ಕೊಲೆ ಮಾಡಿದ ಏಳು ಜನ ಆರೋಪಿಗಳನ್ನು ಕೊಲೆಯಾದ 3 ದಿನಗಳಲ್ಲಿಯೇ ಬಂಧನಃ ಅನುಪಮ ಅಗರವಾಲ

ವಿಜಯಪುರ, ಜೂ.1-ತಲವಾರ, ಕಂಜರ, ಬೆಸ್ ಬಾಲ್ ಬ್ಯಾಟಗಳಿಂದ ಕಂಜರನಿಂದ ಎದೆಗೆ, ಹೊಟ್ಟೆಗೆ ಜೋರಾಗಿ ಚುಚ್ಚಿ ಬಾರಿ ರಕ್ತಗಾಯಪಡಿಸಿದ್ದಲ್ಲದೆ ಮೈಕೈಗೆ ಬೆಸ್ ಬಾಲ್ ಬ್ಯಾಟಗಳಿಂದ ಹೊಡೆದು ರಕ್ತಗಾಯ ಪಡಿಸಿ, ಕೊಲೆ ಮಾಡಿದ ಏಳು ಜನ ಆರೋಪಿಗಳನ್ನು ಕೊಲೆಯಾದ 3 ದಿನಗಳಲ್ಲಿಯೇ ಬಂಧಿಸಲಾಗಿದೆ ಎಂದು ಪೋಲಿಸ್ ವರಿಷ್ಠಾಧಿಕಾರಿ ಅನುಪಮ ಅಗರವಾಲ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಬಂಧಿತ ಆರೋಪಿಗಳನ್ನು 1) ಆಸೀಪ್ ತಂದೆ ಖಾಜೆಸಾಬ ಮಳ್ಳಿ, 2) ರಪೀಕ ತಂದೆ ಸೈಯದ ನಂದ್ಯಾಳ, 3) ಶೋಹೆಬ ತಂದೆ ಹಾಜಿಪಾಷ್ಯಾ ಖಾದ್ರಿ, 4) ಸದ್ದಾಂ ತಂದೆ ಸಲಾವುದ್ದಿನ ಜಹಾಗಿರದಾರ, 5) ಇಮ್ರಾನ ತಂದೆ ಮೌಲಾಲಿ ಜಮಖಂಡಿ, 6) ಸದ್ದಾಮ ತಂದೆ ಮೌಲಾಲಿ ಜಮಖಂಡಿ ಹಾಗೂ 7) ಅಜ್ಮಲ್ ತಂದೆ ಬಸೀರ್ ಜಮಾದಾರ ಸಾ. ಎಲ್ಲರೂ ವಿಜಯಪುರದ ನವಿ ಗಲ್ಲಿ ಇಬ್ರಾಹಿಮ ರೋಜಾ ಹತ್ತಿರ ಮತ್ತು ಇನ್ನು 3-4 ಜನರು. ಕೂಡಿ ಕೊಲೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಕಳೆದ ದಿ.28.05.2021 ರಂದು ರಾತ್ರಿ 10.00 ಗಂಟೆ ಸುಮಾರಿಗೆ ಪಿರ್ಯಾದಿ ಯಾಸೀನ ತಂದೆ ಮೋದಿನಪಾಷ್ಯಾ ಇನಾಮದಾರ ಇವನ ತಮ್ಮನಾದ ಮೋಸಿನ ತಂದೆ ಮೋದಿನಬಾಶಾ ಇನಾಮದಾರ ಈತನು ಓಣಿಯಲ್ಲಿ ರಸ್ತೆಗೆ ಅಡ್ಡಲಾಗಿ ಹಾಕಿದ ಮಂಟಪದ ಕಬ್ಬಿಣದ ಆ್ಯಂಗಲ್ ತೆಗೆದಿದ್ದಕ್ಕೆ ಪಿರ್ಯಾದಿಯ ತಮ್ಮನ ಜೊತೆ ತಕರಾರು ಮಾಡಿ, ಪಿರ್ಯಾದಿಗೆ ಮತ್ತು ಇದರಲ್ಲಿ ಮೃತ ಮೋಸೀನ ತಂದೆ ಮೋದೀನಪಾಷ್ಯಾ ಇನಾಮದಾರ ಈತನಿಗೆ ತಲವಾರಿನಿಂದ ಹಲ್ಲೆ ಮಾಡಿದ್ದಲ್ಲದೆ ಇದೇ ಸಿಟ್ಟಿನಿಂದ ಮೃತನಿಗೆ ಕೊಲೆ ಮಾಡುವ ಉದ್ದೇಶದಿಂದ ದಿ.29.05.2021 ರಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ಇಬ್ರಾಹಿಮ್ ರೋಜಾ ರಸ್ತೆ ಹೋರ್ತಿಯವರ ಮನೆಯ ಹತ್ತಿರ ಸೈಕಲ್ ಮೋಟಾರ್ ಮೇಲೆ ಹೋರಟ ಮೃತ ಮೋಸಿನ ಇನಾಮದಾರ ಈತನನ್ನು ಕೊಲೆ ಮಾಡಿದ್ದಾರೆ ಎಂದು ವಿವರಣೆ ನೀಡಿದ್ದಾರೆ.
ಈ ಕುರಿತಂತೆ ಕೊಲೆ ಮಾಡಿದ ಬಗ್ಗೆ ಗಾಂಧಿ ಚೌಕ ಪೊಲೀಸ್ ಠಾಣೆ ಗುನ್ನೆ ನಂ: 113/2021 ಕಲಂ: 143, 147, 148, 341, 324, 307,302, 504, 506 ಸಹಿತ 149 ಐ.ಪಿ.ಸಿ ನೇದ್ದಕ್ಕೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಪೋಲಿಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್, ಪೊಲೀಸ ಅಧೀಕ್ಷಕರು ವಿಜಯಪುರ, ರಾಮ್ ಎಲ್ ಅರಸಿದ್ದಿ, ಹೆಚ್ಚುವರಿ ಜಿಲ್ಲಾ ಪೊಲೀಸ ಅಧೀಕ್ಷಕರು, ವಿಜಯಪುರ ಹಾಗೂ ಕೆ.ಸಿ.ಲಕ್ಷ್ಮೀನಾರಾಯಣ. ಈ ಪೊಲೀಸ್ ಉಪಾಧೀಕ್ಷಕರು, ವಿಜಯಪುರ ರವರ ಮಾರ್ಗದರ್ಶನದಲ್ಲಿ, ರವೀಂದ್ರ ಕೆ ನಾಯ್ಕೋಡಿ ಪಿಐ ಗಾಂಧಿ ಚೌಕ ಪೊಲೀಸ್ ಠಾಣೆ, ಎಸ್.ಬಿ.ಗೌಡರ ಪಿ.ಎಸ್.ಐ (ಕಾ&ಸು) ಗಾಂಧಿಚೌಕ, ಶ್ರೀಮತಿ ಪಿ.ಎಮ್.ಚೌರ ಮ.ಪಿ.ಎಸ್.ಐ, ಆರ್.ಬಿ.ಕೂಡಗಿ (ಸಿಬಿ) ಗಾಂಧಿಚೌಕ, ಹಾಗೂ ಸಿಬ್ಬಂದಿ ಜನರಾದ ಎಚ್.ಎಚ್. ಜಮಾದಾರ, ಬಿ.ಕೆ ಗುಡುಮನಿ, ಜಿ ವಾಯ್ ದಾಸರ, ಎಸ್.ವ್ಹಿ ಜೋಗಿನ, ಎನ್.ಕೆ.ಮುಲ್ಲಾ, ಬಶೀರಅಹ್ಮದ.ಎಂ.ಶೇಖ, ರಾಮನಗೌಡ ಬಿರಾದಾರ, ಎ.ಎಚ್ ಹಳ್ಳಿ, ಬಸವರಾಜ ದಿನ್ನಿ, ಮಹೇಶ ಐನಾಪೂರ, ಸಿದ್ದು ಬಿರಾದಾರ, ಎಸ್.ಎಸ್ ಹಂಡಿ, ವಿ.ಎನ್.ಶಹಾಪುರ ರವರನ್ನೊಳಗೊಂಡ ತನಿಖಾ ತಂಡವು ಇಂದು ದಿ. 31.05.2021 ರಂದು 07 ಜನ ಆರೋಪಿತರನ್ನು ಕೊಲೆಯಾದ 3 ದಿನಗಳಲ್ಲಿಯೇ ಅತೀ ಶಿಘ್ರವಾಗಿ ಪತ್ತೆ ಮಾಡಿ ದಸ್ತಗಿರಿ ಮಾಡಿದ್ದು ಇರುತ್ತದೆ. ಅಲ್ಲದೆ ಕೃತ್ಯಕ್ಕೆ ಬಳಸಿದ ಎರಡು ತಲವಾರ, ಒಂದು ಬೇ ಬಾಲ್ ಬ್ಯಾಟ್ ಒಂದು ಕಂಜರ ಮತ್ತು ಒಂದು ಕಾರ್ ಜಪ್ತ ಮಾಡಿದ್ದು ಇರುತ್ತದೆ. ಈ ಪ್ರಕರಣದ ಪತ್ತೆ ಕಾರ್ಯದಲ್ಲಿ ಕಾರ್ಯನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿಗಳ ಕರ್ತವ್ಯವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.