ಕೊಱ್ಲಗುಂದಿಯಲ್ಲಿ ಎಸ್.ಯು.ಸಿ.ಐ ಪ್ರಚಾರ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮೇ.01: ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ವತಿಯಿಂದ ತಾಲೂಕಿನ ಕೊಱ್ಲಗುಂದಿಯಲ್ಲಿ ಚುನಾವಣಾ ಪ್ರಚಾರ ಮಾಡಲಾಯಿತು.
 ಪಕ್ಷದ ರಾಜ್ಯ ಸೆಕ್ರೆಟರಿಯೇಟ್ ಸದಸ್ಯರಾದ ಕೆ. ಸೋಮಶೇಖರ್ ಮಾತನಾಡುತ್ತಾ ” ಬಿಜೆಪಿ ಸರ್ಕಾರದಲ್ಲಿ ದುರಾಡಳಿತ, ಭ್ರಷ್ಟಾಚಾರ ಮುಗಿಲು ಮುಟ್ಟಿದೆ.40% ಸರ್ಕಾರ ಎಂಬ ಕುಖ್ಯಾತಿಗೆ
ಒಳಗಾಗಿದೆ ಎಂದು ಆರೋಪಿಸಿ, ಪಕ್ಷದ ಅಭ್ಯರ್ಥಿಗೆ ಮತನೀಡುವಂತೆ ಕೋರಿದರು.
ಎಸ್ ಯು ಸಿ ಐ ಕಮ್ಯುನಿಸ್ಟ್ ಪಕ್ಷದ ಕಂಪ್ಲಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾದ ಎ. ದೇವದಾಸ್ ಮಾತನಾಡುತ್ತಾ, ಕಳೆದ 5 ವರ್ಷದಲ್ಲಿ ಬಿಜೆಪಿ, ಹಾಗೂ ಕಾಂಗ್ರೆಸ್-ಜೆಡಿ(ಎಸ್) ಸಮಿಶ್ರ ಸರ್ಕಾರ ಈ ರಾಜ್ಯವನ್ನಾಳಿವೆ, ಆದರೆ ಜನರ ಜೀವನದಲ್ಲಿ ಯಾವುದೇ  ಬದಲಾವಣೆಯಾಗಿಲ್ಲ. ಈ ನಿಟ್ಟಿನಲ್ಲಿ ಇಂಥ ಪಕ್ಷಗಳನ್ನು ತಿರಸ್ಕರಿಸಿ ಹೋರಾಟಪರ ಪಕ್ಷ ಎಸ್ ಯು ಸಿ ಐ ಕಮ್ಯುನಿಸ್ಟ್ ಪಕ್ಷವನ್ನು ಗೆಲ್ಲಿಸಬೇಕೆಂದು” ಮನವಿ ಮಾಡಿಕೊಂಡರು.
ಪ್ರಚಾರದ ನಂತರ ಎ.ದೇವದಾಸ್ ಅವರು  ನೆರೆದಿದ್ದ ನಾಗರಿಕರನ್ನು ಭೇಟಿಯಾಗಿ ಮತಯಾಚನೆ ಮಾಡಿದರು.ಈ ಸಂದರ್ಭದಲ್ಲಿ ಹನುಮಪ್ಪ, ಗಾದಿಲಿಂಗಪ್ಪ ,ಗೋಪಾಲ ಮತ್ತಿತರರು ಉಪಸ್ಥಿತರಿದ್ದರು.