ಕೊಲ್ಹಾರ ಬಳಿ ಟ್ಯಾಂಕರ್ ಅಡ್ಡಗಟ್ಟಿ 32 ಲಕ್ಷ ದರೋಡೆ

ವಿಜಯಪುರ,ಮೇ.18:ಕ್ಯಾಂಟರ್ ಅಡ್ಡಗಟ್ಟಿ 32 ಲಕ್ಷ ನಗದು ದರೋಡೆ ಮಾಡಿ ದುಷ್ಕರ್ಮಿಗಳು ಪರಾರಿಯಾದ ಘಟನೆ ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದ ಹೊರ ಭಾಗದಲ್ಲಿ ದರೋಡೆ ನಡೆದಿದೆ.
ಕಲಬುರಗಿ ಜಿಲ್ಲೆಯ ಜೇವರಗಿ ಪಟ್ಟಣದ ಹತ್ತಿ ವ್ಯಾಪಾರಿ ಚಂದ್ರಕಾಂತ ಕುಂಬಾರ ಅವರಿಗೆ ಸೇರಿದ ಹತ್ತಿಯನ್ನು ಕ್ಯಾಂಟರ್ ಚಾಲಕ ಮಹಾಂತೇಶ ಕುಂಬಾರ ಹಾಗೂ ಸಹಾಯಕ ಮಲ್ಲು ಕೊಡಚಿ ಅವರು ಧಾರವಾಡ ತಾಲೂಕಿನ ಅಮ್ಮಿನಬಾವಿಯಲ್ಲಿ ಇರುವ ಹತ್ತಿ ಕಾರಖಾನೆಗೆ ಹೋಗಿ ಹತ್ತಿ ಮಾರಾಟ ಮಾಡಿ 32 ಲಕ್ಷ ರೂಪಾಯಿ ತಗೆದುಕೊಂಡು ಊರಿಗೆ ವಾಪಸ್ಸಾಗುತ್ತಿದ್ದಾಗ ಕೊಲ್ಹಾರ ಬಳಿ ದುಷ್ಕರ್ಮಿಗಳು ದರೋಡೆ ಮಾಡಿದ್ದಾರೆ.
ಕ್ಯಾಂಟರ್ ಗೆ ಬುಲೆರೋ ವಾಹನದಿಂದ ಅಡ್ಡಗಟ್ಟಿದ ಖದೀಮರು, ನಂತರ ಕ್ಯಾಂಟರ್ ಗಾಜಿಗೆ ಕಲ್ಲು, ರಾಡ್ ನಿಂದ ಹೊಡೆದು ಹಲ್ಲೆ ನಡೆಸಿ ಕಣ್ಣಿಗೆ ಖಾರದ ಪುಡಿ ಎರಚಿ
ಕ್ಯಾಂಟರ್ ನಲ್ಲಿಟ್ಟಿದ್ದ 32 ಲಕ್ಷ ರೂಪಾಯಿ ದರೋಡೆ ಮಾಡಿ ಪರಾರಿಯಾಗಿದ್ದಾರೆ.
ದರೋಡೆಕೋರರಿಂದ ಹಲ್ಲೆಗೀಡಾದ ಮಹಾಂತೇಶ ಹಾಗೂ ಮಲ್ಲು ಕೊಡಚಿಗೆ ಕೊಲ್ಹಾರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸ್ಥಳಕ್ಕೆ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೊಲ್ಹಾರ ಪೆÇಲೀಸರು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.