ಕೊಲೆ ಪ್ರಕರಣ ಇಬ್ಬರು ಆರೋಪಿಗಳು ಅರೆಸ್ಟ್ : ಪೊಲೀಸ್ ತನಿಖಾ ಕಾರ್ಯಕ್ಕೆ ಎಸ್ ಪಿ ನಿಖಿಲ್ ಮೆಚ್ಚುಗೆ

ರಾಯಚೂರು,ನ.೨೫-ನಗರದ ನಿಜ ಲಿಂಗಪ್ಪ ಕಾಲೋನಿ ನಿವಾಸಿ ಪಂಪಾಪತಿ ಎಂಬ ವ್ಯಕ್ತಿಯನ್ನು ಚಾಕುವಿನಿಂದ ಕತ್ತು ಕೋಯ್ದು ಚಿನ್ನಾಭರಣ ಹಾಗೂ ನಗದು ಹಣದ ದೋಚಿದ್ದ ಘಟನೆಗೆ ಸಂಬಂಧಿಸಿ ದಂತೆ ಇಬ್ಬರು ಆರೋಪಿಗಳನ್ನು ಬಂಧಿ ಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು ೪೦ ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್.ಬಿ. ಹೇಳಿದರು.
ಅವರಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ, ನ.೨೧ ರಂದು ಘಟನೆ ನಡೆದಿದ್ದು, ಮನೆಯಲ್ಲಿ ಯಾರು ಇಲ್ಲದೇ ಇರುವ ಮಾಹಿತಿ ಪಡೆದು ರಾಂಪೂರು ನಿವಾಸಿ ಹಾಗೂ ಮೃತ ಪಂಪಾಪತಿಗೆ ಸಂಬಂಧಿಯಾಗಿರುವ ಅಖಿಲೇಶ ಮತ್ತು ಆತನ ಸ್ನೇಹಿತ ಗೌತಮ್ ಎಂಬುವವರು ಸೇರಿ ಕೃತ್ಯ ಎಸಗಿದ್ದಾರೆ ಎಂಬದು ತಿಳಿದುಬಂದಿದೆ. ದೋಚಿದ ಹಣದಲ್ಲಿ ಮೊಬೈಲ್ ಹಾಗೂ ಕಾಲೇಜಿನ ಶುಲ್ಕ ಭರಿಸಲು ಬಳಕೆ ಮಾಡಿಕೊಂಡಿದ್ದಾರೆ. ಬಂದಿತರು ೫೦ ಸಾವಿರ ರೂ ನಗದು ಹಣ ಹಾಗೂ ೧ ಲಕ್ಷ ೨೩ ಸಾವಿರ ರೂ ಮೌಲ್ಯದ ಚಿನ್ನಾಭರಣ ದೋಚಿದ್ದರು. ಬಂಧಿತ ಆರೋಪಿಗಳನ್ನು ವಿಶೇಷ ತನಿಖಾ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಸಾರ್ವಜನಿಕಕರ ಜಾಗೃತಿಗಾಗಿ ಯಾವುದೇ ಅಹಿತಕರ ಘಟನೆ ಸಂಭವಿಸಿದ್ದಲಿ ಅಥವಾ ಸಮಸ್ಯೆಗಳು ಇದ್ದಲಿ ಕೂಡಲೇ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ ೧೨೧ ಕರೆ ಮಾಡಿ ಮಾಹಿತಿ ತಿಳಿಸಬಹುದು ಎಂದು ಅವರು ಹೇಳಿದರು.
ಡಿವೈಎಸ್‌ಪಿ ಶಿವನಗೌಡ ಪಾಟೀ ಲ್ ನೇತೃತ್ವದ ತಂಡದಲ್ಲಿ ಸಿಪಿಐಗಳಾದ
ವೀರಾರೆಡ್ಡಿ, ಫಜಿಯುದ್ದೀನ್, ರಾಜಕುಮಾರ ಭಜಂತ್ರಿ, ಪಶ್ಚಿಮ ಠಾಣೆಯ ಪಿಎಸ್‌ಐ ಮಂಜುನಾಥ, ಎಎಸ್‌ಐ ಚಂದ್ರಶೇಖರ ಹೀರೆಮಠ, ಎಚ್ ಗೋಲ್ಲಾಳಪ್ಪ, ರಾಘವೇಂದ್ರ, ರಂಗಣ್ಣ, ಬಸವರಾಜ, ಜಾಫರ್ ಸಾಧಿಕ್ ,ಅಬ್ದುಲ್ ವಹಾಬ್, ರೋಷನ್, ಜಮೀರ್, ಗೌಸ್ ಪಾಷಾ, ಅಶೋಕ , ಶ್ರೀನಿವಾಸ, ಮುನಿಸ್ವಾಮಿ, ಲಾಲೀಸಾಬ, ಹನುಮಂತ್ರಾಯ, ಮಲ್ಲಪ್ಪಶಿವಣ್ಣ, ಚಂದ್ರು,ವೆಂಕಟೇಶ, ಮಲ್ಲಿಕಾರ್ಜುನ, ಅಸ್ಲಂ, ಚಾಲಕ ರೇಣುಕಾರಾಜ್ ಸೇರಿದಂತೆ ಸಿಬ್ಬಂದಿಗಳಯ ತನಿಖಾ ತಂಡದಲ್ಲಿ ಶೀಘ್ರದಲ್ಲಿ ಆರೋಪಿಗಳನು ಬಂಧಿಸುವಲ್ಲಿ ಯಶಸ್ವಿ ಕಾರ್ಯಚರಣೆ ನಡೆಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ ನಗದು ಬಹುಮಾನ ಘೋಷಿಸಿದರು.