ಕೊಲೆ ಪ್ರಕರಣ; ಆರೋಪಿ ಬಂಧನ

ಬೀದರ್:ಆ.11: ತಲಾ ನಾಲ್ಕು ದೊಂಬಿ ಕೊಲೆ ಯತ್ನ ಐದು ಸುಲಿಗೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಬೀದರ್‍ನ ಗಾಂಧಿ ಗಂಜ್ ಪೆÇಲೀಸರು ಎರಡನೇ ಆರೋಪಿಯನ್ನು ಸೋಮವಾರ ಬಂಧಿಸಿದ್ದಾರೆ. ಘಟನೆ ಬೆನ್ನಲ್ಲೇ ಮೇ 3ರಂದು ಬೀದರ್ ಗ್ರಾಮೀಣ ಸಿಪಿಐ ಮಲ್ಲಿಕಾರ್ಜುನ ಯಾತನೂರ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ನಗರ ಹೊರವಲಯದ ಚಿದ್ರಿ ಬಳಿ ದಾಳಿ ನಡೆಸಿ ಒಬ್ಬ ಆರೋಪಿಯನ್ನು ಬಂಧಿಸಿದ್ದರು. ಇನ್ನೊಬ್ಬ ತಲೆಮರೆಸಿಕೊಂಡಿದ್ದ. ಮೂರು ತಿಂಗಳ ಬಳಿಕ ಇನ್ನೊಬ್ಬನನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ.

ಜಾನುವಾರು ಕಳ್ಳನ ಬಂಧನ ನೌಬಾದ್ ಸಮೀಪದ ಜೈಭೀಮ ನಗರದ ಮನೆ ಎದುರಿನ ಜಾನುವಾರು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಿರುವ ನ್ಯೂ ಟೌನ್ ಪೆÇಲೀಸರು ಆತನಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ?70 ಸಾವಿರ ನಗದು ಜಾನುವಾರು ಸಾಗಿಸಲು ಬಳಸಿದ ?4 ಲಕ್ಷ ಮೌಲ್ಯದ ಎರಡು ಗೂಡ್ಸ್ ಆಟೊಗಳನ್ನು ವಶಕ್ಕೆ ಪಡೆದಿದ್ದಾರೆ. ಪಿಎಸ್‍ಐ ತಸ್ಲೀಂ ಸುಲ್ತಾನಾ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಪ್ರಕರಣವನ್ನು ಭೇದಿಸಿದ್ದಾರೆ. ತಂಡಕ್ಕೆ ?10 ಸಾವಿರ ನಗದು ಪ್ರಶಂಸನಾ ಪತ್ರ ನೀಡಲಾಗಿದೆ ಎಂದು ಎಸ್ಪಿ ತಿಳಿಸಿದರು.