ಕೊಲೆ, ಸುಲಿಗೆ ಗೂಂಡಾಗಿರಿ ಬಂದ್:ಯತ್ನಾಳ

ವಿಜಯಪುರ:ಜ.13: ನಗರದಲ್ಲಿ ಕೊಲೆ, ಸುಲಿಗೆ, ಗುಂಡಾಗಿರಿ ಸಂಪೂರ್ಣ ಬಂದ ಮಾಡಲಾಗಿದೆ. ಮಹಿಳೆಯರು ಹಗಲು ಹೊತ್ತಿನಲ್ಲೂ ಓಡಾಡದ ಪರಿಸ್ಥಿತಿಯಿತ್ತು ಎಂದು ನಗರ ಶಾಸಕ ಬಸನಗೌಡ ರಾ ಪಾಟೀಲ ಯತ್ನಾಳ ಅವರು ಹೇಳಿದರು.

ಮಹಾನಗರ ಪಾಲಕೆ ವಾರ್ಡ ನಂ.21ರ ವ್ಯಾಪ್ತಿಯ ಮಹಾಲಕ್ಷ್ಮೀ ಲೇಔಟ್ ದಲ್ಲಿ ಒಳಚರಂಡಿ ಹಾಗೂ ಸಿಸಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ನಗರದಲ್ಲಿ ಸುರಕ್ಷತೆ ಬಹಳ ಮಹತ್ವದ್ದು ಎಂದರು.

ಮಾರುಕಟ್ಟೆಗೆ ತೆರಳಿದಾಗ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ನಿವಾರಿಸಲು ವಿವಿಧೆಡೆ ಎಂಟು ಕಡೆಗೆ ಹೈಟೆಕ್ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಎರಡ್ಮೂರು ಏರ್ ಕಂಡಿಶನ್ ಮಾಡಿರುವುದು ವಿಶೇಷ. ಯಾವ ಮೂಲಸೌಕರ್ಯ ಕೊರತೆ ಇಲ್ಲದಂತೆ, ಕರ್ನಾಟಕದಲ್ಲೇ ಮಾದರಿ ನಗರ ಮಾಡಿರುವ ಹೆಮ್ಮೆಯಿದೆ ಎಂದು ಹೇಳಿದರು.

ಜನರ ಸಮಸ್ಯೆ ಆಲಿಸಲು ಮಹಾನಗರ ಪಾಲಿಕೆ ಸದಸ್ಯರಿಗೆ ಪ್ರತಿನಿತ್ಯ ಎರಡು ಗಂಟೆ ವಾರ್ಡಗಳಲ್ಲಿ ಸಂಚರಿಸಲು ತಿಳಿಸಿರಿವೆ. ಏನೇ ಸಮಸ್ಯೆಗಳಿದ್ದರೂ ಗಮನಕ್ಕೆ ತನ್ನಿ. ಇನ್ನೂ 50 ಕೋಟಿ ಅನುದಾನ ಬರುತ್ತಿದೆ ಎಂದು ತಿಳಿಸಿದರು.

ಇದಕ್ಕೂ ಮೊದಲು ಗಣೇಶ ನಗರದ ಮುಖ್ಯರಸ್ತೆಯಲ್ಲಿ ಇರುವ 30ಕ್ಕೂ ಹೆಚ್ಚು ಮರಗಳನ್ನು ರಸ್ತೆ ಅಭಿವೃದ್ಧಿ ಹೆಸರಲ್ಲಿ ಕಡಿತಗೊಳಿಸದೆ, ಉಳಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಮಹಾನಗರ ಪಾಲಿಕೆ ಸದಸ್ಯರಾದ ಮಲ್ಲಿಕಾರ್ಜುನ ಗಡಗಿ, ಪ್ರೇಮಾನಂದ ಬಿರಾದಾರ, ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಬಿ.ಎಂ.ಪಾಟೀಲ, ಮುಖಂಡ ಪಾಂಡು ಸಾಹುಕಾರ, ಎಂಜಿನಿಯರ್ ಜಿ.ಆರ್.ಕೊಪ್ಪ ಮತ್ತಿತರರು ಇದ್ದರು.