ಕೊಲೆಸ್ಟ್ರಾಲ್ ಪರೀಕ್ಷೆ ಏಕೆ ಬೇಕಾಗುತ್ತದೆ?

ನಿಮ್ಮ ದೇಹದ ಕೊಲೆಸ್ಟ್ರಾಲ್ ಮಟ್ಟಗಳು ಸಮತೋಲದಲ್ಲಿ ಇವೆಯೇ ಎಂದು ಪರಿಶೀಲಿಸುವುದು ಆರೋಗ್ಯ ಕಪಾಡಿಕೊಳ್ಳಲು ಒಂದು ಪ್ರಮುಖ ಭಾಗವಾಗಿದೆ. ಈ ಕೆಳಗಿನ ಒಂದು ಅಥವಾ ಅದಕ್ಕೂ ಹೆಚ್ಚಿನ ಅಪಾಯಕಾರಿ ಅಂಶಗಳನ್ನು ಹೊಂದಿದ್ದರೆ. ದಿನನಿತ್ಯದ ಆರೋಗ್ಯ ಪರೀಕ್ಷೆಯ ಭಾಗವಾಗಿ ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ಪರೀಕ್ಷಿಸಲು ನಿಮ್ಮ ವೈದ್ಯರು ಕೇಳಿಕೊಳ್ಳಬಹುದು,

 ಕುಟುಂಬದ ಹಿರಿಯರಲ್ಲಿ ಹೃದ್ರೋಗ ಇರುವ ಇತಿಹಾಸ

 ಧೂಮಪಾನ

 ಟೈಪ್ ೨ ಮಧುಮೇಹ

 ತೀವ್ರ ರಕ್ತದೊತ್ತಡ

 ಸ್ಥೂಲಕಾಯ ಅಥವಾ ಹೆಚ್ಚುವರಿ ತೂಕ

 ದೈಹಿಕ ಚಟುವಟಿಕೆಯ ಕೊರತೆ

 ವಯಸ್ಸಾದಂತೆ ಹೃದ್ರೋಗಕ್ಕೆ ನಿಮ್ಮ ಅಪಾಯದ ಸಾಧ್ಯತೆ ಹೆಚ್ಚುತ್ತದೆ.

ಕೊಲೆಸ್ಟ್ರಾಲ್ ಕಡಿಮೆ ಮಾಡಲು ವ್ಯಾಯಾಮಗಳು

ನಿಯಮಿತವಾದ ವ್ಯಾಯಾಮ ಹಾಗೂ ಆರೋಗ್ಯಕರ ಆಹಾರ ಸೇವನೆ ಮತ್ತು (ಕೆಲವೊಮ್ಮೆ ಔಷಧಿ) ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಸಂಶೋಧನೆಗಳು ಈಗಾಗಲೇ ಸಾಬೀತುಗೊಳಿಸಿವೆ.

ವೇಗದ ನಡಿಗೆ ಅಥವಾ ನಿಧಾನಗತಿಯ ಓಟಹೃದಯದ ಚಟುವಟಿಕೆಯನ್ನು ಕೊಂಚ ಹೆಚ್ಚಿಸಲು ಈ ಸರಳ ವ್ಯಾಯಾಮಗಳು ಅತ್ಯುತ್ತಮ ಆಯ್ಕೆಯಾಗಿವೆ. ನಿತ್ಯವೂ ನಿಮ್ಮ ಮನೆಯ ಸುತ್ತ ನಿಮಗೆ ಸಾಧ್ಯವಾದಷ್ಟು ದೂರವನ್ನು ನಡೆಯಿರಿ ಅಥವಾ ಓಡಿರಿ. ನಿತ್ಯದ ವೇಗಕ್ಕಿಂತ ನಡಿಗೆಯ ವೇಗವನ್ನು ಕೊಂಚವೇ ಹೆಚ್ಚಿಸುವುದು ಅಗತ್ಯ. ಓಟ ಪ್ರಾರಂಭಿಸಿದರೆ ಇದು ನಿಧಾನ ಗತಿಯಲ್ಲಿರಿ ಇರಲಿ. ಮನೆಗೆ ಹೋಗಲು ಮೆಟ್ಟಿಲು ಏರುವ ಅಗತ್ಯವಿದ್ದರೆ ಮೆಟ್ಟಿಲುಗಳನ್ನು ಏರುತ್ತಾ ಹೋಗಿ. ಪ್ರಾರಂಭದಲ್ಲಿ ಈ ಸರಳ ವ್ಯಾಯಾಮಗಳೇ ಭಾರೀ ತ್ರಾಸಕರ ಅನ್ನಿಸಬಹುದು. ಆದರೆ ಕಾಲ ಕ್ರಮೇಣ ದೇಹ ಇದಕ್ಕೆ ಹೊಂದಿಕೊಂಡು ಸ್ಪಂದಿಸಲು ಪ್ರಾರಂಭಿಸುತ್ತದೆ. ಕೆಲವೇ ವಾರಗಳಲ್ಲಿ ಹಿಂದಿನಷ್ಟು ಇದೇ ಚಟುವಟಿಕೆಗಳು ತ್ರಾಸಕರ ಎನ್ನಿಸುವುದಿಲ್ಲ. ಈ ವ್ಯಾಯಾಮ ಸತತವಾಗಿದ್ದರೆ ಇದು ದೇಹದಲ್ಲಿ ಹೆಚ್ ಡಿ ಎಲ್ ಮಟ್ಟಗಳನ್ನು ಉತ್ತಮಗೊಳಿಸುತ್ತದೆ ಎಂದು ಅಧ್ಯಯಗಳಿಂದ ತಿಳಿದುಬಂದಿದೆ. ಈ ವ್ಯಾಯಾಮಗಳನ್ನು ಹೆಚ್ಚಿಸುತ್ತಾ ಹೋಗುವ ಮೂಲಕ ನಿಮ್ಮ ಆರೋಗ್ಯವೂ ಸುಧಾರಿಸುತ್ತಾ ಹೋಗುತ್ತದೆ.

ನಿಮಗೆ ಓಟ ಸಾಧ್ಯವಾಗದ ವಿಷಯ ಎಂದು ನೀವು ಭಾವಿಸದಿದ್ದರೆ, ಚುರುಕಾದ ನಡಿಗೆ ಕೂಡ ಸರಿಸಮಾನ ಕೆಲಸ ಮಾಡುತ್ತದೆ. ವಾಸ್ತವವಾಗಿ, ನಡಿಗೆ ಅಥವಾ ಓಟ, ಯಾವುದೇ ಆಗಲಿ, ಒಟ್ಟಾರೆ ದೇಹದ ಕೊಬ್ಬುಗಳನ್ನು ಬಳಸಿಕೊಂಡು ಕ್ಯಾಲೋರಿಗಳನ್ನು ಖರ್ಚುಮಾಡುತ್ತವೆಯೋ ಅಲ್ಲಿಯವೆರೆಗೂ ಇವು ಸಮಾನವಾಗಿ ಪರಿಣಾಮಕಾರಿ ಎಂದು ಕಂಡುಬಂದಿದೆ. ಆದ್ದರಿಂದ, ನಿಮ್ಮ ದೇಹ ಅಥವಾ ವಯಸ್ಸು ನಿಮ್ಮ ವ್ಯಾಯಾಮಕ್ಕೆ ಅಡ್ಡಿಯಾಗದೇ ಇರಲಿ.

ಈಜುವುದು ಇಷ್ಟವಾಗಿದ್ದರೆ ಇದು ಇನೊಂದು ಆತ್ಯುತ್ತಮ ವ್ಯಾಯಮವಾಗಿದೆ. ವಿಶೇಷವಾಗಿ ನಿಮ್ಮ ಹೃದಯ ಮತ್ತು ಶ್ವಾಸಕೋಶಗಳ ಆರೋಗ್ಯ ವೃದ್ದಿಸುತ್ತದೆ. ಅಲ್ಲದೆ, ರಕ್ತದೊತ್ತಡ, ಕೊಲೆಸ್ಟ್ರಾಲ್ ಮತ್ತು ಶಕ್ತಿಯ ಉತ್ಪಾದನೆಯ ಮಟ್ಟಕ್ಕೆ ಬಂದಾಗ ಉಳಿದ ವ್ಯಾಯಾಮಗಳಿಗಿಂತ ಈಜು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಕಂಡುಬಂದಿದೆ.