ಕೊರೋನ ನಿಗ್ರಹಕ್ಕೆ ಆರೋಗ್ಯದ ಸೂತ್ರಗಳನ್ನ ಪಾಲಿಸಿ.

ಚಿತ್ರದುರ್ಗ. ಜೂ.೧; ಸರಿಯಾದ ಗುಣಮಟ್ಟದ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಇಟ್ಟುಕೊಂಡು, ಕೈಯನ್ನೂ ಆಗಿಂದಾಗೆ ಸ್ವಚ್ಚಗೊಳಿಸುತ್ತಾ, ಸತ್ವವುಳ್ಳ ಆಹಾರ ಸೇವನೆ ಮಾಡುತ್ತಾ, ಲಸಿಕೆ ಸಿಕ್ಕ ತಕ್ಷಣ ಲಸಿಕೆ ಹಾಕಿಸಿಕೊಂಡು, ಸುರಕ್ಷಿತವಾಗಿ ಮನೆಯಲ್ಲೇ ಇದ್ದು, ಕೊರೋನ ಕಡಿಮೆಯಾಗುವ ತನಕ ಸಹಕರಿಸಿ, ಸಮಯಕ್ಕೆ ಸರಿಯಾಗಿ ವೈದ್ಯಕೀಯ ಸಲಹೆಗಳನ್ನ ಪಡೆಯುತ್ತಾ ನಾವು ಆರೋಗ್ಯ ಪೂರ್ಣ ಜೀವನವನ್ನ ಮರಳಿ ಪಡೆಯಬಹುದು, ಇಲ್ಲದಿದ್ದರೆ ಸಾವು ನೋವು ಜಾಸ್ತಿಯಾಗಿ, ಮನೆ ಮನೆಗಳಲ್ಲೂ ದುಃಖದ ಛಾಯೆ ಎದ್ದು ಕಾಣುವಂತಾಗುತ್ತದೆ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ. ಎಚ್. ಕೆ. ಎಸ್. ಸ್ವಾಮಿ ನುಡಿದರು.ಅವರು ಚಿತ್ರದುರ್ಗ ನಗರದ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ಏರ್ಪಡಿಸಿರುವ ತರಕಾರಿ ಮಾರುಕಟ್ಟೆಯಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮತ್ತು ಚಿತ್ರದುರ್ಗ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಆಯೋಜಿಸಿದ್ದ “ಆರೋಗ್ಯ ಸೂತ್ರಗಳನ್ನ ಪಾಲಿಸಿ, ಕರೋನ ಗೆಲ್ಲಿರಿ” ಎಂಬ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ವೈದ್ಯಕೀಯ ವೆಚ್ಚ ಹೆಚ್ಚಾಗುತ್ತಿರುವುದರಿಂದ ಜನರು ವೈದ್ಯರ ಬಳಿ ತೆರಳದೇ, ತಾವೇ ಸ್ವ ಇಚ್ಛೆಯಿಂದ, ಔಷಧದ ಅಂಗಡಿಗಳಲ್ಲಿ ಮಾರಾಟ ಮಾಡುವರಿಂದ ಮನಸ್ಸಾ ಇಚ್ಛಾ ಔಷಧಗಳನ್ನ ಖರೀದಿ ಮಾಡಿ, ಮಾತ್ರೆಗಳನ್ನ ನುಂಗುತ್ತಿದ್ದಾರೆ. ಕರೋನ ಭೀತಿಯಿಂದ ರೋಗವನ್ನ ಮರೆಮಾಚುತ್ತಿದ್ದು, ಅದು ಹರಡಲು ಕಾರಣವಾಗುತ್ತಿದ್ದಾರೆ. ಕರೋನ ಬಂದವರು ಸಹ, ಹೋಮ್ ಐಸೋಲೇಷನ್‌ನಲ್ಲಿ ಸರಿಯಾಗಿ ನಿಯಮಗಳನ್ನ ಪಾಲಿಸದೇ, ಹೊರಗಡೆ ಸುತ್ತಾಡುವುದು, ತರಕಾರಿ, ಹಣ್ಣು ತರುವ ನೆಪದಲ್ಲಿ ಹೊರಗೆ ಬರುವುದು ಗಂಡಾAತಕಾರಿಯಾಗಿದೆ. ನಕಲಿ ವೈದ್ಯರ ಬಳಿ ತರೆಳಿ, ನಕಲಿ ಔಷಧ ಸೇವನೆ ಮಾಡುವರ ಸಂಖ್ಯೆ ಕೂಡ ಅಧಿಕವಾಗಿದೆ. ಔಷಧಗಳಲ್ಲೂ ಮೋಸ, ವಂಚನೆ ಮಾಡುವ ತಂಡಗಳು ಹುಟ್ಟಿಕೊಂಡಿವೆ. ಸರ್ಕಾರಿ ಲಸಿಕೆಗಳನ್ನು ಸಹ ಹಣಕ್ಕೆ ಮಾರಾಟ ಮಾಡುವ ತಂಡಗಳಿವೆ. ಜೀವ ರಕ್ಷಕ ಔಷಧಗಳನ್ನ ನಕಲು ಮಾಡಿ, ದುಪ್ಪಟ್ಟು ಬೆಲೆಗೆ ಮಾರುವ ವ್ಯವಸ್ಥೆ ಹುಟ್ಟಿಕೊಂಡಿದೆ. ಇಂತಹ ಜಾಲದಲ್ಲಿ, ಹಣದ ಆಸೆಗೆ ಕೆಲವು, ವೈದ್ಯರು, ಅಧಿಕಾರಿಗಳು, ಶಾಮೀಲಾಗಿ, ಸಮಾಜದ ಅವನತಿಗೆ ಕಾರಣವಾಗುತ್ತಿದ್ದಾರೆ. ಜನರ ಇದರ ಬಗ್ಗೆ ಜಾಗ್ರತೆ ವಹಿಸಬೇಕು ಎಂದರು.ಡೂಪ್ಲಿಕೇಟ್ ಔಷಧಿಗಳು ಕಾಳಸಂತೆಯಲ್ಲಿ ಮಾರಾಟವಾಗುತ್ತಿದ್ದು, ಆಕ್ಸಿಜನ್ ಸಿಲಿಂಡರ್‌ಗಳನ್ನು ಸಹ ಹೆಚ್ಚಿನ ಬೆಲೆಗೆ ಮಾರುತ್ತಿದ್ದು, ಜನರು ಇದರ ಬಗ್ಗೆ ಜಾಗೃತರಾಗಿರಬೇಕು. ಆಂಬುಲೆನ್ಸ್ನ ಸೇವೆಯನ್ನು ಸಹ ಅತಿ ಹೆಚ್ಚಿನ ಹಣಕ್ಕಾಗಿ ಪೀಡಿಸುವ ದಂಧೆ ಹೆಚ್ಚಿದೆ. ಆಸ್ಪತ್ರಗಳಲ್ಲಿ ಬೆಡ್ ಸಿಗದಂತೆ ಮಾಡಿ, ಹೆಚ್ಚಿನ ಹಣಕ್ಕೆ ಕಾಳಸಂತೆಯಲ್ಲಿ ಮಾರಾಟ ಮಾಡುವ ತಂಡಗಳು ಕೆಲಸ ಮಾಡುತ್ತಿವೆ. ಇವರೆಲ್ಲರಿಗೆ ಜನರೇ ಗೊತ್ತಿಲ್ಲದಂತೆ ಪ್ರೋತ್ಸಾಹ ನೀಡುತ್ತಿದ್ದು, ವಂಚಕರಿಗೆ ಭಯವಿಲ್ಲದಂತಾಗಿದೆ. ಭ್ರಷ್ಟಾಚಾರ ನಿಗ್ರಹ ದಳ, ಔಷಧ ನಿಯಂತ್ರಣ ಇಲಾಖೆಗಳು ಹೆಚ್ಚಿನ ಶ್ರಮ ವಹಿಸಿ, ಜನರಿಗೆ ನ್ಯಾಯ ಒದಗಿಸಿಕೊಡಬೇಕಾಗಿದೆ ಎಂದರು.ಮಾಟ ಮಂತ್ರ ಮುಂತಾದ ವಿಚಾರಗಳನ್ನು ಜನರ ಮುಂದೆ ಇಟ್ಟು, ಜ್ಯೋತಿಷ್ಯದ ಮುಖಾಂತರ ಕರೋನ ನಿಗ್ರಹಿಸುವಂಥ ಮಾರ್ಗಗಳನ್ನ ಕೆಲವು ವಂಚಕರು ಬಳಸುತ್ತಿರುವುದರಿಂದ, ಹಳ್ಳಿಗಳಲ್ಲಿ ಮುಗ್ಧರು ಹಣ ಮತ್ತು ಪ್ರಾಣ ಎರಡನ್ನೂ ಕಳೆದುಕೊಳ್ಳುವಂತಾಗಿದೆ, ಜನರು ವೈಜ್ಞಾನಿಕ ಜ್ಞಾನವನ್ನ ಹೆಚ್ಚಿಸಿಕೊಂಡು, ಕರೋನವನ್ನ ತೊಡೆದು ಹಾಕಲು, ವೈದ್ಯರೊಂದಿಗೆ ಸಹಕರಿಸಬೇಕು ಎಂದರು.ಕಾರ್ಯಕ್ರಮದಲ್ಲಿ ಎಫ್‌ಪಿಬಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಶಿವಕುಮಾರ, ಪಿಎಸ್ ಐ, ಗೀತಾ, ಎಕ್ಸ್ಟೆನ್ಷನ್ ಪೊಲೀಸ್ ಸ್ಟೇಷನ್, ಗಂಗಾದರಪ್ಪ ಎಎಸ್‌ಐ, ಕಾನ್ಸ್ಟೆಬಲ್ ಸಿಬ್ಬಂದಿ ನವೀನ್‌ಕಾಯಕಡ್, ಚಿದಾನಂದ ರೆಡ್ಡಿ, ಹಾಲೇಶ್, ಕೃಷ್ಣಪ್ಪ ಲಕ್ಕಿಕೋಣಿ, ಅಶೋಕ, ಇಸ್ಮೆöÊಲ್ ಮತ್ತು ಗಜೇಂದ್ರ ಹೊಂಡಾದ ಮತ್ತು ಸಂಚಾರಿ ಪೋಲಿಸ್ ಸಿಬ್ಬಂದಿ ಹಾಜರಿದ್ದರು.