ಕೊಲೆಯಾದ ವಕೀಲ ಈರಣ್ಣಗೌಡರ ಕುಟುಂಬಕ್ಕೆ ಶಾಸಕರ ಸಾಂತ್ವನ

ಕಲಬುರಗಿ:ಡಿ.08:ಗುರುವಾರ ಭೀಕರವಾಗಿ ಕೊಲೆಗೀಡಾದ ವಕೀಲ ಈರಣ್ಣಗೌಡರ ಮನೆಗೆ ಭೇಟಿ ನೀಡಿದ ಶಾಸಕ ಅಲ್ಲಂಪ್ರಭು ಪಾಟೀಲರು ಕುಟುಂಬ ಸದಸ್ಯರಿಗೆ್ ಸಾಂತ್ವನ ಹೇಳಿದ್ದಾರೆ.

ಕೊಲೆಗಡುಕರು ಯಾರೇ ಇರಲಿ, ಅದೆಷ್ಟೇ ಪ್ರಭಾವಿ ಇರಲಿ, ಅವರಿಗೆ ಬಂಧಿಸಲಾಗುತ್ತದೆ. ಈಗಾಗಲೇ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಈ ಕೊಲೆಯ ಹಿಂದೆ ಇನ್ನೂ ಯಾರಾದರೂ ಸಂಚು ಹೂಡಿದ್ದರೆ ಅಂತಹವರನ್ನು ಬಂಧಿಸುವ ಕೆಲಸ ಪೊಲೀಸರು ಮಾಡುತ್ತಾರೆ. ತನಿಖೆ ಪಕ್ಕಾ ಆಗಬೇಕು, ತಪ್ಪಿತಸ್ಥರೆಲ್ಲರಿಗೂ ಬಂಧಿಸಿ ಕಠಿಣ ಶಿಕ್ಷೆಯಾಗುವಂತೆ ಪೊಲೀಸರು ಅಗತ್ಯ ಕ್ರಮ ಜರುಗಿಸಬೇಕು ಎಂದು ಶಾಸಕರು ಆಗ್ರಹಿಸಿದರು.

ಅನೇಕ ಮಾಫಿಯಾಗಳಿಂದ ವಕೀಲರು ತಮ್ಮ ವೃತ್ತಿಯನ್ನು ನಿರ್ಭಯವಾಗಿ ಮಾಡಲಾಗದೆ ತೊಂದರೆ ಎದುರಿಸುವಂತಗಿದೆ. ಇದು ನಿಲ್ಲಲೇಬೇಕು. ಕಾಂಗ್ರೆಸ್‌ ಪಕ್ಷತ್ರದ ಸರಾರ ಸದಾ ವಕೀಲರ ಪರವಾಗಿದೆ. ನ್ಯಾಯಕ್ಕಾಗಿ ಹೋರಾಡುವ ವಕೀಲರನ್ನೇ ಗುರಿಯಾಗಿಸಿ ಸೇಡು ತೀರಿಸಿಕೊಳ್ಳುವ ಪ್ರವೃತ್ತಿಗೆ ಕಡಿವಾಣ ಹಾಕಲೇಬೇಕಾಗಿದೆ ಎಂದು ಶಾಸಕ ಅಲ್ಲಂಪ್ರಭು ಪಾಟೀಲ್‌ ಅಭಿಪ್ರಾಯಪಟ್ಟರು.