
ಅಥಣಿ :ಆ.24: ತಾಲೂಕಿನ ರಡ್ಡೇರಹಟ್ಟಿ ಸರಕಾರಿ ಪ್ರೌಢ ಶಾಲೆಯ ಸಹಶಿಕ್ಷಕಿ ಖ್ಯಾತ ಸಾಹಿತಿ, ಬರಹಗಾರ್ತಿ ಹಾಗೂ ಕವಯಿತ್ರಿ ಡಾ. ಅರ್ಚನಾ ಅಥಣಿ ಅವರು ಶ್ರೀಲಂಕಾದ ಕೊಲಂಬೋದಲ್ಲಿ ನಡೆಯಲಿರುವ 40ನೇ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಅವರು ಅಂತಾರಾಷ್ಟ್ರೀಯ ಸಾಂಸ್ಕೃತಿಕ ಫೆಸ್ಟ್ ಕೌನ್ಸಿಲ್, ಏಷಿಯನ್ ಮೀಡಿಯಾ ಕಲ್ಚರಲ್ ಅಕಾಡೆಮಿ, ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್ಸ್, ಸ್ವಾಮಿ ವಿವೇಕಾನಂದ ಕಲ್ಚರಲ್ ಸೆಂಟರ್, ಹೈ ಕಮಿಷನ್ ಆಪ್ ಇಂಡಿಯಾ ಕೊಲಂಬೋ ಆಶ್ರಯದಲ್ಲಿ ಹಮ್ಮಿಕೊಂಡಿರುವ 40ನೇ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮದಲ್ಲಿ ಹಲವಾರು ದಿಗ್ಗಜರೊಂದಿಗೆ ಡಾ.ಅರ್ಚನಾ ಅಥಣಿ ಅವರು ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಅನಾವರಣ ಮಾಡಲಿದ್ದಾರೆ.
ಆಗಸ್ಟ್ 25ರಂದು ಶುಕ್ರವಾರ ಕೊಲೊಂಬೋದ ಯುನಿವರ್ಸಿಟಿ ಆಪ್ ವಿಜುವಲ್ & ಪರ್ಫಾಮಿರ್ಂಗ್ ಆಟ್ರ್ಸ ಅಡಿಟೋರಿಯಂನಲ್ಲಿ ನಡೆಯಲಿದೆ. ಅಂತಾರಾಷ್ಟ್ರೀಯ ಸಾಂಸ್ಕೃತಿಕ ಫೆಸ್ಟ್ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಹುಮುಖ ಪ್ರತಿಭೆಯಾಗಿರುವ ಡಾ.ಅರ್ಚನಾ ಅವರು ಕನ್ನಡ ಭಾಷೆ ಸಾಹಿತ್ಯ, ಸಂಸ್ಕೃತಿಯನ್ನು ಹೊರ ದೇಶದಲ್ಲಿ ಪ್ರಸಾರ ಮಾಡಲಿದ್ದು, ಕಾರ್ಯಕ್ರಮದಲ್ಲಿ ಕವಿಗಳೂ, ಭರತನಾಟ್ಯ ಕಲಾವಿದರು, ಯಕ್ಷಗಾನ, ಸೂತ್ರದ ಬೊಂಬೆಯಾಟ ಪ್ರದರ್ಶನ, ಕನ್ನಡ ಗೀತ ಗಾಯನ ನಡೆಯಲಿದ್ದು, ಡಾ. ಅರ್ಚನಾ ಅವರು, ಈ ಸಂಸ್ಕೃತಿ ಉತ್ಸವದಲ್ಲಿ ಕವಿಗೋಷ್ಠಿಯಲ್ಲಿ ಪಾಲ್ಗೊಂಡು ಕವನ ವಾಚನ ಮಾಡಲಿದ್ದಾರೆ.
ಡಾ.ಅರ್ಚನಾ ಅಥಣಿ ಅವರೊಂದಿಗೆ ರಾಜ್ಯ ಹಾಗೂ ದೇಶ, ವಿದೇಶಗಳಿಂದ ಹಲವಾರು ಖ್ಯಾತ ಸಾಹಿತಿಗಳು, ಕವಿಗಳೂ ಭರತನಾಟ್ಯ, ಜಾನಪದ ಹಾಡುಗಾರರು ಭಾಗವಹಿಸಿ ತಮ್ಮದೇ ಆದ ಶೈಲಿಯಲ್ಲಿ ಈ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಮೆರಗು ತರಲಿದ್ದಾರೆ.
ಅವರು ಬೆಳಗಾವಿ ಜಿಲ್ಲೆಯಿಂದ ಏಕೈಕ ಕವಿಯತ್ರಿಯಾಗಿ ಆಯ್ಕೆಯಾಗಿದ್ದು ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಿಂದ ಕೊಲಂಬೊ ಗೆ ತೆರಳಲಿದ್ದು, ಗಡಿ ಭಾಗದ ಸಾಹಿತ್ಯಾಭಿಮಾನಿಗಳಲ್ಲಿ ಹರ್ಷವನ್ನುಂಟು ಮಾಡಿದೆ