ಕೊಲೆ ಪ್ರಕರಣ : ಮೂವರು ಆರೋಪಿಗಳ ಬಂಧನ

ಬೀದರ ನ 19: ಇಲ್ಲಿನ ಮುಲ್ತಾನಿ ಕಾಲೋನಿಯ ಮಹ್ಮದ್ ಎಜಾಜ್ ತಂದೆ ಸಿರಾಜ (32 ) ಎಂಬಾತನ ಕೊಲೆ ಪ್ರಕರಣದ ಮೂವರು ಆರೋಪಿಗಳನ್ನು ಬೀದರ ಪೊಲೀಸರು ಬಂಧಿಸಿದ್ದಾರೆ.
ಎಸ್.ಎಮ್ ಕೃಷ್ಣಾ ನಗರದ ಮೂರು ಜನ ಆರೋಪಿತರಿಂದ ಕೃತ್ಯಕ್ಕೆ ಬಳಸಿದ ಆಟೋ, ಕಮ್ಮಾಕತ್ತಿ ಮತ್ತು ಚಾಕು ಜಪ್ತಿ ಮಾಡಿಕೊಂಡಿದ್ದಾರೆ. ಈ ಕೊಲೆ ನಡೆಯಲು ಆರೋಪಿತರ ಹಾಗೂ ಮೃತನ ನಡುವೆ ಈ ಹಿಂದೆ ನಡೆದ ಜಗಳವೇ ಮೂಲ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನವೆಂಬರ್ 16 ರಂದು ಮುಂಜಾನೆ ಬೀದರಚಿದ್ರಿ ರಸ್ತೆಯ ಶ್ರೀ ಫಂಕ್ಷನ ಹಾಲ ಎದುರಿಗೆ ಹಳೆ ಸಪ್ನಾ ಟಾಕೀಜ ಹತ್ತಿರ ಖಾಲಿ ಜಾಗೆಯ ಕೌಂಪೌಂಡ ಹಿಂದೆ ಒಂದು ಅಪರಿಚಿತ ಮೃತ ದೇಹ ಪತ್ತೆಯಾಗಿತ್ತು.ಮಾಹಿತಿ ಬಂದ ಮೇರೆಗೆ ಘಟನೆ ಸ್ಥಳಕ್ಕೆ ಹೋಗಿ ಮೃತವ್ಯಕ್ತಿಯ ಪತ್ತೆ ಕುರಿತು ಪೊಲೀಸರು ವಿಚಾರಿದಾಗ ಮೃತ ಪಟ್ಟವ್ಯಕ್ತಿ ಬೀದರ ಮುಲ್ತಾನಿ ಕಾಲೋನಿ ನಿವಾಸಿ ಮೊಹ್ಮದ ಎಜಾಜ ಎಂದು ಮೃತನ ತಂದೆ ಮಹ್ಮದ ಸಿರಾಜ ತಂದೆ ವಲಿಮಹ್ಮದಖಾನ ಗುರುತಿಸಿ,ಸಲ್ಲಿಸಿದ ದೂರಿನ ಮೇರೆಗೆ ಗಾಂಧಿಗಂಜ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು.
ಆರೋಪಿತರ ಪತ್ತೆ ಕುರಿತುಹೆಚ್ಚುವರಿ ಪೊಲೀಸ್ ಅಧೀಕ್ಷಕ ಗೋಪಾಲ್.ಎಮ್.ಬ್ಯಾಕೋಡ,ಪೊಲೀಸ್ ಉಪಾಧೀಕ್ಷಕ ಕೆ.ಎಮ್. ಸತೀಷ ಮಾರ್ಗದರ್ಶನದಲ್ಲಿ ಗಾಂಧಿಗಂಜ ಪಿಐಜಿ.ಎಸ್ ಬಿರಾದಾರ ನೇತೃತ್ವದಲ್ಲಿ ಗಾಂಧಿಗಂಜ ಪೊಲೀಸ್ ಠಾಣೆಯ ಜಗದೀಶ ನಾಯ್ಕ್, ಪಿಎಸ್‍ಐ (ಕಾಸೂ) ಸೈಯದ್ ಪಟೇಲ್ ಪಿ.ಎಸ್.ಐ (ತನಿಖೆ), ಪ್ರೋ.ಪಿ.ಎಸ್.ಐ ಸಿದ್ದಣ್ಣ ಗಿರಿಗೌಡರ, ಅಶೋಕ ಕೊಟೆ ಎಎಸ್‍ಐ, ಹಾಗೂ ಸಿಬ್ಬಂದಿಯವರಾದ ಡೇವಿಡ್, ನವೀನ್, ರಮೇಶ, ರಾಜಕುಮಾರ, ಅಶೋಕ, ಚಂದು ಪಾಂಚಾಳ,ದತ್ತು ಎ.ಪಿ.ಸಿ ರವರ ಒಂದು ವಿಶೇಷ ತಂಡವನ್ನು ರಚಿಸಲಾಯಿತು.
ಖಚಿತ ಮಾಹಿತಿ ಮೇರೆಗೆ ತಂಡ ಆರೋಪಿಗಳನ್ನು ಬಂಧಿಸಿದೆ.
ಮೃತ ಮಹ್ಮದ್ ಎಜಾಜ್ ರಾತ್ರಿ ಸಮಯದಲ್ಲಿ ಎಸ್.ಎಮ್.ಕೃಷ್ಣಾ ನಗರ ಗ್ರಾಮಕ್ಕೆ ಹೊದಾಗ ಆರೋಪಿತರೆಲ್ಲರು ಎಜಾಜ್‍ನಿಗೆ ಸಮಜಾಯಿಸಿಫುಸಲಾಯಿಸಿ ಆಟೋದಲ್ಲಿ ಕೂಡಿಸಿಕೊಂಡು ಚಿಟ್ಟಾ ಅರಣ್ಯ ಪ್ರದೇಶದಲ್ಲಿ ಕರೆದುಕೊಂಡು ಹೋಗಿ ಮಧ್ಯ ರಾತ್ರಿಯಲ್ಲಿ ನಾಲ್ಕು ಜನ ಆರೋಪಿತರುಮಹಮ್ಮದ್ ಎಜಾಜ್‍ನಿಗೆ ಕಮ್ಮಾಕತ್ತಿಯಿಂದ ಮತ್ತು ಚಾಕುವಿನಿಂದ ಮನಬಂದಂತೆ ದೇಹದ ಎಲ್ಲಾಭಾಗಗಳಲ್ಲಿ ಹೊಡೆದು ಭಾರಿ ರಕ್ತ ಗಾಯ ಮಾಡಿ ಕೊಲೆ ಮಾಡಿ. ನಂತರ ಸಾಕ್ಷಿ ನಾಶ ಮಾಡಲು ಮೃತ ದೇಹವನ್ನು ಕೌದಿಹಾಗೂ ಗೋಣಿ ಚೀಲದಲ್ಲಿ ಹಗ್ಗದಿಂದ ಕಟ್ಟಿ ಆಟೋದಲ್ಲಿ ಹಾಕಿ ಬೀದರ
ನಗರದ ಚಿದ್ರಿ ರಸ್ತೆಯ ಶ್ರೀ ಫಂಕ್ಷನ್ ಹಾಲ ಎದುರುಗಡೆ ಬಿಸಾಡಿದ್ದಾರೆ.ಕೊಲೆ ಪ್ರಕರಣವನ್ನು ಶೀಘ್ರವಾಗಿ ಭೇದಿಸಿದ ವಿಶೇಷವಾಗಿ ಕರ್ತವ್ಯನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿಯ ಕಾರ್ಯ ಶ್ಲಾಘನೀಯವಾಗಿದ್ದು ತಂಡಕ್ಕೆ ಸೂಕ್ತ ಬಹುಮಾನ ನೀಡಲಾಗುವದು ಎಂದು ಬೀದರ ಜಿಲ್ಲಾ ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.