ಕೊರೋನ ಉಲ್ಬಣ; ಹೊಸನಗರ ಸಂಪೂರ್ಣ ಲಾಕ್‌ಡೌನ್

ಹೊಸನಗರ.ಮೇ.೨೯;  ಕೊರೋನ ಮಹಾಮಾರಿ ರೋಗ ತಡೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ಅಧಿಕಾರಿ ವರ್ಗ ಅಹೋರಾತ್ರಿ ಕಾರ್ರೋನ್ಮುಕವಾಗಿದೆ ಎಂದು ರಾಜ್ಯ ಎಂಎಸ್‌ಐಎಲ್ ಸಂಸ್ಥೆ ಅಧ್ಯಕ್ಷ, ಶಾಸಕ ಹರತಾಳು ಹಾಲಪ್ಪ ತಿಳಿಸಿದರು.ರಾಜ್ಯ ಎಂಎಸ್‌ಐಎಲ್ ಸಂಸ್ಥೆಯ ರೂ 74.5 ಲಕ್ಷ ಅನುದಾನದಲ್ಲಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಆಕ್ಸಿಜನ್ ಘಟಕದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.ಚಿಕಿತ್ಸೆಗೆ ಅಗತ್ಯವಿರುವ ಆಕ್ಸೋಮೀಟರ್, ಆಕ್ಸಿಜನ್ ಕಾನ್ಸೆ÷್ಟçÃಟರ್ ಈಗಾಗಲೇ ಸರಬರಾಜು ಮಾಡಲಾಗಿದ್ದು, ಸೂಕ್ತ ವೈದ್ಯಕೀಯ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಐಸಿಯು ಘಟಕ, ಅನಸ್ತೇಶಿಯ ವೈದ್ಯರ ನೇಮಕಕ್ಕೆ ಮುಂಬರುವ ದಿನಗಳಲ್ಲಿ ಕ್ರಮಕೈಗೊಳ್ಳಲಾಗುವುದು. ಆಕ್ಸಿಜನ್ ಘಟಕದ ತುರ್ತು ಅಗತ್ಯವಿರುವ ಹಿನ್ನಲೆಯಲ್ಲಿ, ಇಂದು ನೂತನ ಘಟಕ ಸ್ಥಾಪನೆಗೆ ಚಾಲನೆ ನೀಡಲಾಗಿದ್ದು, ಪ್ರತಿದಿನ 400 ಕಿಲೋ ಲೀಟರ್ ಆಕ್ಸಿಜನ್ ಘಟಕವು ಉತ್ಪಾದನೆ ಮಾಡಲಿದ್ದು, ಇದರಿಂದ ಒಂದೇ ಬಾರಿಗೆ ನಲವತ್ತರಿಂದ ಐವತ್ತು ರೋಗಿಗಳಿಗೆ ಹೈಸ್ಪಿಡ್ ಆಕ್ಸಿಜನ್ ಪೂರೈಕೆಗೆ ಸಹಕಾರಿ ಆಗಲಿದೆ ಎಂದರು. ಸಂತ್ರಸûರಿಗೆ ಈಗಾಗಲೇ ಸೇವಾಭಾರತಿ ಹಾಗೂ ಸಂಘ/ಸAಸ್ಥೆಗೆ ಉಚಿತ ಊಟ ವಿತರಿಸುತ್ತಿದ್ದು, ಅಗತ್ಯ ಬಿದ್ದಲ್ಲಿ ಇಂದಿರಾ ಕ್ಯಾಂಟೀನ್ ಮಾದರಿ ಭೋಜನ ವ್ಯವಸ್ಥೆ ಕಲ್ಪಿಸಲು ತಾಲೂಕು ಆಡಳಿತಕ್ಕೆ ಸೂಚಿಸಲಾಗಿದೆ ಎಂದರು. ತೀರ್ಥಹಳ್ಳಿ ಕೇತ್ರದ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಘಟಕ ಸ್ಥಾಪನೆಯಿಂದ ರೋಗ ಪೀಡಿತರು ದೂರದ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ತೆರಳುವುದು ತಪ್ಪಿಸಬಹುದಲ್ಲದೆ, ಅವರ ಸಮಯ, ಹಣ ಸಹ ಉಳಿಯಲಿದೆ. ಜನರ ನಿರ್ಲಕ್ಷಯವೇ ರೋಗ ಹರಡುವಿಕೆ ಕಾರಣ ಆಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೋಗ ತಡೆಗೆ ಸೂಕ್ತ ಕೈಕೊಳ್ಳುತ್ತಿರುವು ಆಶಾದಾಯಕ ಬೆಳವಣಿಗೆ ಆಗಿದೆ ಎಂದರು. ಇದೇ ಸಂದರ್ಭದಲ್ಲಿ ಹಲವು ಅಕ್ಸಿಜನ್ ಕನ್ಸಟ್ರೇಟರ್, ಆಕ್ಸಿಮೀಟರ್‌ಗಳನ್ನು ವ್ಶೆದ್ಯರಿಗೆ ಹಸ್ತಾಂತರಿಸಿದರು.ಈ ವೇಳೆ ಜಿ.ಪಂ. ಸದಸ್ಯ ಸುರೇಶ್ ಸ್ವಾಮೀರಾವ್, ತಾ.ಪಂ. ಮಾಜಿ ಅಧ್ಯಕ್ಷ ವೀರೇಶ್ ಅಲುವಳ್ಳಿ, ತಹಶೀಲ್ದಾರ್ ರಾಜೀವ್, ಇಒ ಪ್ರವೀಣ್, ಸಿಪಿಐ ಮಧುಸೂಧನ್, ವೈದ್ಯಾಧಿಕಾರಿಗಳಾದ ಡಾ. ಲಿಂಗರಾಜ್, ಡಾ. ಸುರೇಶ್, ಡಾ. ಶಾಂತರಾಜ್, ಪ್ರಮುಖರಾದ ಎನ್.ಆರ್. ದೇವಾನಂದ್, ಎಂ.ಎನ್. ಸುಧಾಕರ್, ಮೊದಲಾದವರು ಇದ್ದರು. 
ಕೊವೀಡ್-19 ಖಾಯಿಲೆ ತಾಲೂಕಿನಾದ್ಯಂತ ತೀವ್ರತರವಾಗಿ ಹರಡುತ್ತಿರುವ ಹಿನ್ನಲೆ, ಜನಸಾಮಾನ್ಯರ ಹಿತದೃಷ್ಟಿಯಿಂದ, ತಾಲೂಕಿನ ರಿಪ್ಪನ್ ಪೇಟೆ, ಹುಂಚ ಹಾಗೂ ಪಟ್ಟಣದ ಹಿಂದುಳಿದ ವರ್ಗದ ಹಾಸ್ಟೆಲ್ ಕಟ್ಟಡದಲ್ಲಿ ಈಗಾಗಲೇ ನೂತನ ಕರೋನ ಕೇರ್ ಸೆಂಟರ್ ಆರಂಭಿಸಲಾಗಿದೆ. ಅಲ್ಲದೆ, ಈ ಪ್ರದೇಶಗಳನ್ನು ಸಂಪೂರ್ಣ ಲಾಕ್‌ಡೌನ್ ಮಾಡಲಾಗಿದೆ. ಅಧಿಕಾರಿ ವರ್ಗಗಳ ಜೊತೆ ಚರ್ಚಿಸಿದ ಬಳಿಕ ಇಡೀ ತಾಲೂಕನ್ನು ಮೇ 31ರ ಸೋಮವಾರದಿಂದ ಬರುವ ಜೂನ್ 7ರ ವರೆಗೂ ಸಂಪೂರ್ಣ ಲಾಕ್‌ಡೌನ್ ಮಾಡಲು ತಾಲೂಕು ಆಡಳಿತಕ್ಕೆ ಸೂಚಿಸಲಾಗಿದೆ ; ಶಾಸಕ ಹರತಾಳು ಹಾಲಪ್ಪಚಿತ್ರ; 29ಹೆಚ್‌ಓಎಸ್‌ಪಿ1; ಹೊಸನಗರದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ನೂತನ ಆಕ್ಸಿಜನ್ ಘಟಕದ ಕಾಮಗಾರಿಗೆ ಶಾಸಕ ಹರತಾಳು ಹಾಲಪ್ಪ ಶಂಕುಸ್ಥಾಪನೆ ನೆರವೇರಿಸಿದರು.ಚಿತ್ರ; 29ಹೆಚ್‌ಓಎಸ್‌ಪಿ2; ಹೊಸನಗರ ಸಾರ್ವಜನಿಕ ಆಸ್ಪತ್ರೆಯ ವೈದ್ಯ ಸಿಬ್ಬಂದಿಗಳಿಗೆ ಶಾಸಕ ಹರತಾಳು ಹಾಲಪ್ಪ ಹಲವು ಆಕ್ಸಿಮೀಟರ್, ಆಕ್ಸಿಜನ್ ಕಾನ್ಸಟ್ರೇಟರ್ ಪರಿಕರಗಳನ್ನು ಹಸ್ತಾಂತರಿಸಿದರು.