ಕೊಲ್ಹಾರದಿಂದ ಯಡೂರಿಗೆ ಪಾದಯಾತ್ರೆ

ಕೊಲ್ಹಾರ:ಏ.6:ಪಟ್ಟಣದಿಂದ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಸುಕ್ಷೇತ್ರ ಯಡೂರು ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ 30ನೇ ವರ್ಷದ ಪಾದಯಾತ್ರೆಗೆ ಚಾಲನೆ ನೀಡಲಾಯಿತು.
ಪಟ್ಟಣದ ಗಣಪತಿ ಗೋಕಾಂವಿ ಇವರ ಮನೆಯಿಂದ ಶ್ರೀ ವೀರಭದ್ರೇಶ್ವರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಸಕಲ ವಾದ್ಯ ಮೇಳದೊಂದಿಗೆ ಪಾದಯಾತ್ರಿಕರನ್ನು ಬೀಳ್ಕೊಡಲಾಯಿತು,
ಈ ಸಂದರ್ಭದಲ್ಲಿ ಪಾದಯಾತ್ರೆ ಕಮಿಟಿಯ ಸಿ ಎಂ ಗಣಕುಮಾರ, ವಿ ಎಂ ಶಾವಿಗೊಂಡ, ರಾಚಯ್ಯ ಗಣಕುಮಾರ, ಈರಣ್ಣ ಔರಸಂಗ, ಶ್ರೀಶೈಲ್ ಗೋಕಾಂವಿ ಮಲ್ಲೇಶಪ್ಪ ಮೇಲಗಿರಿ, ಈರಣ್ಣ ಗೋಕಾವಿ, ವಿಜಯ ಬಾಟಿ, ಪ್ರಕಾಶ್ ಮಠಪತಿ, ವಿವೇಕಾನಂದ ಗಣಕುಮಾರ, ರಾಚಯ್ಯ ಮಠಪತಿ, ಸಹಿತ ಅನೇಕರು ಉಪಸ್ಥಿತರಿದ್ದರು.