ಕೊಲೆ ಪ್ರಕರಣ  : ಠಾಣೆ ಆವರಣದಲ್ಲಿ ಹೈಡ್ರಾಮಾ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ, ಜು.22: ತಂಗಿ ಕೊಂದ ಆರೋಪಿಯನ್ನು ನಮಗೊಪ್ಪಿಸಿ ಇಲ್ಲವಾದರೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವೆ ಎಂದ  ಸಹೋದರ :
ಅಮಾನವೀಯವಾಗಿ ಕೊಲೆಯಾಗಿರುವ ನಿರ್ಮಲಾ ಅವರ ಕುಟುಂಬದವರು ಆರೋಪಿ ಭೋಜರಾಜನನ್ನು ಠಾಣೆಯಿಂದ ಹೊರಗಡೆ ಕಳುಹಿಸಿ. ನಾವು ಅವನನ್ನು ನಮ್ಮ ಮಗಳು, ತಂಗಿಯನ್ನು ಕಡಿದ ರೀತಿಯಲ್ಲಿ ಕಡಿಯುತ್ತೇವೆ ಎಂದು ಪೊಲೀಸ್ ಠಾಣೆಗೆ ನುಗ್ಗಲು ಯತ್ನಿಸಿದರು. ಅವರನ್ನೆಲ್ಲ ಪೊಲೀಸರು ತಡೆಯಲು ಹರಸಾಹಸ ಪಟ್ಟರು ಅಷ್ಟರಲ್ಲೇ  ಕೊಲೆಯಾದ  ನಿರ್ಮಲಾ ಸಹೋದರ ಶ್ರೀಕಾಂತ್, ನಮ್ಮ ತಂಗಿಯನ್ನು ಕೊಲೆ ಮಾಡಿದ ಭೋಜರಾಜನನ್ನು ಹೊರಗಡೆ ಕಳುಹಿಸದಿದ್ದರೆ ಪೊಲೀಸ್ ಠಾಣೆಯ ಮುಂದೆಯೇ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಮುಂದಾಗುತ್ತಿದ್ದಂತೆ ತಕ್ಷಣವೇ ಎಚ್ಚೆತ್ತ ಡಿವೈಎಸ್ ಪಿ ಹರೀಶ್ ರೆಡ್ಡಿ, ಕೊಟ್ಟೂರು ಸಿಪಿಐ ಸೋಮಶೇಖರ್, ಪಿಎಸ್ ಐಗಳಾದ ತಿಮ್ಮಣ್ಣ ಚಾಮನೂರು, ನಾಗರತ್ನಮ್ಮ ಮತ್ತು ಪೊಲೀಸ್ ಸಿಬ್ಬಂದಿಯು ಸೇರಿ ಶ್ರೀಕಾಂತ್ ನ ಮೈಮೇಲೆ ನೀರು ಸುರಿದು ನಂತರ ಆಸ್ಪತ್ರೆಗೆ ಕಳುಹಿಸಿದರು. ನಂತರ ಪರಿಸ್ಥಿತಿ ಸ್ವಲ್ಪ ತಣ್ಣಗಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಪೊಲೀಸರನ್ನು ಕಾನಹೊಸಹಳ್ಳಿ ಪೊಲೀಸ್ ಠಾಣೆಗೆ ನಿಯೋಜಿಸಲಾಗಿತ್ತು.
@12bc = ಕೊಲೆಯಾದ ಯುವತಿಯ ಮನೆಯಲ್ಲಿ ಆಕ್ರಂದನ:
ಮಗಳನ್ನು ಕಳೆದುಕೊಂಡ ತಾಯಿ,ತಂದೆ ಹಾಗೂ ಸಂಬಂಧಿಕರು ರುಂಡವಿಲ್ಲದ ದೇಹವನ್ನು ನೋಡಿ ಬಿಕ್ಕಿ ಬಿಕ್ಕಿ ಅಳುತ್ತಿದ್ದ ದೃಶ್ಯ ಎಂಥವರ ಕಲ್ಲು ಹೃದಯವನ್ನು ಕಲಕುವಂತಿತ್ತು.  ಇಡೀ ಗ್ರಾಮವೇ ನೀರವ ಮೌನಕ್ಕೆ ಶರಣಾಗಿದ್ದು, ಬೋಜರಾಜ ಮಾಡಿದ ಅಮಾನವೀಯ ಕೃತ್ಯಕ್ಕೆ ಹಿಡಿಶಾಪ ಹಾಕಿದ್ದಲ್ಲದೇ, ಬೆಳೆದು ಬದುಕಬೇಕಾಗಿದ್ದ  ಸುಂದರ ಹುಡುಗಿಯ ಜೀವನವನ್ನು ಹಾಳು ಮಾಡಿದ್ದಾನೆ ಎಂದು ಶಪಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಯುವತಿಯ ಕೊಲೆ ಸುದ್ದಿ ತಿಳಿಯುತ್ತಿದ್ದಂತೆ ಸುತ್ತಮುತ್ತಲಿನ ಗ್ರಾಮದ ಜನರು ಆಗಮಿಸಿ ವೀಕ್ಷಿಸುತ್ತಿದ್ದರು.

Attachments area