ಕೊಳಗಲ್ಲು ಘಟನೆ ಮಾಸುವ ಮುನ್ನ ಮತ್ತೊಂದು ದುರ್ಘಟನೆ
ಅಶೋಕ್ ಲೈಲ್ಯಾಂಡ್ ಪಲ್ಟಿ 30ಕ್ಕೂ ಹೆಚ್ಚು ಜನರಿಗೆ ಗಾಯ


‌ಸಂಜೆವಾಣಿ ವಾರ್ತೆ
ತೆಕ್ಕಲಕೋಟೆ, ಸೆ.21: ಕೊಳಗಲ್ಲು ಆಟೋ ಪಲ್ಟಿ ಘಟನೆ ಮಾಸುವ ಮುನ್ನ ಮತ್ತೊಂದು ದುರ್ಘಟನೆ ಸಿರುಗುಪ್ಪ ತಾಲೂಕಿನಲ್ಲಿ ಜರುಗಿದೆ.
ಕೆಂಚನಗುಡ್ಡ ತಾಂಡ ಗ್ರಾಮದ ಜನರು ಕೂಲಿ ಕೆಲಸಕ್ಕೆಂದು ಅಶೋಕ್ ಲೈಲ್ಯಾಂಡ್ ಆಟೋದಲ್ಲಿ ಹೊರಟಿದ್ದರು. ಕೆಂಚನಗುಡ್ಡ ತಾಂಡದಿಂದ ಹಿರೇಹಾಳ್ ಗ್ರಾಮದ ಕಡೆ ಹೋಗುವ ಮಾರ್ಗದಲ್ಲಿ ಬೆಂಚೆ ಕ್ಯಾಂಪ್ ನ ಹತ್ತಿರ ಆಟೋ ಪಲ್ಟಿಯಾಗಿ ಸುಮಾರು 30 ರಿಂದ 40 ಜನರು ಗಾಯಗೊಂಡಿದ್ದಾರೆ. ಅದರಲ್ಲಿ ಸುಮಾರು 30 ಜನರಿಗೆ ಗಂಭೀರವಾಗಿ ಗಾಯಗಳಾಗಿದ್ದು ಪ್ರಥಮ ಚಿಕಿತ್ಸೆಯನ್ನು ತಾಲೂಕು ಆಸ್ಪತ್ರೆಯಲ್ಲಿ ನೀಡಿ.ಹೆಚ್ಚಿನ ಚಿಕಿತ್ಸೆಗಾಗಿ‌ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಕಳಿಸಿಕೊಡಲಾಗಿದೆ ಎಂದು ತಾಲೂಕು ಟಿ ಎಚ್ ಒ ಈರಣ್ಣ ತಿಳಿಸಿದ್ದಾರೆ.