
ದಾವಣಗೆರೆ.ಆ.೯; ಹಣಕಾಸು ವಿಚಾರದಲ್ಲಿ ನಡೆದ ಕೊಲೆಗೆ ಸಂಬಂಧಿಸಿದಂತೆ ಕೊಲೆ ಮಾಡಿದ ಆರೋಪಿಯನ್ನು ದಾವಣಗೆರೆ ಜಿಲ್ಲಾ ಅಪರಾಧ ವಿಭಾಗದ ಶ್ವಾನದಳದ ತಾರಾ ಎಂಬ ಶ್ವಾನವು ಪತ್ತೆ ಹಚ್ಚುವಲ್ಲಿ ಯಶಸ್ವಿ ಆಗಿದೆ.
ಕೊಲೆ ಮಾಡಿದ ಆರೋಪಿಯನ್ನು ಶ್ರೀರಾಮ ನಗರದ 32ವರ್ಷದ ಶಿವಯೋಗಿಶ್ ಎಂದು ಪೊಲೀಸರು ತಿಳಿಸಿದ್ದು, ಕಟ್ಟಡ ನಿರ್ಮಾಣದ ತರಗಾರ ಮೇಸ್ತಿಯಾಗಿದ್ದ ಶಿವಯೋಗಿಶ್ ತನ್ನ ಬಳಿ ಕೆಲಸ ಮಾಡುತ್ತಿದ್ದ ನರಸಿಂಹ ಎಂಬಾತನಿಗೆ 35ಸಾವಿರ ರೂಗಳನ್ನು ತನ್ನ ಬಳಿ ಕೆಲಸಕ್ಕೆ ಬರುವಂತೆ ಮುಂಗಡವಾಗಿ ನೀಡಿದ್ದ.ಕೆಲಸಕ್ಕೆ ಕರೆದಾಗಲೆಲ್ಲಾ ನೆಪ ಹೇಳಿ ತಪ್ಪಿಸಿಕೊಳ್ಳುತ್ತಿದ್ದ ನರಸಿಂಹನಿಗೆ ಶಿವಯೋಗಿಶ್ ತನ್ನ ಬಳಿ ಪಡೆದಿದ್ದ ಹಣವನ್ನು ವಾಪಾಸು ಕೊಡುವಂತೆ ಕೇಳಿದ್ದ. ಇತ್ತ ಕೆಲಸಕ್ಕೂ ಬಾರದೇ, ಹಣವನ್ನು ವಾಪಾಸು ಕೊಡದೇ ಸತಾಯಿಸುತ್ತಿದ್ದ. ಈ ಕುರಿತು ದಾವಣಗೆರೆಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದ ಕಾರಣ ಪೊಲೀಸರು ಆತನನ್ನು ಜೈಲಿಗೆ ಕಳುಹಿಸಿದ್ದರು.
ಇದೇ ದ್ವೇಷದಿಂದ ಜೈಲಿನಿಂದ ಹೊರಬಂದ ಮೇಲೂ ನನ್ನ ಮೇಲೆ ಸಿಟ್ಟಿನಿಂದ ದ್ವೇಷ ಸಾಧಿಸುತ್ತಿದ್ದ. ಇದರಿಂದ ಬೇಸತ್ತಿದ್ದ ಶಿವಯೋಗಿಶ್ ನರಸಿಂಹನನ್ನು ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಮಲ್ಲಶೆಟ್ಟಿ ಹಳ್ಳಿ ಬಳಿ ಕ್ರಾಸ್‍ನಲ್ಲಿ ಕಟ್ಟಿಗೆ, ಕಣಿಗೆಯಿಂದ ಹೊಡೆದ ಪರಿಣಾಮ ಮೃತ ಪಟ್ಟಿದ್ದು, ಕೊಲೆ ಮಾಡಿದ್ದು ನಾನೇ ಎಂದು ತಪ್ಪನ್ನು ಒಪ್ಪಿಕೊಂಡಿರುತ್ತಾನೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ನೀಡಿರುತ್ತಾರೆ ಎಂದು ಜಿಲ್ಲಾ ಪೊಲೀಸ್ ಕಚೇರಿಯ ಪ್ರಕಟಣೆ ತಿಳಿಸಿದೆ