ಕೊಳಗಲ್ ಆಟೋ ದುರಂತ
ಸತ್ತವರ ಕುಟುಂಬಗಳಿಗೆ ಶಾಸಕ ನಾಗೇಂದ್ರ ಸಾಂತ್ವನ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.18: ತಾಲೂಕಿನ   ಕೊಳಗಲ್ಲು ಗ್ರಾಮದಲ್ಲಿ  ಸೆ 14 ರಂದು ಬೆಳಿಗ್ಗೆ ಕೃಷಿ ಕಾರ್ಮಿಕರನ್ನು ಕರೆದುಕೊಂಡು ಹೋಗುವಾಗ  ಚಾಲಕನ ನಿಯಂತ್ರಣ ತಪ್ಪಿ ತುಂಗಭ್ರದ ಎಚ್.ಎಲ್.ಸಿ ಕಾಲುವೆಗೆ
ಆಟೋ ಪಲ್ಟಿಯಾಗಿ ಆರು ಜನ ಸಾವನ್ನಪ್ಪಿದವರ ಮನೆಗಳಿಗೆ ನಿನ್ನೆ  ಸಂಜೆ ಗ್ರಾಮೀಣ  ಶಾಸಕ ಬಿ .ನಾಗೇಂದ್ರ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.
ಘಟನೆಯಲ್ಲಿ ಸಾವನ್ನಪ್ಪಿದ ಕುಡತಿನಿ ಲಕ್ಷ್ಮಿ , ಈಡಿಗರ ಹುಲಿಗೆಮ್ಮ, ನಾಗರತ್ನ, ಪುಷ್ಪವತಿ, ದುರುಗಮ್ಮ ಹಾಗೂ ನಿಂಗಮ್ಮ ಇವರ  ಮನೆಗಳಿಗೆ ಭೇಟಿ ನೀಡಿ ಅವರ ಸಂಬಂಧಿಗಳಿಗೆ ನಿಮ್ಮ ಜೊತೆಗೆ ನಾನು ಇದ್ದೇನೆ ಆತಂಕಪಡಬೇಡಿ. ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಸರ್ಕಾರದಿಂದ ಸೂಕ್ತ ಪರಿಹಾರವನ್ನು ಒದಗಿಸಿಕೊಡುವುದಾಗಿ  ಭರವಸೆ ನೀಡಿದರು.
ಈ ಸಂದರ್ಭದಲ್ಲಿ ತಹಸಿಲ್ದಾರ್ ವಿಶ್ವನಾಥ್,  ಕೊಳಗಲ್ ಗ್ರಾಮದ ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ದಮ್ಮೂರ್ ಹನುಮಪ್ಪ, ನಾಗಿರೆಡ್ಡಿ, ಪ್ರಭು ರೆಡ್ಡಿ, ಸಿದ್ದಮ್ಮನಹಳ್ಳಿ ಹುಲೆಪ್ಪ, ಕೆ.ಬಿ ಅಂಜಿನಿ, ಜಾನೆಕುಂಟೆ ಹನುಮಣ್ಣ, ಮಲ್ಲೇಶಪ್ಪ, ಹಡ್ಲಿಗಿ ಅಂಜಿನಪ್ಪ, ಲಕ್ಷ್ಮಿ ರೆಡ್ಡಿ, ದೇವೇಗೌಡ, ಉಮಾರೆಡ್ಡಿ, ಕೆ.ನಾಗರಾಜ್, ಹೆಚ್ ಶಂಕರ್ ಗ್ರಾಮ ಪಂಚಾಯಿತಿ ಸದಸ್ಯರಾದ ಡಿ.ಗಂಗಾಧರ, ನಾನಿ, ವೆಂಕಟ ರಾಜು, ಶ ಬಿ.ಲಕ್ಷ್ಮಿ ನಾಗರಾಜ್,  ರತ್ನಮ್ಮ ಉಮಾ ರೆಡ್ಡಿ, ಕೆ.ಪಿ ರಾಮಾಂಜಿನಿ, ಊಳೂರು ವೆಂಕಟೇಶ್, ಶ ಹೆಚ್.ಶಿವಮ್ಮ ಚಿದಾನಂದ, ದಿವಾಕರ್ ವಿ.ಎಸ್ ಲಿಂಗಾರೆಡ್ಡಿ ಮೊದಲಾದವರು ಇದ್ದರು.

Attachments area