
ವಿಜಯಪುರ,ಮಾ 24: ಅನುಮಾನಾಸ್ಪದ ರೀತಿಯಲ್ಲಿ ಲಾಜ್ಡ್ ಒಂದರ ರೂಮ್‍ನಲ್ಲಿ ಇಬ್ಬರ ಶವ ಪತ್ತೆಯಾಗಿರುವ ಘಟನೆ ವಿಜಯಪುರ ನಗರದಲ್ಲಿ ಇಂದು ನಡೆದಿದೆ.
ಬಳ್ಳಾರಿಯ ಸಿ ಇಂದ್ರಕುಮಾರ ಹಾಗೂ ಮತ್ತೋರ್ವನ ಶವ ರಕ್ತದ ಮಡುವಿನಲ್ಲಿ ಪತ್ತೆಯಾಗಿದೆ. ಆದರೆ ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ಪೆÇಲೀಸ ತನಿಖೆ ಬಳಿಕ ತಿಳಿದು ಬರಬೇಕಿದೆ. ಸ್ಥಳಕ್ಕೆ ಪೆÇಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಘಟನಾ ಸ್ಥಳಕ್ಕೆ ಎಸ್ಪಿ ಎಚ್‍ಡಿ ಆನಂದಕುಮಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಎಸ್ಪಿ ಆನಂದಕುಮಾರ ಮಾತನಾಡಿ, ಓರ್ವನ ಹತ್ಯೆಗೈದು ತಾನು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಂದ್ರಕುಮಾರ ಹಾಗೂ ಓರ್ವನ ಶವ ಒಬ್ಬರ ಮೇಲೆ ಒಬ್ಬರ ಪತ್ತೆಯಾಗಿದೆ. ಇದು ಹತ್ಯೆ ಹಾಗೂ ಆತ್ಮಹತ್ಯೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ಮತ್ತೋರ್ವನ ಬೈಕ್ ಪತ್ತೆಯಾಗಿದೆ. ತನಿಖೆ ಕೈಗೊಳ್ಳಲಾಗಿದೆ ಎಂದರು.