ಕೊಳಗಲ್ಲು ಗ್ರಾಪಂ ಅಧ್ಯಕ್ಷರಾಗಿ ಬಿಜೆಪಿಯಉಳ್ಳೂರು ಗಾದಿಲಿಂಗ ಆಯ್ಕೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜು.26: ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿದ್ದರೂ ತಾಲೂಕಿನ ಕೊಳಗಲ್ಲು ಗ್ರಾಮ ಪಂಚಾಯ್ತಿ ಆಡಳಿತ ಬಿಜೆಪಿ ವಶಕ್ಕೆ ಬಂದಿದೆ.
ಪಂಚಾಯ್ತಿಯ ಎರಡನೇ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಿನ್ನೆ ಚುನಾವಣೆ ನಡೆಯಿತು.
ಎಸ್ಟಿಗೆ ಮೀಸಲಿದ್ದ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ   ಉಳ್ಳೂರು ಗಾಂದಿಲಿಂಗ ಮತ್ತು ಕಾಂಗ್ರೆಸ್ ಬೆಂಬಲಿತ ತಮಟೆ ಹನುಮಂತ ಸ್ಪರ್ಧೆ ಮಾಡಿದ್ದರು.
ಒಟ್ಟು 29 ಸದಸ್ಯರಿರುವ ಪಂಚಾಯ್ತಿಯಲ್ಲಿ ಗಾದಿಲಿಂಗ ಅವರಿಗೆ 18 ಮತ್ತು ಹನುಮಂತ ಅವರಿಗೆ 11 ಮತ ಬಂದು ಬಿಜೆಪಿ‌ ಬೆಂಬಲಿತ ಗಾದಿಲಿಂಗ ಆಯ್ಕೆಯಾಗಿದ್ದಾನೆ.
ಉಪಾಧ್ಯಕ್ಷ ಸ್ಥಾನಕ್ಕೆ  ಜಿ.ಶಾಂತಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಆಯ್ಜೆಯಾದವರು ಇಂದು ನಗರದಲ್ಲಿರುವ ಮಾಜಿ ಸಚಿವ ಬಿ ಶ್ರೀರಾಮುಲು ಅವರ ನಿವಾಸಕ್ಕೆ ಬಂದು ಸಂತಸ ಹಂಚಿಕೊಂಡದ್ದಾರೆ.