ಕೊಲೆ ಪ್ರಕರಣದ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ನೀಡಲು ಶ್ರಮಿಸಿದ ಸಿಬ್ಬಂದಿಗಳಿಗೆ ಗೌರವ

ಕೆ.ಆರ್.ಪೇಟೆ, ಡಿ.27: ಕೋವಿಡ್-19 ಅನ್ನೂ ಲೆಕ್ಕಿಸದೇ ಅಪರಾಧಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯದ ತಾಲೂಕಿನ ಮುರುಕನಹಳ್ಳಿ ಗ್ರಾಮದಲ್ಲಿ ನಡೆದಿದ್ದ ಕೊಲೆ ಪ್ರಕರಣದ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ನೀಡಲು ಶ್ರಮಿಸಿದ ಸರ್ಕಾರಿ ಅಭಿಯೋಜಕ ಹಾಗೂ ಪೆÇಲೀಸ್ ಇಲಾಖೆಯ ಸಿಬ್ಬಂದಿಗಳಿಗೆ ಮಂಡ್ಯ ಜಿಲ್ಲಾ ಎಸ್.ಪಿ.ಪರಶುರಾಮ್ ಮತ್ತು ವೃತ್ತನಿರೀಕ್ಷಕ ದೀಪಕ್ ಗೌರವಿಸಿದರು.
ಪಟ್ಟಣ ಪೆÇಲೀಸ್ ಠಾಣೆಯ ಆವರಣದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಕೊಲೆ ಪ್ರಕರಣದಲ್ಲಿ ಇಲಾಖೆಯ ಪರ ವಾದ ಮಂಡಿಸಿ ಆರೋಪಿಗಳಿಗೆ ಶಿಕ್ಷೆಯಾಗಲು ಶ್ರಮಿಸಿದ ಶ್ರೀರಂಗಪಟ್ಟಣ ಅಪರ ಜಿಲ್ಲಾ ನ್ಯಾಯಾಲಯದ ಸರ್ಕಾರಿ ಅಭಿಯೋಜಕ ಫಿರೋಜ್ ಖಾನ್, ತನಿಖಾ ಕಾರ್ಯದಲ್ಲಿ ಶ್ರಮಿಸಿದ ಎ.ಎಸ್.ಐ ಶಿವಣ್ಣ, ನ್ಯಾಯಾಲಯದ ಕರ್ತವ್ಯ ನಿರ್ವಹಿಸಿದ ಸಿಬ್ಬಂದಿ ಮಧುಸೂಧನ, ನಿವೃತ್ತ ಎ.ಎಸ್.ಐ ಗಳಾದ ರಂಗಸ್ವಾಮಿ ಮತ್ತು ಸೋಮಶೇಖರ್ ಅವರಿಗೆ ಅಪರ ಜಿಲ್ಲಾ ಪೆÇಲೀಸ್ ವರಿಷ್ಟಾಧಿಕಾರಿ ವಿ.ಧನಂಜಯ ಅಭಿನಂದಿಸಿ ಕಾಣಿಕೆಗಳನ್ನು ನೀಡಿ ಗೌರವಿಸಿದರು.
ಈ ಕುರಿತು ಮಾತನಾಡಿದ ವೃತ್ತ ಆರಕ್ಷಕ ನಿರೀಕ್ಷಕ ದೀಪಕ್ ನಾವು ಎಷ್ಟೇ ಶ್ರಮವಹಿಸಿ ತನಿಖೆ ನಡೆಸಿ ಆರೋಪ ಪಟ್ಟಿ ಸಲ್ಲಿಸಿದರೂ ಬಹುತೇಕ ಪ್ರಕರಣಗಳಲ್ಲಿ ಆರೋಪಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತಾರೆ. ಇದರಿಂದ ನಮ್ಮ ಪರಿಶ್ರಮ ಕೆಲವು ವೇಳೆ ವ್ಯರ್ಥವಾಗಿಬಿಡುತ್ತದೆ. 2016 ರಲ್ಲಿ ನಡೆದ ಮುರುಕನಹಳ್ಳಿಯ ಹರೀಶ ಉರುಫ್ ಗುಂಡನ ಕೊಲೆ ಪ್ರಕರಣದಲ್ಲಿ ನಾವು ತನಿಖೆ ನಡೆಸಿ 11 ಜನರ ವಿರುದ್ದ ಆರೋಪ ಪಟ್ಟಿ ಸಲ್ಲಿಸಿದ್ದೆವು. ಪ್ರಕರಣದ ವಿಚಾರಣೆ ನಡೆಸಿದ ಶ್ರೀರಂಗಪಟ್ಟಣ 3 ನೇ ಅಪರ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಎಸ್.ಸಿ.ನಂ 5026/2018 ರಲ್ಲಿ ವಿಚಾರಣೆ ನಡೆದು ದಿನಾಂಕ 22-12-2020 ರಂದು ತೀರ್ಪು ಪ್ರಕಟಗೊಂಡಿದೆ. ವಿಚಾರಣೆ ನಡೆಸಿದ ಘನ ನ್ಯಾಯಾಲಯವು ಆರೋಪಿಗಳಾದ ಎಂ.ಕೆ.ರಕ್ಷಿತ್, ಯೋಗೇಶ, ಸಂತೋಷ್, ಅಭಿ, ಮಂಜು, ಪಿ.ಪರಶುರಾಮ ಮತ್ತು ಶಿವು ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಉಳಿದ ಆರೋಪಿಗಳಾದ ಗಿರೀಶ ಮತ್ತು ರಘು ಅವರಿಗೆ 3 ವರ್ಷಗಳ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಉಳಿದ ಇಬ್ಬರು ಆರೋಪಿಗಳಲ್ಲಿ ಎಸ್.ಬಿ ಸಿದ್ದೇಶ್ ನಿಧನರಾಗಿದ್ದರೆ ಮತೊಬ್ಬ ಆರೋಪಿ ವರುಣ್ ಬಾಲಾಪರಾಧಿಯಾಗಿದ್ದು ಶಿಕ್ಷೆ ಪ್ರಕಟವಾಗಬೇಕಾಗಿದೆ.
ಶೀಘ್ರವಾಗಿ ವಿಚಾರಣೆ ನಡೆದು ಬೇಗ ತೀರ್ಪು ಹೊರಬಿದ್ದಿದ್ದು ಅಪರಾಧಿಗಳಿಗೆ ತಕ್ಕ ಶಿಕ್ಷೆಯಾಗಿದೆ, ಈ ಕಾರ್ಯದಲ್ಲಿ ಯಶಸ್ಸನ್ನು ಕಂಡ ಪೆÇೀಲೀಸ್ ಅಧಿಕಾರಿಗಳು ಇಲಾಖೆಗೆ ಗೌರವ ತರುವಂಥಹ ಕೆಲಸವನ್ನು ಮಾಡಿದ್ದಾರೆ.
ಸಿಪಿಐಗಳಾದ ಹೆಚ್.ಬಿ.ವೆಂಕಟೇಶಯ್ಯ, ಕೆ.ಪ್ರಭಾಕರ್, ಎಂ.ಕೆ.ದೀಪಕ್, ಹರೀಶ್ ಬಾಬು, ಕೆ.ರಾಜೇಂದ್ರ, ಪಿ.ಎಸ್.ಐ ಗಳಾದ ಗಿರೀಶ್, ಸಿದ್ದರಾಜು, ಅರುಣ್ ಕುಮಾರ್, ಪೆÇಲೀಸ್ ಸಿಬ್ಬಂದಿಗಳಾದ ಶಿವಣ್ಣ, ಬಿ.ಎಸ್.ಚಂದ್ರಶೇಖರ್, ಹೆಚ್.ಪ್ರಕಾಶ್, ಇ.ಆರ್.ನಿಂಗರಾಜು, ಎಸ್.ಎಲ್. ಸೋಮಶೇಖರ್, ಸಿಪಿಸಿ ಗಳಾದ ಜಾವೀದ್, ವೈರಮುಡಿ, ಜಯವರ್ಧನ, ರಮೇಶ್, ಟಿ.ರಘು, ವಿನೋದ ಹಾಗೂ ನ್ಯಾಯಾಲಯದ ಕರ್ತವ್ಯ ನಿರ್ವಹಿಸಿದ ಸಿಬ್ಬಂದಿ ಮಧುಸೂಧನ ಹಾಗೂ ಸಮರ್ಥವಾಗಿ ವಾದ ಮಂಡಿಸಿ ಇಲಾಖೆಯ ಗೌರವ ಹೆಚ್ಚಿಸಿದ ಸರ್ಕಾರಿ ಅಭಿಯೋಜಕರಾದ ಫಿರೋಜ್ ಖಾನ್ ಅವರ ಪರಿಶ್ರಮವನ್ನು ಇಲಾಖೆಯ ಪರವಾಗಿ ಸಿಪಿಐ ದೀಪಕ್ ಶ್ಲಾಘಿಸಿದರು.