ಕೊಲೆ ತನಿಖೆ ಆರಂಭ

ಕೊರೋನಾ ಸೋಂಕಿನಿಂದಾಗಿ ಬಾಗಿಲುಮುಚ್ಚಿದ್ದ ಚಿತ್ರಮಂದಿರಗಳು ಸರ್ಕಾರದ ಅನುಮತಿ ನೀಡಿದ ಬಳಿಕ ಒಂದೊಂದೇ ಆರಂಭವಾಗುತ್ತಿವೆ.
ಈ ನಡುವೆ ಚಿತ್ರಮಂದಿರಗಳಲ್ಲಿ ಜನರು ಕಡಿಮೆಯಾಗುತ್ತದೆ ಬರಬಹುದು ಎನ್ನುವ ಆತಂಕದಿಂದ ಒಟಿಟಿ ವೇದಿಕೆಯಲ್ಲಿ ಚಿತ್ರಗಳು ಬಿಡುಗಡೆಯಾಗುತ್ತಿವೆ.
ಇದೀಗ ಅದರ ಸಾಲಿಗೆ ಕಲಿ ಗೌಡ ನಿರ್ದೇಶನ ಮತ್ತು ನಿರ್ಮಾಣ ಮಾಡಿರುವ ತನಿಖೆ ಕೂಡಾ ಸೇರ್ಪಡೆಯಾಗಿದೆ.
ನಮ್ಮ ಪ್ಲಿಕ್ಸ್ ಒಟಿಟಿಯಲ್ಲಿ ತನಿಖೆ ಬಿಡುಗಡೆಯಾಗಿದ್ದು ಕೊನೆಯ ಸುತ್ತ ನಡೆಯುವ ಮರ್ಡರ್ ಮಿಸ್ಟ್ರಿಯ ತನಿಖೆ ಪ್ರಗತಿ ಉತ್ತಮ ಆರಂಭ ಕಂಡುಕೊಂಡಿದೆ.
ಚಿತ್ರ ನೋಡಿದ ಮಂದಿ ಚಿತ್ರವನ್ನು ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಬೇಕಾಗಿತ್ತು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಚಿತ್ರತಂಡ ಚಿತ್ರಮಂದಿರದಲ್ಲೂ ಚಿತ್ರವನ್ನು ತೆರೆಗೆ ತರಲು ಉದ್ದೇಶಿಸಿದೆ.
ಸರಿ ಸುಮಾರು ನಲವತ್ತರಿಂದ ಐವತ್ತು ಸಾವಿರ ಟಿಕೆಟ್ ಬಿಡುಗಡೆ ಮಾರಾಟ ಮಾಡಿದ್ದ ಕಲಿ ಗೌಡ ಅವರು ಚಿತ್ರಕ್ಕೆ ಸಿಕ್ಕಿರುವ ಪ್ರತಿಕ್ರಿಯಿಂದ ಖುಷಿಯಾಗಿದ್ದಾರೆ.
ಹಳ್ಳಿಯೊಂದರಲ್ಲಿ ನಡೆಯುವ ಕಥೆಯನ್ನು ಮುಂದಿಟ್ಟುಕೊಂಡು ಸಸ್ಪೆನ್ಸ್ ಥ್ರಿಲ್ಲರ್ ನೊಂದಿಗೆ ಕಟ್ಟಿಕೊಡಲಾಗಿದೆ ಎನ್ನುತ್ತಾರೆ ಅವರು.
ಚಿತ್ರದಲ್ಲಿ ಆರ್ ಡಿ ಅನಿಲ್, ಮಚ್ಚು ಮುನಿರಾಜು, ಗುಲ್ಶನ್, ನಿಖಿಲ್, ಸಂತೋಷ್ ಮತ್ತು ಅಪ್ಪು ಬಡಿಗೇರ ನಟಿಸಿದ್ದಾರೆ ನಾಯಕಿಯಾಗಿ ಚಂದನ ಕಾಣಿಸಿಕೊಂಡಿದ್ದು ಹೊಸಬರ ನಟರಿಗೆ ಜನರಿಂದ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಐವರು ಹುಡುಗರು ಮತ್ತು ಒರ್ವ ಹುಡುಗಿಯ ಸುತ್ತ ನಡೆಯುವ ಕಥೆಯನ್ನು ಚಿತ್ರ ಒಳಗೊಂಡಿದೆ ಐವರ ಗುಂಪಿನಲ್ಲಿರುವ ಹುಡುಗ ನಾಯಕಿಯನ್ನು ಪ್ರೀತಿಸುತ್ತಾನೆ ಆದರೆ ನಾಯಕಿ ಅದೇ ಗುಂಪಿನಲ್ಲಿರುವ ಮತ್ತೊಬ್ಬ ಹುಡುಗನನ್ನ ಪ್ರೀತಿಸುತ್ತಾಳೆ. ಈ ನಡುವೆ ನಡೆಯುವ ಕೊಲೆಯನ್ನು ಹುಡುಗರು ತಮ್ಮ ತಲೆಯ ಮೇಲೆ ಹಾಕಿಕೊಳ್ಳುತ್ತಾರೆ ಅದರ ಜಾಡು ಹಿಡಿದು ಹೊರಟಾಗ ಅದರ ಹಿಂದೆ ಸೈಕೋ ಕಿಲ್ಲರ್ ಇರುವುದು ಬೆಳಕಿಗೆ ಬರುತ್ತದೆ ಸೈಕೋ ಕಿಲ್ಲರ್ ಯಾರು ಎನ್ನುವುದು ತೀವ್ರ ಕುತೂಹಲ.
ಚಿತ್ರದಲ್ಲಿರುವ ಫ್ಲಾಶ್ ಬ್ಯಾಕ್ ಹಾಗು ತಿರುವುಗಳು ಚಿತ್ರಕ್ಕೆ ಇನ್ನಷ್ಟು ಮೆರುಗು ತಂದಿವೆ ಎಂದಿದ್ದಾರೆ ಕಲಿಗೌಡ.


ತನಿಖೆ ಪ್ರಗತಿಯಲ್ಲಿ
ಕಲಿಗೌಡ ನಿರ್ಮಾಣ ಮತ್ತು ನಿರ್ದೇಶನ ಮಾಡಿರುವ ತನಿಖೆ ಚಿತ್ರ ಪ್ರಗತಿಯಲ್ಲಿದ್ದು ಒಟಿಟಿ ಯಿಂದ ಶೀಘ್ರ ಚಿತ್ರಮಂದಿರಗಳಲ್ಲಿ ತೆರೆಗೆ ತರಲು ಉದ್ದೇಶಿಸಿದ್ದಾರೆ‌.