ಕೊಳಗಲ್ಲು ಆಟೋ ದುರಂತ
ಮೂವರ ಮೃತದೇಹ ಪತ್ತೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.16: ಕಾಲುವೆಗೆ ಆಟೋ ಉರುಳಿ ಬಿದ್ದು ಆರು ಜನ‌ಜಲ ಸಮಾಧಿಯಾದ ಪ್ರಕರಣದಲ್ಲಿ ಮೂವರ ಮೃತ ದೇಹಗಳು ಪತ್ತೆಯಾಗಿವೆ.
ಆಟೋ ಬಿದ್ದ ದಿನ ಆರು ಜನ ನೀರಿಗೆ ಸಿಲುಕಿ ಆರು ಜನ ಸಾವನ್ನಪ್ಪಿದ್ದರು. ಅದರಲ್ಲಿ ಮೂವರ ಮೃತದೇಹ ಅಂದೇ ಪತ್ತೆಯಾಗಿದ್ದವು.
ಇನ್ನುಳಿದ ಮೃತ ದೇಹಗಳಿಗಾಗಿ ಹುಡುಕಾಟ ನಡೆದಿತ್ತು. ನಿನ್ನೆ ಸಂಜೆ ಬಂಡಿಹಟ್ಟಿ ಬಳಿ ನಾಗರತ್ಮಮ್ಮ ಎಂಬ ಯುವತಿಯ ಶವ ದೊರೆತಿತ್ತು. ಇಂದು ಮಧ್ಯಾಹ್ನ ಈಡಿಗರ ಹುಲಿಗೆಮ್ಮನ ಶವ ಪತ್ತೆಯಾಗಿದೆ.
ಇಂದು ಬೆಳಿಗ್ಗೆ  ಹೊಸಪೇಟೆ ಲಕ್ಷ್ಮೀ  ಎಂಬ ಮಹಿಳೆಯ ಶವ ಆಂದ್ರಪ್ರದೇಶದ ಉಂತಕಲ್ಲು ಬಳಿ ದೊರೆತಿದೆ.
ಶವಗಳ ಹುಡುಕಾಟವನ್ನು ಪೊಲೀಸರಾಗಲಿ, ಅಗ್ನಿ ಶಾಮಕದಳದವರಾಗಲಿ ಈಗ ದೊರೆತಿರುವ ಶವಗಳನ್ನು ಹುಡುಕಿಲ್ಲ. ಕೊಳಗಲ್ಲು ಗ್ರಾಮದ ಜನರೇ ಆ ಕೆಲಸ ಮಾಡಿ ಶವಗಳನ್ನು ಪತ್ತೆಹಚ್ಚಿದ್ದಾರೆ.

Attachments area