ಕೊರೋನ ತಡೆಗಟ್ಟಲು ಲಸಿಕೆಯೇ ಪರಿಹಾರ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ

ವಿಜಯಪುರ, ಜೂ.2-ನಗರಾದ್ಯಂತ ಉಚಿತವಾಗಿ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಕರೆಯ ಮೇರೆಗೆ ಮನೆ ಮನೆಗೆ ಲಸಿಕೆ ಹಾಕುವ ಕಾರ್ಯಕ್ರಮದಡಿ, ಉಚಿತ ಲಸಿಕೆ ಆಭಿಯಾನವನ್ನು ಹಮ್ಮಿಕೊಂಡಿದ್ದು, ಅದರಂತೆ ಇಂದು ವಾರ್ಡ ನಂ-14 ರ ಸ್ಟೇಶನ್ ರಸ್ತೆಯ, ದರ್ಬಾರ ಹೈಸ್ಕೂಲ್ ಹತ್ತಿರದ ಮಾಂಗಗಾರುಡು ಕಾಲನಿಯ ಸಮಾಜದ ಸಭಾಭವನ ಹಾಗೂ ವಾರ್ಡ ನಂ.35 ರಲ್ಲಿ ಬರುವ ಕಾಲೇಭಾಗದ ಜೈ ಹನುಮಾನ ಗುಡಿ ಆವರಣದಲ್ಲಿ ಉಚಿತ ಕೋವಿಡ್ ಲಸಿಕೆ ಆಭಿಯಾನಕ್ಕೆ ನಗರ ಶಾಸಕ ಬಸನಗೌಡ ರಾ. ಪಾಟೀಲ್ ಯತ್ನಾಳ ಚಾಲನೆ ನೀಡಿದರು.
ನಗರದ ಎಲ್ಲ ಸಾರ್ವಜನಿಕರು ಸಹ ತಮ್ಮ ತಮ್ಮ ಮನೆಗಳಲ್ಲಿರುವ 45 ವರ್ಷ ಮೇಲ್ಪಟ್ಟವರಿಗೆ ಕಡ್ಡಾಯವಾಗಿ ಕೋವಿಡ್ ಲಸಿಕೆಯನ್ನು ಹಾಕಿಸಿ, ಹಾಕಿಸಿಕೊಳ್ಳಿ. ಲಸಿಕೆ ಪಡೆದ ಎಲ್ಲರೂ ಈ ರೋಗದಿಂದ ಪಾರಾಗಬಹುದಾಗಿದ್ದು, ಲಸಿಕೆ ಪಡೆದಾಗಲೂ ಸಹ ಕೆಲವೊಮ್ಮೆ ರೋಗ ಲಕ್ಷಣ ಕಾಣಬಹುದು ಆದರೆ ಪ್ರಾಣಕ್ಕೆ ಏನು ತೊಂದರೆಯಾಗುವುದಿಲ್ಲ, ತೀರ್ವ ಸ್ವರೂಪದ ಅಪಾಯಗಳಾಗುವದಿಲ್ಲ, ರೋಗದಿಂದ ಆರೋಗ್ಯದಲ್ಲಿ ತೀರ್ವ ತೊಂದರೆಯಾಗುವದನ್ನು ತಪ್ಪಿಸಲು ಸಹಕಾರಿಯಾಗುತ್ತದೆ ಆದ್ದರಿಂದ ತಪ್ಪದೆ ಸಲಿಕೆ ಪಡೆಯಿರಿ ಎಂದರು.
ಲಸಿಕಾ ಕೇಂದ್ರಗಳಲ್ಲಿ ಕೋವ್ಯಾಕ್ಸಿನ್ ಮತ್ತು ಕೋವಿಶಿಲ್ಡ ಪ್ರಥಮ ಡೋಸ್ ಲಸಿಕೆ ಹಾಗೂ ಎರಡನೇ ಡೋಸ್ ಲಸಿಕೆ ಹಾಕುವ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಸದರಿ ಲಸಿಕಾ ಸ್ಥಳಕ್ಕೆ ಸುತ್ತಲಿನ ನಾಗರಿಕರನ್ನು ಕರೆ ತರಲು ನಗರ ಶಾಸಕರು ಶ್ರೀ ಸಿದ್ಧೇಶ್ವರ ಸಂಸ್ಥೆಯಡಿಯ ಶಾಲಾ ಬಸ್‍ಗಳ ವ್ಯವಸ್ಥೆಯನ್ನು ಕಲ್ಪಿಸಿ, ನಾಗರಿಕರಿಗೆ ಲಸಿಕಾ ಕಾರ್ಯಕ್ರಮದ ಮಾಹಿತಿ ನೀಡಲು ಆಟೋ ಪ್ರಚಾರದ ವ್ಯವಸ್ಥೆಯನ್ನು ಮಾಡಿದ್ದರು. ಮನೆ ಮನೆಗೆ ಹೋಗಿ ಲಸಿಕಾ ಕೇಂದ್ರದ ಮಾಹಿತಿ ನೀಡಿ, ಲಸಿಕಾ ಕೇಂದ್ರಗಳಿಗೆ ಸಾರ್ವಜನಿಕರನ್ನು ಕರೆ ತರಲು ಸಿದ್ಧಸಿರಿ ಸೌಹಾರ್ದ ಸಹಕಾರಿ ಸಿಬ್ಬಂದಿಗಳನ್ನು ನೀಡಿದ್ದರು.
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಹರಿ ಗೊಳಸಂಗಿ, ಸದಸ್ಯರಾದ ವಿಕ್ರಮ್ ಗಾಯಕವಾಡ, ಡಾ.ಜನ್ನತ್, ಡಾ. ಮಧಿಯಾ, ಚಂದ್ರು ಚೌಧರಿ, ಸಂತೋಷ ಪಾಟೀಲ್, ದಾದಾಸಾಹೇಬ್ ಬಾಗಾಯತ್, ಸದಾನಂದ ಗುನ್ನಾಪೂರ, ಜವಾಹರ ಗೋಸಾವಿ, ಶೀವು ದೇವಕರ, ಲಕ್ಷ್ಮಣ ಅಥಣಿ, ಭೀಮು ಮಾಶ್ಯಾಳ, ಮಾನಿಕಚಂದ ಗೊಲಾಂಡೆ, ರಾಜಶೇಖರ ಭಜಂತ್ರಿ, ಪ್ರಕಾಶ ಚವ್ಹಾಣ, ನಾಗರಾಜ ಮುಳವಾಡ, ಸಿದ್ದು ಪೂಜಾರಿ, ಶಾಮರಾಯ ದೇವಕರ ಸೇರಿದಂತೆ ಶ್ರೀ ಸಿದ್ಧೇಶ್ವರ ಸಂಸ್ಥೆ, ಸಿದ್ಧಸಿರಿ ಸೌಹಾರ್ದ ಸಹಕಾರಿ ಸಿಬ್ಬಂದಿಗಳು, ಆರೋಗ್ಯ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು.