ಕೊಳಗಲ್ಲಿನಲ್ಲಿಂದು ಕಾರ ಹುಣ್ಣಿಮೆ ಸಂಭ್ರಮ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜೂ.04: ಇಂದು ರೈತನ ಹೆಗಲಿಗೆ ಹೆಗಲಾಗಿ ದುಡಿಯುವ ಎತ್ತುಗಳನ್ನು ಸಿಂಗರಿಸಿ, ಪೂಜೆ ಮಾಡಿ ಓಟದ ಸ್ಪರ್ಧೆ ನಡೆಸಿ ಸಂಭ್ರಮಿಸುವ ಕಾರ ಹುಣ್ಣಿಮೆ ದಿನ
ಈ ಆಚರಣೆ ಉತ್ತರ ಕರ್ನಾಟಕದಲ್ಲಿ ಹೆಚ್ಚಿನದಾಗಿ ನಡೆಯುತ್ತದೆ. ದಕ್ಷಿಣ ಕರ್ನಾಟಕದಲ್ಲಿ ಎತ್ತುಗಳನ್ನು ಸಂಕ್ರಾಂತಿ ವೇಳೆ ಸಿಂಗರಿಸಿ ಬೆಂಕಿ ಹಾಯಿಸಿ ಸಂಭ್ರಮಿಸುತ್ತಾರೆ.
ಬೇಸಿಗೆ ಮುಗಿದು. ಇನ್ನೇನು ಮುಂಗಾರು ಆರಂಭಗೊಂಡು ಬಿತ್ತನೆ ಕಾರ್ಯ ಆರಂಭಕ್ಕೂ ಮುನ್ನ‌ ಬರುವ ಈ ಹಬ್ಬದ ಆಚರಣೆಗೆಮ ರೈತ ತನ್ನ ಎತ್ತುಗಳ ಕೊಂಬು ಕೆತ್ತಿ. ಬಣ್ಣ ಹಚ್ಚಿ, ಕಾಲಿಗೆ ನಾಲು ಬಡಿಸಿ, ದಿನಾಲು ಮೈ ತೊಳೆದು ಕಾರ ಹುಣ್ಣಿಮೆಯ ಸ್ಪರ್ಧೆಗೆ ಸಿದ್ದಗೊಳಿಸಿರುತ್ತಾನೆ.
ಇಂದು ಸಂಜೆ ಗ್ರಾಮದ ಅಗಸೆ, ಬಯಲಿನಲ್ಲಿ ಎತ್ತುಗಳನ್ನು ಓಟದ ಸ್ಪರ್ಧೆಯಲ್ಲಿ ತೊಡಗಿಸಿ. ಮೊದಲ ಸ್ಥಾನ ಪಡೆದ ಎತ್ತನ್ನು ಮೆರವಣಿಗೆ ಮಾಡಲಾಗುತ್ತದೆ.
ಮೆರವಣಿಗೆ ಮಾಡಲು ಖರ್ಚು ಹೆಚ್ಚೆಂದು,  ಕೃಷಿಯಲ್ಲಿ ಯಂತ್ರಗಳ ಬಳಕೆ ಹೆಚ್ಚಿರುವುದರಿಂದ ಮೊದನಿಂತೆ ಎತ್ತುಗಳ ಬಳಕೆ ಕಡಿಮೆ ಆಗಿ, ಈ ಹಿಂದೆ ಇದ್ದಂತೆ ಕರಿ ಹರಿಯುವ ಪದ್ದತಿ ಮಹತ್ವ ಕಳೆದುಕೊಳ್ಳುತ್ತಿದೆ.
ಆದರೂ ಕೆಲ ಗ್ರಾಮಗಳಲ್ಲಿ ಇನ್ನೂ ಇದರ ಆಚರಣೆ ಇಂದಿಗೂ ರೈತರು ಸಂಭ್ರಮದಿಂದ  ನಡೆಸುತ್ತಾ ಬಂದಿದ್ದಾರೆ.
ತಾಲೂಕಿನ ಕೊಳಗಲ್ಲು ಗ್ರಾಮದಲ್ಲಿ ಇದರ ಆಚರಣೆ ಒಂದಿಷ್ಟು ಭಿನ್ನವಾಗಿದೆ. ಇಂದು ರಾತ್ರಿಯಿಂದ ಬೆಳಗಿನ ಜಾವದ ವರೆಗೆ ಎತ್ತುಗಳಿಗೆ ವಿಶೇಷವಾಗಿ ಸಿಂಗರಿಸಿ ಅದ್ದೂರಿ ಮೆರವಣಿಗೆ ಮಾಡಲಾಗುತ್ತಿದೆ. ಇದನ್ನು ನೋಡಲು ಸುತ್ತಮುತ್ತಲಿನ ಗ್ರಾಮಗಲ ಜನತೆ ಸೇರುತ್ತಾರೆ.