ಕೊರೋನ ವಾರಿಯರ್‌ಗೆ ಧೈರ್ಯ ತುಂಬಿ

ಹೊಸನಗರ.ಮೇ.೨೮;ವಿಶ್ವದ ಕರೋನ ಪೀಡಿತ ಪ್ರದೇಶಗಳಲ್ಲಿ ಭಾರತ ಮೂರನೇ ಸ್ಥಾನ ಪಡೆದಿರುವುದು ಆತಂಕದ ಸಂಗತಿ ಆಗಿದೆ ಎಂದು ತಹಶೀಲ್ದಾರ್ ವಿ.ಎಸ್. ರಾಜೀವ್ ವಿಷಾಧ ವ್ಯಕ್ತ ಪಡಿಸಿದರು.ಸ್ಥಳೀಯ ಲಯನ್ಸ್ ಸಂಸ್ಥೆ, ಕಳೂರು ಸೊಸೈಟಿ ಹಾಗೂ ಪಟ್ಟಣ ಪಂಚಾಯತಿ ಆಶ್ರಯದಲ್ಲಿ ಕರೋನ ವಾರಿಯರ್ ಆದ ಪತ್ರಕರ್ತರು ಹಾಗೂ ಪೌರಕಾರ್ಮಿಕರಿಗಾಗಿ ಆಯೋಜಿಸಿದ್ದ ಸ್ಯಾನಿಟೈಜರ್, ಮಾಸ್ಕ್ ಹಾಗೂ ಆಹಾರದ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಕಿಟ್ ವಿತರಿಸಿ ಅವರು ಮಾತನಾಡಿದರು.ಕರೋನ ರೋಗವಿಂದು ಗ್ರಾಮೀಣ ಭಾಗಕ್ಕೂ ಅಡಿ ಇಟ್ಟಿದೆ. ಜನತೆ ಕುಂಟು ನೆಪ ಹೇಳಿ ಲಾಕ್‌ಡೌನ್ ವೇಳೆಯಲ್ಲೂ ವಿನಾ:ಕಾರಣ ಸುತ್ತುತ್ತಿರುವುದು ರೋಗದ ಉಲ್ಬಣಕ್ಕೆ ಕಾರಣವಾಗಿದೆ. ದುಡಿಯುವ ಕೈಗಳಿಗೆ ಕೆಲಸವಿಲ್ಲದೆ ಅದೆಷ್ಟೋ ಕುಟುಂಬಗಳು ಬದುಕು ಸಾಗಿಸುವುದೇ ಕಷ್ಟವಾಗಿದೆ. ಇಂತಹ ನೊಂದ ಸಂತ್ರಸ್ತ ಕುಟುಂಬಗಳಿಗೆ ಸಂಘ/ಸAಸ್ಥೆಗಳು ಸಹಾಯ ಹಸ್ತ ಚಾಚಬೇಕಿದೆ. ಈ ನಿಟ್ಟಿನಲ್ಲಿ ಲಯನ್ಸ್ ಸಂಸ್ಥೆ ಹಾಗೂ ಕಳೂರು ಸೊಸೈಟಿ ದಿಟ್ಟ ಹೆಜ್ಜೆ ಇಟ್ಟಿವೆ. ಇದು ನೀಡುವ ಕೈಗಳಿಗೆ ಪ್ರೇರಣೆ ಆಗಲಿದೆ ಎಂದು ಶ್ಲಾಘಿಸಿದರು.ಲಯನ್ಸ್ ಸಂಸ್ಥೆ ನಿರ್ದೇಶಕ ಎಂ.ಎನ್. ಸುಧಾಕರ್ ಮಾತನಾಡಿ, ಕರೋ£ ರೋಗದÀ ಪ್ರಥಮ ಅಲೆಯ ವೇಳೆಯಲ್ಲಿ ಸಹ ಸಂಸ್ಥೆ ಅರ್ಹರಿಗೆ ಪಡಿತರ ಕಿಟ್, ಆರೋಗ್ಯ ಸಲಕರಣೆಗಳು, ಮಾಸ್ಕ್, ಗ್ಲೌಸ್, ಸ್ಯಾನಿಟೈಜರ್ ವಿತರಿಸುವ ಕಾರ್ಯಕ್ಕೆ ಮುಂದಾಗುವ ಮೂಲಕ ಸಮಾಜಮುಖಿ ಕಾರ್ಯಕ್ಕೆ ಸಾಥ್ ನೀಡಿತ್ತು ಎಂದು ತಿಳಿಸಿದರು.ಸಂಸ್ಥೆಯ ಅಧ್ಯಕ್ಷ ಡಾ. ಪ್ರವೀಣ್, ಕಾರ್ಯದರ್ಶಿ ದೀಪಕ್ ಸ್ವರೂಪ್, ನಿರ್ದೇಶಕರಾದ ಗುಬ್ಬಿಗ ರವಿ, ಮಲ್ಲಿಕ, ಕಳೂರು ಸೊಸೈಟಿ ಅಧ್ಯಕ್ಷ ವಿನಯ್ ದುಮ್ಮ, ಸಿಇಓ ಶ್ರೀನಿವಾಸ್, ಉದಯ ಶೆಟ್ಟಿ, ಶಿರಸ್ಥೆದಾರ್ ಸುಧೀಂದ್ರ, ಶ್ರೀಕಾಂತ್ ಹೆಗ್ಡೆ, ಮುಖ್ಯಾಧಿಕಾರಿ ಬಾಲಚಂದ್ರಪ್ಪ, ಅರೋಗ್ಯ ನಿರೀಕ್ಷಕ ಪ್ರಶಾಂತ್ ಮೊದಲಾದವರು ಉಪಸ್ಥಿತರಿದ್ದರು.