ಕೊಲೆ ಬೆದರಿಕೆ ಹಾಕಿಲ್ಲ; ಮಾಜಿ ಪೊಲಿಸ್ ಸ್ಪಷ್ಟನೆ

ದಾವಣಗೆರೆ.ಜೂ.೫; ನನ್ನ ಮೇಲಿನ ಆರೋಪ  ಸತ್ಯಕ್ಕೆ ದೂರವಾದ ಸಂಗತಿ.ನಾನು ಯಾರನ್ನೂ ಕೊಲೆ ಮಾಡಲು ಸುಪಾರಿ ನೀಡಿಲ್ಲ ನನಗೂ  ಹಲವಾಗಲು ಪೊಲೀಸ್ ಠಾಣೆಯಲ್ಲಿ ಆಗಿರುವ ಪ್ರಕರಣಕ್ಕೂ ಯಾವುದೇ ಸಂಬಂಧವಿರುವುದಿಲ್ಲ ಎಂದು ಮಾಜಿ ಪೊಲೀಸ್ ಬಿ.ವಿಶ್ವನಾಥ್ ತಮ್ಮ ಮೇಲಿನ ಆರೋಪಕ್ಕೆ ಸ್ಪಷ್ಟನೆ ನೀಡಿದ್ದಾರೆ.ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರುಏ.9 ರಂದು ನನ್ನ ಚಿಕ್ಕಪ್ಪನ ಮಗನಾದ  ತಿರುಮಲನಾಯ್ಕ ಮನೆಯಲ್ಲಿದ್ದ ಇವರನ್ನು ಸಂತೋಷ ಕೆ , ವಿನಯಕುಮಾರ್ , ಗಿರೀಶ್ ನಾಯ್ಕ ಇವರುಗಳು  ಕೋಳಿಫಾರಂ ಬಳಿ ಕರೆದುಕೊಂಡು ಹೋಗಿ ಕೊಲೆ ಮಾಡುವ ಉದ್ದೇಶದಿಂದ ಎದೆಗೆ , ಹೊಟ್ಟೆಗೆ , ಕೈಗೆ ಬಾಟಲ್‌ನಿಂದ ಗುದ್ದಿ ಸಾಯಿಸಲು ಯತ್ನಿಸಿದ್ದರು.ಈ ವೇಳೆ ತಿರುಮಲನಾಯ್ಕ ತಪ್ಪಿಸಿಕೊಂಡಿದ್ದರು. ಈ ಸಂಬಂಧ ಹಲವಾಗಲು ಪೊಲೀಸ್ ಠಾಣೆಯಲ್ಲಿ   3 ಜನರ ಮೇಲೆ ಪ್ರಕರಣ ದಾಖಲಾಗಿದ್ದುಪೊಲೀಸರು ಸೂಕ್ತ ತನಿಖೆ ನಡೆಸುತ್ತಿದ್ದಾರೆ . ಅವರ ಮೇಲಾದ ಈ ಪ್ರಕರಣದ ದಾರಿ ತಪ್ಪಿಸಲು ವಿನಾಕಾರಣ ಸುಫಾರಿ ನೆಪವೊಡ್ಡಿ , ಪತ್ರಿಕಾಗೋಷ್ಠಿ ನಡೆಸುವುದು , ಪೊಲೀಸರ ಮೇಲೆ ಆರೋಪ ಮಾಡುವುದು ಮಾಡುತ್ತಿದ್ದಾರೆ . ಗ್ರಾ.ಪಂ ಚುನಾವಣೆಯಲ್ಲಿ ಪರಾಭವಗೊಂಡಿದ್ದರಿಂದ ಹಾಗೂ ರಾಜಕೀಯ ದುರುದ್ದೇಶದಿಂದ ನಮ್ಮ ಮೇಲೆ ಹಗೆ ಸಾಧಿಸುತ್ತಿದ್ದಾರೆ ಹಾಗೂ ತಮ್ಮ ಮೇಲಿನ ಪ್ರಕರಣದ ದಾರಿ ತಪ್ಪಿಸಲು ಈ ರೀತಿ ಮಾಡುತ್ತಿದ್ದಾರೆ ಎಂದರು.ಸುದ್ದಿಗೋಷ್ಠಿಯಲ್ಲಿ ತಿರುಮಲ,ಕಿರಣ್ ಕುಮಾರ್ ಇದ್ದರು.