರಕ್ಷಕ ತಂಡ ಪ್ರಥಮ, ಸಿಬಿ ಕಾಲೇಜು ಭಾಲ್ಕಿ ತಂಡ ದ್ವಿತೀಯ ಹಾಗೂ ಹಳ್ಳಿಖೇಡ್ (ಕೆ) ವಾಲ್ಮಿಕಿ ತಂಡ ತೃತೀಯ ಸ್ಥಾನ ಪಡೆದಿದೆ. ಕ್ರಮವಾಗಿ 15,111, 7,111, 4,111 ರೂ. ನಗದು ಹಾಗೂ ಟ್ರೋಫಿಯನ್ನು ವಿತರಿಸಲಾಯಿತು.

ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ಯುವ ಮುಖಂಡ ಮಹೇಶ ಮೈಲಾರೆ, ಗ್ರಾಮೀಣ ದೇಸಿ ಕ್ರೀಡೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಇಂಥ ಕ್ರೀಡಾಕೂಟಗಳು ನಿರಂತರ ಆಯೋಜನೆ ಮಾಡಬೇಕು ಎಂದು ಹೇಳಿದರು.

ಪ್ರಮುಖರಾದ ಮಹಾದೇವ ಬಿರಾದಾರ್, ಪ್ರವೀಣ ಖೇಳಗೆ, ಸಚಿನ್ ಡಿಗ್ಗಿ, ಅಶೋಕ ಶಂಭು, ಸತೀಶ್ ಕುಲಕರ್ಣಿ ಇತರರಿದ್ದರು.