ಕೊಳವೆ ಬಾವಿ, ಬೋರ್‍ವೆಲ್‍ಗಳ ಮತ್ತು ಟ್ಯಾಂಕರ್ ಮೂಲಕ ನೀರುಸರಬರಾಜು ಮಾಡಲು ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ :ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ

ಕಲಬುರಗಿ,ನ.28: ಜಿಲ್ಲೆಯಾದ್ಯಂತ ಕುಡಿಯುವ ನೀರಿನ ಸಮಸ್ಯೆಗಳನ್ನು ಎದುರಾಗದಂತೆ ತುರ್ತು ಸಂದರ್ಭದಲ್ಲಿ ಕೊಳವೆ ಬಾವಿ, ಬೋರ್‍ವೆಲ್‍ಗಳು ಮತ್ತು ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಅಧಿಕಾರಿಗಳಿಗೆ ಬೆಂಗಳೂರಿನ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರು, ಕಲಬುರಗಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಪಂಕಜ್ ಕುಮಾರ್ ಪಾಂಡೆ ಅವರು ಸೂಚನೆ ನೀಡಿದರು.
ಮಂಗಳವಾರÀದಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಕುಡಿಯುವ ನೀರಿನ ಸಮಸ್ಯೆಗಳು ತಲೆದೂರದ ಹಾಗೆ ಮುಂಜಾಗ್ರತೆ ಕ್ರಮವಾಗಿ ಅಧಿಕಾರಿಗಳು ಕರ್ತವ್ಯದಲ್ಲಿ ಲೋಪ ಆಗದಂತೆ ಕ್ರಮವಹಿಸಲು ಸಂಬಂಧಪಟ್ಟ ಅಧಿಕಾರಿಗಳು ಸೂಚನೆ ನೀಡಿದರು.
ಗ್ರಾಮೀಣ ನೀರು ಸರಬರಾಜು ಕಾರ್ಯನಿರ್ವಾಹಕ ಶಿವಾನಂದ ಅವರು ಮಾತನಾಡಿ, ಈಗಾಗಲೇ ಜಲಾಶಯದಲ್ಲಿ ಕಲಬುರ್ಗಿ ಕುಡಿಯುವ ನೀರಿನ ಸಲುವಾಗಿ 2 ಟಿ.ಎಂ.ಸಿ. ಕಾಯ್ದಿರಿಸಲಾಗಿದೆ ಇದನ್ನು ನಮ್ಮ ಅನುಕೂಲಕ್ಕೆ ತಕ್ಕಂತೆ ಜೆ.ಬಿ.ಸಿ ಜೇವರ್ಗಿ ಬ್ರ್ಯಾಂಚ್ ಕೆನಲ್ ಮೂಲಕ ಸರಡಗಿ ಬ್ಯಾರೇಜ್ ನೀರು ಹರಿಸಲು ಪ್ರಾದೇಶಿಕ ಆಯುಕ್ತರ ಮೂಲಕ ಕ್ರಮಕೈಗೊಳ್ಳಲಾಗಿದೆ ಎಂದು ಸಭೆಯ ಗಮನ ತಂದರು.
ಜಿಲ್ಲೆಯಾದ್ಯಂತ 2023-24 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಜೂನ್ ತಿಂಗಳಿನಲ್ಲಿ ಶೇ. 43% ಮಳೆ ಕೊರತೆಯಿಂದ ಬಿತ್ತನೆ ಕುಂಠಿತಗೊಂಡಿದೆ. ಜುಲೈ ತಿಂಗಳಲ್ಲಿ ಅತಿ ಹೆಚ್ಚು +93% ಮಳೆಯಿಂದಾಗಿ ಪ್ರಮುಖ ಬೆಳೆಗಳಾದ ತೂಗರಿ ಹೆಸರು ಉದ್ದು ಸೋಯಾಬೀನ್ ಇತರೆ ಬೆಳೆಗಳು ಅಂದಾಜು 10531 ಹೆಕ್ಟರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿರುತ್ತದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಸಮ್ಮದ್ ಪಟೇಲ್ ಸಭೆಯಲ್ಲಿ ತಿಳಿಸಿದರು.
ತದನಂತರ ಆಗಸ್ಟ್ ಮತ್ತು ಅಕ್ಟೋಬರ್ ತಿಂಗಳಲ್ಲಿ 80 ರಷ್ಟು ಹೆಚಿನ ಮಳೆ ಕೊರತೆ ಕಾರಣ ಬಿತ್ತಿದ ಬೆಳೆಗಳು ಬೆಳವಣಿಗೆ ಬಂದಿಲ್ಲ ಅವುಗಳು ಕುಂಠಿತಗೊಂಡಿವೆ. ಶೇ. 60 ರಿಂದ 70 ರಷ್ಟು ಇಳುವರಿ ಕಡಿಮೆ ಆಗಿದೆ ಎಂದು ಸಭೆಯ ಗಮನಕ್ಕೆ ತಂದರು.
ಜಿಲ್ಲೆಯಲ್ಲಿ 2 ಲಕ್ಷ 76 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಬರಗಾಲದಿಂದ ಬೆಳೆಹಾನಿಯಾಗಿದ್ದು, ರೈತವಾರು, ಸರ್ವೇ ನಂ. ವಾರು ಬೆಳೆ ಹಾನಿ ವರದಿ ನಮೂನೆ 1 ರಲ್ಲಿ ಸಿದ್ದಪಡಿಸಿಕೊಂಡು ಒಟ್ಟಾರೆ ಜಿಲ್ಲೆಯಲ್ಲಿ 1557 ಕೋಟಿ ರೂ. ಅಂದಾಜು ಬೆಳೆ ಹಾನಿಯಾಗಿದೆ ಎನ್‍ಡಿಆರ್‍ಎಫ್ ಮಾರ್ಗಸೂಚಿಯಂತೆ 257 ಕೋಟಿ ಇನ್‍ಪುಟ್ ಸಬ್ಸಿಡಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದು ಸಭೆಯ ಗಮನಕ್ಕೆ ತಂದರು. ಜಿಲ್ಲೆಯಲ್ಲಿ ಬೀಜ ರಸಗೊಬ್ಬರ ಕೊರತೆ ಇರುವುದಿಲ್ಲ ಹಿಂಗಾರು ಹಂಗಾಮಿನಲ್ಲಿ ಮಳೆಕೊರತೆ ಕೇವಲ 54% ಬಿತ್ತಿನೆಯಾಗಿರುತ್ತದೆ ಇದರಿಂದ ಕಾರ್ಯದರ್ಶಿಗಳು ಮಾತನಾಡಿ ಭೂಮಿಯಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ ಎಂದು ಪ್ರಶ್ನಿಸಿದರು.
ಪ್ರತಿಯೊಂದು ಹೊಬಳ್ಳಿ ಒಂದು ಮೇವಿನ ಬ್ಯಾಂಕ್ ಮಾಡಿಸಲು ಜಿಲ್ಲಾಡಳಿತ ನಿಗದಿಪಡಿಸಲಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ 20 ವಾರಗಳಷ್ಟು ಬೇಕಾಗಿರುವ ಮೇವು ಲಭವಿರುತ್ತದೆ ಹಾಗೂ ಜಿಲ್ಲೆಯ ಎಲ್ಲಾ ಪ್ರಾಣಿಗಳಿಗೆ ಶೇ, 95 ರಷ್ಟು ರೋಗ ನಿರೋಧಕ ಚುಚ್ಚುಮದ್ದು ನೀಡಲಾಗಿದೆ.ಮೇವು ಕೊರತೆ ಉಂಟಾದಲ್ಲಿ ಪಶು ಶಿಬಿರಗಳು ಏರ್ಪಡಿಸಲು ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ 5,70,501 ಪಡಿತರ ಚೀಟಿ ಪೈಕಿ 4,75,910 ಪಡಿತರ ಚೀಟಿದಾರರಿಗೆ 2023 ಆಕ್ಟೋಬರ್ ಮಾಹೆಯವರೆಗೆ ಅನ್ನಭಾಗ್ಯ ನೇರನಗದು ರೂ. 28,19,41.260 ಗಳು ಸಂದಾಯ ಮಾಡಲಾಗಿದೆ ಸಂಬಂಧಪಟ್ಟ ಅಧಿಕಾರಿಗಳು ಹೇಳಿದರು.
ವಸತಿ ಶಾಲೆಗಳಿಗೆ ಪ್ರತಿ ಭೇಟಿ ನೀಡಿ ಮಕ್ಕಳ ಆರೋಗ್ಯದ ಬಗ್ಗೆ ವಿಚಾರಿಸಬೇಕು. ಮಕ್ಕಳಿಗೆ ಚಾಪೆಯ ಮೇಲೆ ಊಟಬಡಿಸಬೇಕು. ವಸತಿ ಕೋಣೆಗಳನ್ನು ಒಳ್ಳೆಯ ಆಹಾರ ನೀಡಬೇಕು ಶುದ್ದ ವಾತವಾರಣ ಸೃಷ್ಟಿಮಾಡಬೇಕೆಂದು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹೀಗೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಅಪರ ಜಿಲ್ಲಾಧಿಕಾರಿ, ರಾಯಪ್ಪ ಹುಣಸಗಿ, ಮಹಾನಗರ ಪಾಲಿಕೆ ಉಪ ಆಯುಕ್ತ ಮಾಧವ ಗಿತ್ತೆ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.