ಕೊಲೆ ಆರೋಪಿಗಳ‌ ಬಂಧನ

ಬಳ್ಳಾರಿ ಮೇ 04 : ನಗರದ ಮಿಲ್ಲರ್ ಪೇಟೆಯ ಕಣೇಕಲ್ ಬಸ್ ನಿಲ್ದಾಣದ ಬಳಿ‌ ನಿನ್ನೆ ಯುವಕನೋರ್ವನನ್ನು ಕೊಲೆ ಮಾಡಿದ ನಾಲ್ವರು ಆರೋಪಿಗಳನ್ನು ಪೊಲೀಸರು ಇಂದು ಬಂಧಿಸಿದ್ದಾರೆ.

ಜೀನ್ಸ್ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದ ಯುವಕ ಇಸ್ಮಯಿಲ್ (19) ನನ್ನು ನಿನ್ನೆ ಬೆಳಗಿನ‌ಜಾವ ಕೊಲೆ ಮಾಡಲಾಗಿತ್ತು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಬ್ರೂಸ್ ಪೇಟೆ ಪೊಲೀಸರು ತನಿಕೆ ನಡೆಸಿ ಪ್ರಕರಣಕ್ಕೆ ಸಂಬಂಧಿಸಿದಂತೆ
ಆರೋಪಿಗಳಾದ ನಗರದ ಕಾಸಿಂ (20) ರೈಸ್‌ಮಿಲ್‌ನಲ್ಲಿ ಪಿಟ್ಟರ್ ಕೆಲಸ, ಮಿಲ್ಲರ್‌ ಪೇಟೆ, ತುಕರಾಮ (21) ಹಮಾಲಿ ಮಿಲ್ಲರ್‌ಪೇಟೆ, ಮಹಬೂಬ್ (24) ಮತ್ತು ಕಾನೂನು ಸಂಘರ್ಷಕ್ಕೊಳಗಾದ ಬಾಲಕ ನನ್ನು ಬೈಪಾಸ್ ರಸ್ತೆಯಲ್ಲಿ‌ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.