ಕೊಲೆಯ ಸುತ್ತ ತನಿಖೆ

ಬೆಂಗಳೂರು ಸಮೀಪದ ಕನಕಪುರದಲ್ಲಿ ನಡೆದ ಸತ್ಯ ಘಟನೆಯ ಚಿಕ್ಕ ಎಳೆ ಇಟ್ಟುಕೊಂಡು “ತನಿಖೆ “ಮಾಡಲಾಗುತ್ತಿದೆ.
ಹಳ್ಳಿಯೊಂದರಲ್ಲಿ ಆರು ಜನ ಸ್ನೇಹಿತರು ಹಾಗೂ ಒಬ್ಬ ಯುವತಿಯ ನಡುವೆ ನಡೆಯುವ ಕಥೆ ಹೊಂದಿರುವ‌ ತನಿಖೆಗೆ ಜಿ.ಎಸ್.ಕಲಿಗೌಡ ನಿರ್ದೇಶನ, ನಿರ್ಮಾಣ ಮಾಡಿದ್ದಾರೆ.
ಮೈಸೂರು, ಪಾಂಡವಪುರ, ಕನಕಪುರ, ರಾಮನಗರ ಮತ್ತು ಚನ್ನಪಟ್ಟಣ ಸುತ್ತಮುತ್ತ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.ಇದೇ ತಿಂಗಳ 20ರಂದು ನಮ್ಮ ಫ್ಲಿಕ್ಸ್ ಓಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ
ಹುಡುಗಿಯ ಪ್ರೀತಿಯ ವಿಚಾರಕ್ಕೆ ಸ್ನೇಹಿತರಲ್ಲೇ ಮನಸ್ತಾಪ ಉಂಟಾಗುತ್ತದೆ. ಅದೇ ಸಮಯಕ್ಕೆ ಆ ಸ್ನೇಹಿತರಲ್ಲಿ ಒಬ್ಬನ ಕೊಲೆ ನಡೆದುಹೋಗುತ್ತದೆ. ಇದರಿಂದ ಉಳಿದ ಐವರು ಸ್ನೇಹಿತರು ಊರನ್ನೇ ಬಿಡುವಂತಾಗುತ್ತದೆ. ಕೊಲೆಗಾರನ ಪಟ್ಟ ಹೊತ್ತು ಕಾಡಿನಲ್ಲಿ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಕೇಸನ್ನು ಗಂಭೀರವಾಗಿ ಪರಿಗಣಿಸಿದ‌ ಪೋಲೀಸ್ ಅಕಾರಿಯೊಬ್ಬ ಆತನ ಮನವೊಲಿಸಿ ವಾಪಸ್ ನಾಡಿಗೆ ಕರೆತರುತ್ತಾರೆ. ಕೊಲೆಗಾರ ಯಾರು ಎಂದು ಕೂಲಂಕುಶವಾಗಿ ತನಿಖೆ ನಡೆಸಿದಾಗ ರಿಯಲ್ ಕೊಲೆಗಾರನ ಪತ್ತೆಯಾಗುತ್ತದೆ.
ಆರಂಭದಿಂದ ಪ್ರೇಕ್ಷಕರ ಮನದಲ್ಲಿ ಮೂಡುವ ಎಲ್ಲಾ ಪ್ರಶ್ನೆಗಳಿಗೆ ಚಿತ್ರದ ಕ್ಲೈಮಾಕ್ಸ್‍ನಲ್ಲಿ ಉತ್ತರ ಸಿಗುತ್ತದೆ, ನಮ್ಮ ಚಿತ್ರದಲ್ಲಿನ ಎಣ್ಣೆ ಹೊಡಿಯೋದ, ಹೆಂಡ್ತಿ ಬಿಡೋದ ಎಂಬ ಹಾಡು ದೊಡ್ಡಮಟ್ಟದಲ್ಲಿ ಹಿಟ್ ಆಗಿದೆ. ಎಂದು ತನಿಖೆ ಚಿತ್ರದ ಕುರಿತಂತೆ ಸಂಕ್ಷಿಪ್ತವಾಗಿ ನಿರ್ದೇಶಕ ಜಿ.ಎಸ್. ಕಲಿಗೌಡ ಹೇಳಿದರು.
ಆರ್.ಡಿ. ಅನಿಲ್ ನಾಯಕ.ನಾಯಕಿಯಗಿ ಚಂದನ ಕಾಣಿಸಿಕೊಂಡಿದ್ದಾರೆ.
ಚಿತ್ರದಲ್ಲಿ ಸಂತೋಷ್ ವಿಜಯಕುಮಾರ್, ಮಚ್ ಮುನಿರಾಜು, ಗುಲ್‍ಷನ್, ನಿಖಿತ್, ರವಿ, ಕಲ್ಕೆರೆ ಗಂಗಾಧರ್, ಗೋಪಿ ಪ್ರಮುಖ ಪಾತ್ರಗಳಲ್ಲಿದ್ದಾರೆ.
ಕ್ರಿಸ್ಟೋಫರ್ ಲೀ ,ಶ್ಯಾಮ್ ಸಿಂಧನೂರು ಛಾಯಾಗ್ರಣವಿದೆ. ಸಹ ನಿರ್ಮಾಪಕರಾಗಿ ಕೈಜೋಡಿಸಿದ್ದಾರೆ