ಕೊಲೆ ಪ್ರಕರಣ: ಚಿತ್ತಾಪುರ ಪಿಎಸ್‍ಐ ಅಮಾನತು

ಚಿತ್ತಾಪುರ:ಡಿ.16:ಪಟ್ಟಣದ ಆಶ್ರಯ ಕಾಲೋನಿಯಲ್ಲಿ ಗಾಂಜಾ ಮಾರಾಟ ವಿಚಾರವಾಗಿ ನಡೆದ ಯುವಕನ ಕೊಲೆಗೆ ಸಂಬಂಧಿಸಿದಂತೆ ಕರ್ತವ್ಯ ಲೋಪ ಎಸಗಿದ್ದಕ್ಕಾಗಿ ಚಿತ್ತಾಪುರ ಪೆÇಲೀಸ್ ಠಾಣೆಯ ಪಿಎಸ್‍ಐ ಮಂಜುನಾಥ ರೆಡ್ಡಿ ಅವರನ್ನು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ಅವರು ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಗಾಂಜಾ ಸಂಬಂಧ ಯುವಕನ ಕೊಲೆ ಪ್ರಕರಣದ ಪರಿಶೀಲನೆಗೆಂದು ಕಳೆದ ಭಾನುವಾರ ಚಿತ್ತಾಪುರಕ್ಕೆ ಭೇಟಿ ನೀಡಿದ್ದ ಇಶಾ ಪಂತ್ ಅವರು ಸ್ಥಳೀಯ ಪೆÇಲೀಸ್ ಅಧಿಕಾರಿಗಳಿಂದ ಸಮಗ್ರ ಮಾಹಿತಿ ಕಲೆ ಹಾಕಿದ್ದರು.

ಕೊಲೆ ಆರೋಪಿ ಸಲೀಂನಿಂದ ಗಾಂಜಾ ಮಾರಾಟದ ವಿವರ ಪಡೆದ ಅವರು ಸ್ಥಳೀಯ ಪೆÇಲೀಸರ ಕರ್ತವ್ಯ ಲೋಪದ ಬಗ್ಗೆ ಮಾಹಿತಿ ಪಡೆದು ಪೆÇಲೀಸರಿಗೆ ಬಿಸಿ ಮುಟ್ಟಿಸಿದ್ದಾರೆ.

ಗಾಂಜಾ ವಿಷಯಕ್ಕೆ ಸಂಬಂಧಿಸಿದ ಕುರಿತು ಗಂಭೀರವಾಗಿ ಪರಿಗಣಿಸದೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡದೆ ನಿರ್ಲಕ್ಷ್ಯ ವಹಿಸಿದ್ದಾರೆ ಅಷ್ಟೇ ಅಲ್ಲದೆ
ಯಾವ ಪೆÇಲೀಸರು ಆರೋಪಿ ಸಲೀಂನೊಂದಿಗೆ ಮಾತನಾಡಿದ್ದಾರೆ. ಒಂದು ವರ್ಷದಲ್ಲಿ ಎಷ್ಟು ಸಲ ಕರೆ ಮಾಡಿದ್ದಾರೆ ಎನ್ನುವ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ನಾಲ್ಕರಿಂದ ಆರು ಜನ ಸಿಬ್ಬಂದಿ ಸಲೀಂ ಜತೆ ಮೊಬೈಲ್ ಕರೆ ಮೂಲಕ ಮಾತನಾಡಿರುವ ಕುರಿತು ಎಸ್ಪಿ ಅವರಿಗೆ ಮಾಹಿತಿ ಇದೆ ಎಂದು ಗೊತ್ತಾಗಿದೆ.