ಕೊರೋನ ನಿಗ್ರಹಕ್ಕೆ ಮೌಡ್ಯತೆ ಬೇಡ

ಚಿತ್ರದುರ್ಗ. ಮೇ.೨೭; ಹೊಗೆ ಹಾಕುವುದರಿಂದ ಸೊಳ್ಳೆಗಳನ್ನು ಓಡಿಸಬಹುದೇ ಹೊರತು ಕೊರೋನ ವೈರಸ್‌ನಲ್ಲ, ಕೋಳಿ, ಕುರಿ, ಮೇಕೆ ಬಲಿ ಕೊಡುವುದು, ಊರ ಮುಂದಿನ ದೇವರ ಕಲ್ಲಿಗೆ ನೀರು ಸುರಿದು, ನಿಂಬೆಹಣ್ಣನ್ನು ಕತ್ತರಿಸಿ ಹಾಕುವುದರಿಂದ ಕೊರೋನ ನಿಗ್ರಹ ಅಸಾದ್ಯ, ಜನರು ಮೂಡನಂಬಿಕೆಗಳನ್ನ ಬೆಳೆಸಿಕೊಂಡು, ಸಾಮಾಜಿಕ ಅಂತರ ಮರೆತು, ಮಾಸ್ಕ್ ಇಲ್ಲದೇ ಗುಂಪು ಸೇರುವುದು ಮಾಡಿದರೇ ಇನ್ನೂ ಕರೋನ ಹೆಚ್ಚಾಗುವುದೇ ಹೊರತು ಕಡಿಮೆಯಾಗುವುದಿಲ್ಲ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ. ಎಚ್. ಕೆ. ಎಸ್. ಸ್ವಾಮಿ ನುಡಿದರು. ಅವರು ನಗರದ ವಾಸವಿ ಶಾಲೆ ಮುಂಭಾಗದ ಸೊಪ್ಪಿನ ಮಾರ್ಕೆಟ್‌ನ ವೃತ್ತದಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ಅಂಜನಾದೇವಿ ಮಹಿಳಾ ಗ್ರಾಮೀಣಾಭಿವೃದ್ಧಿ ಸಮಾಜ ಸಂಸ್ಥೆಯ ಸಹಯೋಗದೊಂದಿಗೆ ಆಯೋಜಿಸಿದ್ದ “ಕರೋನ ನಿಗ್ರಹಕ್ಕೆ ಮೌಡ್ಯತೆ ಬೇಡ” ಎಂಬ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ವಿಜ್ಞಾನ ಸಂಘಟನೆಗಳು ಜನರ ಬಳಿ ಹೋಗಿ, ಅವರ ಮನ ಪರಿವರ್ತಿಸುವ ಕೆಲಸ ಮಾಡಬೇಕು, ಜನರು ಪ್ರಾಣಿಬಲಿ ಕೊಡುವುದು, ಅನ್ನ ಚೆಲ್ಲುವುದು, ಹೊಗೆ ಹಾಕುವುದು, ಮುಂತಾದ ಹಣ ಕಳೆದುಕೊಳ್ಳುವ ಕಾರ್ಯಮಾಡಿ, ರೋಗವನ್ನು ಸಹ ಹಬ್ಬಿಸಿಕೊಳ್ಳುವಂತಾಗಬಾರದು. ಜನರು ವೈಜ್ಞಾನಿಕ ಜ್ಞಾನವನ್ನು ಹೆಚ್ಚಿಸಿಕೊಂಡು, ವೈದ್ಯರ ಸಲಹೆ ಪಡೆದು, ರೋಗಕ್ಕೆ ಸರಿಯಾದ ಔಷಧ ಪಡೆದುಕೊಳ್ಳುವುದನ್ನ ರೂಡಿಮಾಡಿಕೊಳ್ಳಬೇಕು, ಕರೋನ ಬಗ್ಗೆ ಭಯ ನಿವಾರಣೆಮಾಡಿಕೊಳ್ಳಬೇಕು ಎಂದರು.ಹಳ್ಳಿಗರು ಆಸ್ಪತ್ರೆಗಳಿಗೆ ಬಂದಾಗ ಅವರಿಗೆ ಹಾಸಿಗೆ ಇಲ್ಲಾ, ಆಕ್ಸಿಜನ್ ಇಲ್ಲಾ, ಔಷಧಗಳಿಲ್ಲಾ ಎಂಬ ಸನ್ನಿವೇಶ ಸೃಷ್ಟಿಯಾಗಬಾರದು. ಅವರಿಗೆ ಹೆಚ್ಚಿನ ವೈದ್ಯಕೀಯ ವೆಚ್ಚಭರಿಸಲಾಗದೆ, ಮೂಡನಂಬಿಕೆಗಳ ಮೊರೆ ಹೋಗುತ್ತಾರೆ, ಇಲ್ಲಾ ನಕಲಿ ವೈದ್ಯರ ಬಳಿ ತೆರಳಿ, ನಕಲಿ ಔಷಧ ಪಡೆದುಕೊಳ್ಳುತ್ತಾರೆ. ಅವರಿಗೆ ನಾವು ಸೂಕ್ತ ಸಮಯದಲ್ಲಿ, ಅರ್ಥವಾಗುವ ರೀತಿಯಲ್ಲಿ ವೈಜ್ಞಾನಿಕ ಜ್ಞಾನ ನೀಡಬೇಕು, ವಿಜ್ಞಾನ ಬಡವರ ಬಳಿ ತೆರಳಬೇಕಾಗುತ್ತದೆ, ವಿಜ್ಞಾನ ಮಾನವೀಯತೆಯನ್ನು ಮರೆತಾಗ, ಅಜ್ಞಾ ನ ಜನರ ಮನಸ್ಸನ್ನ ಆವರಿಸಿಬಿಡುತ್ತದೆ. ಹಳ್ಳಿಗಳಲ್ಲಿ ಅಷ್ಟೆ ಅಲ್ಲದೇ, ನಗರಗಳಲ್ಲೂ ಸಹ ಮೂಡನಂಬಿಕೆಗಳು ಮನೆಮಾಡಿಕೊಂಡಿವೆ. ಅವುಗಳನ್ನ ನಾವು ಸಾವಕಾಶದಿಂದ ನಿವಾರಿಸಬೇಕಾಗಿದೆ ಎಂದರು.ಕಾರ್ಯಕ್ರಮದಲ್ಲಿ ಅಂಜನಾದೇವಿ ಮಹಿಳಾ ಗ್ರಾಮೀಣಾಭಿವೃದ್ಧಿ ಸಮಾಜದ ಅಧ್ಯಕ್ಷರಾದ ಶ್ರೀಮತಿ ಶಶಿರೇಖಾ, ಗಜೇಂದ್ರ ಶೋ ರೂಮ್‌ನ ರಮೇಶ, ಚಂದನ್, ಸುಬ್ರಹ್ಮಣ್ಯ, ಸುಭಾಷ್, ವೀರೇಂದ್ರ, ಶ್ರೀದೇವಿ ಪುಟ್ಟಮ್ಮ. ಹಾಜರಿದ್ದರು.ಹೆಚ್.ಎಸ್, ಪ್ರೇರಣ ಕರೋನ ಗೀತೆಗಳನ್ನ ಹಾಡಿದರು. ಕರೋನದ ಬಿತ್ತಿಪತ್ರಗಳನ್ನ ಪ್ರದರ್ಶಿಸಲಾಯಿತು.