ಕೊರೋನ ಅಭಿಯಾನದಲ್ಲಿ 105 ವರ್ಷದ ವೃದ್ಧೆಗೆ ಲಸಿಕೆ

ದಾವಣಗೆರೆ.ಏ.೧೯; ತಾಲ್ಲೂಕಿನ ಎಲೆ ಬೇತೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೊರೋನ ಲಸಿಕೆ ಉತ್ಸವ ನಡೆಯಿತು ಈ ಸಂದರ್ಭದಲ್ಲಿ 105 ವರ್ಷದ ಅಜ್ಜಿ  ಅಂಬಾಬಾಯಿ ಕುಲಕರ್ಣಿ   ಅವರು   ಕೊರೋನ ಲಸಿಕೆ  ಹಾಕಿಸಿಕೊಂಡರು. ಅವರು ದಾವಣಗೆರೆ ಕೆಟಿಜೆ ನಗರದ ರಂಗನಾಥ ನಾಡಿಗರ್ ಮನೆತನದವರಾಗಿದ್ದಾರೆ ಇವರ ಜೊತೆಗೆ 80ವರ್ಷದ  ಮಗಳು ಸರಸ್ವತಿ ನಾಡಿಗರ್ ಹಾಗೂ ಕುಟುಂಬಸ್ಥರು ಕೊರೋನ  ಲಸಿಕೆ ಹಾಕಿಸಿಕೊಂಡರು .ಈ ಸಂದರ್ಭದಲ್ಲಿ ಮಾತನಾಡಿದ ಅಜ್ಜಿ 45ವರ್ಷ  ಮೇಲ್ಪಟ್ಟವರು ಎಲ್ಲರೂ  ಲಸಿಕೆ ಹಾಕಿಸಿಕೊಳ್ಳಿ ಆರೋಗ್ಯವಂತರಾಗಿರಿ ಎಂದು ತಿಳಿಸಿದರು.      ಕೊರೋನ ಲಸಿಕೆ ಹಾಕಿಸಿಕೊಳ್ಳಲು ಬಂದ ಸಾರ್ವಜನಿಕರು ಅಜ್ಜಿಯ ಮಾತನ್ನು ಕೇಳಿ ಧೈರ್ಯದಿಂದ ಲಸಿಕೆ ಹಾಕಿಸಿಕೊಂಡು ಮನೆಗೆ ತೆರಳಿದರು.  ಈ ಸಂದರ್ಭದಲ್ಲಿ  ಆಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.  ಆಶಾ ಭಾನುಪ್ರಕಾಶ್, ಬೇತೂರು ಕೇಂದ್ರದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ  ಡಿ ಮಿಲ್ಕಾ ,ನಿರ್ಮಲ ಕುಲಕರ್ಣಿ ,ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು .ಎಲೆಬೇತೂರು ಉಪಕೇಂದ್ರದಲ್ಲಿ ಏಪ್ರಿಲ್‌ 5 ರಂದು  ಕೊರೋನ ಲಸಿಕೆ ಹಾಕಲು  ಪ್ರಾರಂಭಿಸಿದ್ದು ಇದುವರೆಗೆ  222 ಜನ  ಲಸಿಕೆ ಹಾಕಿಸಿಕೊಂಡಿದ್ದಾರೆ  .