ಕೊಲನಪಾಕ ಕ್ಷೇತ್ರದಲ್ಲಿ ಆಜಾದಿ ಅಮೃತ ಮಹೋತ್ಸವ ಅರಿವು ಆಚರಣೆ ಮಹಾಭಿಯಾನ

ಕಲಬುರಗಿ: ಜು.21:ಕೊಲನಪಾಕ ಕ್ಷೇತ್ರವು ಮಾನವ ಧರ್ಮದ ಉಗಮಕ್ಕೆ ಕಾರಣವಾಗಿರುವಂತ ಭಾರತದ ಸ್ವಾತಂತ್ರ್ಯ ಹೋರಾಟಗಳಿಗೆ ಬೆಳಕಾಗಿ ಸರ್ವ ಜನಾಂಗದವರು ಬದುಕು ಕಟ್ಟಿಕೊಳ್ಳಲು ಆದರ್ಶದ ಮೌಲ್ಯಗಳನ್ನು ನೀಡಿರುವ ಶ್ರೀ ಜಗದ್ಗುರು ರೇಣುಕಾಚಾರ್ಯರು ಆವಿರ್ಭಸಿದ ಶ್ರೀ ಸ್ವಯಂಭು ಸೋಮೇಶ್ವರ ಕ್ಷೇತ್ರವಾಗಿದೆ ಎಂದು ಸರಪಂಚ ಅರ್ತುಲ ಲಕ್ಷ್ಮೀಪ್ರಸಾದ ರೆಡ್ಡಿಯವರು ಅಭಿಪ್ರಾಯಿಸಿದರು.

ಅವರು ಕೊಲನಪಾಕ (ತೆಲಂಗಾಣ)ದಲ್ಲಿ ಕರ್ನಾಟಕ ರಾಜ್ಯದ ಹಾವೇರಿ ಜಿಲ್ಲೆ ಶಿಗ್ಗಾಂವಿಯ ಶ್ರೀ ರಂಭಾಪುರಿ ಜಗದ್ಗುರು ವೀರಗಂಗಾಧರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಿಂದ ಹಮ್ಮಿಕೊಂಡಿದ್ದ ಆಜಾದಿ ಅಮೃತ ಮಹೋತ್ಸವ ಅರಿವು ಆಚರಣೆ ಮಹಾಭಿಯಾನದ 3ನೇ ರಾಷ್ಟ್ರೀಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.

ಆದಿ ಕಾಲದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರು ಈ ಕ್ಷೇತ್ರದಲ್ಲಿ ಅವತರಿಸಿರುವ ಮೂಲಕ ಶಿವಸಂಸ್ಕøತಿ ಸರ್ವಕಾಲಿಕವಾಗಿ ಮನುಕುಲಕ್ಕೆ ಬೆಳಕು ಬೀರುವ ಇತಿಹಾಸವನ್ನು ನೀಡಿದೆ. ಈ ಕ್ಷೇತ್ರದ ಅಭಿವೃಧ್ದಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಗಮನಹರಿಸಿದರೆ ಕೂಡಿ ಬಾಳುವ ಸಂಸ್ಕøತಿ ಉಳಿಸಲು ಅವಕಾಶವಾಗುತ್ತದೆ. ಆಳುವ ಸರ್ಕಾರಗಳು ದೇಶದ ಇತಿಹಾಸಕ್ಕೆ ಸಾಕ್ಷಿಯಾಗಿರುವ ಮೂಲಕ್ಷೇತ್ರಗಳನ್ನು ಗುರುತಿಸಿ ಅವುಗಳ ಬೆಳವಣಿಗೆಗೆ ಸಂಕಲ್ಪಿಸಿದಾಗ ಮಾತ್ರ ಆಜಾದಿ ಕಾ ಅಮೃತ ಮಹೋತ್ಸವಕ್ಕೆ ಅರ್ಥ ಬರುತ್ತದೆ ಎಂದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಧರ್ಮದರ್ಶಿ ಗಂಗಲು ಶ್ರೀನಿವಾಸ ಯಾದವ ಮಾತನಾಡಿ ಹಲವು ಹದಿನೆಂಟು ವೃತ್ತಿಯ ಮಠಗಳಿಗೆ ನಾಂದಿ ಹಾಡಿದ ಪರಂಪರೆಯುಳ್ಳ ಕೊನಲಪಾಕ ಕ್ಷೇತ್ರ ಹೆಚ್ಚಿನ ಅಭಿವೃದ್ದಿಯನ್ನು ಕಾಣಬೇಕಾಗಿದೆ. ಸ್ಥಾನಿಕ ಸರ್ಕಾರ ಸಂಪೂರ್ಣವಾದ ಸಹಯೋಗ ನೀಡಲು ಸಿದ್ದವಿದೆ. ರಂಭಾಪುರೀಶ್ವರ ಕಾಲೇಜು ಈ ಕಾರ್ಯಕ್ರಮವನ್ನು ನಮ್ಮ ಗ್ರಾಮದಲ್ಲಿ ಹಮ್ಮಿಕೊಳ್ಳುವ ಮೂಲಕ ಭಾವೈಕ್ಯತೆಯನ್ನು ಬೆಳೆಸಲು ಶ್ರೀ ರಂಭಾಪುರಿ ಪೀಠದ ಜೊತೆಗಿನ ಅವಿನಾಭಾವ ಸಂಬಂಧ ಬೆಳಿಸಿಕೊಳ್ಳಲು ಅವಕಾಶ ಹೆಚ್ಚಿಸಿದೆ ಎಂದು ಹರ್ಷ ವ್ಯಕ್ತಪಡಿಸಿದರು.

 ಈ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರೀಯ ಪಾತ್ರ ವಹಿಸಿದ ಕುಟುಂಬದ ಪೈಕಿ ಗೊಲ್ಲ ಲಕ್ಷಯ್ಯ ಪುತ್ರ ಗೊಲ್ಲ ಮಚೇಂದ್ರ, ಅಕುಲ ವೆಂಕಯ್ಯ ಪುತ್ರ ಭೂಪತಿರಾವ್, ಅತುಲ ರಾಘವರೆಡ್ಡಿ, ಮದ್ದಿ ಜನಾರ್ಧನರೆಡ್ಡಿ ಪತ್ನಿ ಕಮಲಮ್ಮ, ಬೆಳಮಕೊಂಡ ಮಾಧವಲು ಪುತ್ರ ವಿಜಯಕುಮಾರ, ಅಂಕಮ ಅನಂತಮ ಪತ್ನಿ ಯಶೋಧ ಪುತ್ರ ಡಾ.ಅಂಕಮ ರಾಜಯ್ಯ ಮತ್ತು ಸರಪಂಚರು ಮತ್ತು ಧರ್ಮಕರ್ತರಿಗೆ ಹಾಗೂ ಅರ್ಚಕರಾದ ಸೋಮಯ್ಯಸ್ವಾಮಿ ಮತ್ತು ಗಂಗಾಧರಸ್ವಾಮಿಯವರಿಗೆ ಅಮೃತ ರತ್ನ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ಕೊಟ್ರೇಶಪ್ಪ ವಹಿಸಿ ಮಾತನಾಡುತ್ತ ಸ್ವಾತಂತ್ರ್ಯ ಹೋರಾಟದ ಅರಿವನ್ನು ಮೂಡಿಸುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು. ಮಲ್ಲಿಕಾರ್ಜುನ ಸ್ವಾಮಿ ನಿರ್ವಹಿಸಿದರು. ಸ್ವಾಗತವನ್ನು ಗದಿಗಯ್ಯಶಾಸ್ತ್ರಿ ಹಿರೇಮಠ ಪ್ರಾರ್ಥನೆಯನ್ನು ಮೇನಕಾ ಮತ್ತು ಸಂಗಡಿಗರು ಮಾಡಿದರು.