ಕೊಲೆ ಆರೋಪಿ ಬಂಧನ

ರಾಯಚೂರು ಡಿ 28:- ಜಿಲ್ಲೆಯ ಮುದ್ಗಲ್ ಠಾಣೆ ವ್ಯಾಪ್ತಿಯಲ್ಲಿ ಕೊಲೆ ಆರೋಪಿತನನ್ನು 24 ಗಂಟೆಯಲ್ಲಿ ಬಂದಿಸಲಾಗಿದೆ.
ಆರೋಪಿಯನ್ನು ಶಿವರಾಜ ತಂದೆ ಭೀಮಣ್ಣ ಎಂದು ಗುರುತಿಸಲಾಗಿದೆ. ದಿ 27 ರಂದು ರಾತ್ರಿ 7.15ಕ್ಕೆ ಆಸ್ತಿ ಹಂಚಿಕೆಗೆ ಸಂಬಂಧಿಸಿ ನಡೆದ ವಿವಾದದಲ್ಲಿ ಮೂರ ಜನರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದನು.
ರಮೇಶ, ನೇತ್ರವತಿ ಹಾಗೂ ಚಂದ್ರಣ್ಣ ಎಂಬುವವರಿಗೆ ಚಾಕುವಿನಿಂದ ಚುಚ್ಚಿ ಪರಾರಿಯಾಗಿದ್ದ.ಈ ಕುರಿತು ರಮೇಶ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿ ಕೊಂಡು ಶೋಧ ಕಾರ್ಯ ನಡೆಸಲಾಗಿತ್ತು 24 ಗಂಟೆಗಳಲ್ಲಿ ತನಿಖಾ ತಂಡ ಕಾರ್ಯಚರಣೆಗಿಳಿದು ಶಿವರಾಜ ಆರೋಪಿಯನ್ನು ಬಂದಿಸಿದೆ.