ಕೊರೋನಾ ಹೋಗಲಾಡಿಸಲು ಎಲ್ಲರೂ ಶ್ರಮಿಸಬೇಕು – ವಸಂತ್ ಕುಮಾರ್

ರಾಯಚೂರು.ಮೇ.೨೦-ಪ್ರಸ್ತುತ ದೇಶದಲ್ಲಿ ಕೊರೋನ ವೈರಸ್ ಆರ್ಭಟಿಸುತ್ತದೆ. ಇಂತಹ ಸಂದರ್ಭದಲ್ಲಿ ಪ್ರತಿಯೊಬ್ಬರು ಎಚ್ಚರಿಕೆಯಿಂದ ಜಾಗೃತರಾಗಿ, ಕರೋನಾ ನಿಯಂತ್ರಿಸುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಮಾಜಿ ಕಾಡಾ ಅಧ್ಯಕ್ಷರಾದ ಎ.ವಸಂತ್ ಕುಮಾರ್ ಹೇಳಿದರು
ಅವರು ಇಂದು ತಮ್ಮ ನಿವಾಸದಲ್ಲಿ ತಮ್ಮ ೫೮ನೇ ಹುಟ್ಟುಹಬ್ಬವನ್ನು ಅಭಿಮಾನಿಗಳ ಒತ್ತಾಯದ ಮೇರೆಗೆ ಬಹಳ ಸರಳವಾಗಿ ಆಚರಿಸಿಕೊಂಡ ಸಂದರ್ಭದಲ್ಲಿ ಮಾತನಾಡಿ, ಮುಂದುವರೆದು
ಕರೋನಾ ಹಿನ್ನೆಲೆಯಲ್ಲಿ ಸಮಾಜದಲ್ಲಿ ದೀನ, ದಲಿತರು, ಶ್ರಮಿಕ ವರ್ಗ ಬಹಳ ಕಷ್ಟ ಅನುಭವಿಸುತ್ತಿದೆ. ಆದ್ದರಿಂದ ತಾವೆಲ್ಲರೂ ತಮ್ಮ ಸಾಮರ್ಥ್ಯ ಅನುಗುಣವಾಗಿ ಸಹಾಯ-ಸಹಕಾರ ಮಾಡಬೇಕೆಂದು ತಮ್ಮ ಅಭಿಮಾನಿಗಳಲ್ಲಿ ಕರೆ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಜೆ ಅಂಜನ್ ಕುಮಾರ್ ಮಾತನಾಡಿ ತಮ್ಮ ಹುಟ್ಟುಹಬ್ಬ ಸಂದರ್ಭದಲ್ಲಿಯೂ ತಾವುಗಳು ಬಡವ, ದೀನದಲಿತರ, ಶ್ರೇಯೋಭಿವೃದ್ಧಿಗಾಗಿ ಯೋಚನೆ ಮಾಡುತ್ತಿರುವುದು ಇದು ತಮ್ಮ ದೊಡ್ಡಗುಣ ಎಂದು ಶುಭ ಹಾರೈಸಿದರು.
ಇನ್ನೋರ್ವ ಜನ ಸೇವಾ ಟ್ರಸ್ಟ್ ಕಾರ್ಯದರ್ಶಿಗಳಾದ ಜೆ.ಎಲ್ ಗೋಪಿ ಮಾತನಾಡಿ
೫೮ನೇ ವಸಂತಕ್ಕೆ ಕಾಲಿಟ್ಟ ವಸಂತ್ ಕುಮಾರ್ ಅವರಿಗೆ ಶುಭಕೋರಿ ನಾವೆಲ್ಲರೂ ಕರೋನಾ ವೈರಸ್ ನ ನಿಯಮಗಳನ್ನು ಜಾಗೃತವಾಗಿ ಅನುಸರಿಸುತ್ತೇವೆ ಎಂದರು.
ಡಾ: ರಾಜಕುಮಾರ್ ಅಭಿಮಾನಿಗಳ ಸಂಘದ ಮಲ್ಲೇಶ್ ಗದಾರ್ ಅವರು ಮಾತನಾಡುತ್ತಾ ತಾವು ಹಿಂದೆ ಮಾಡಿದ ನಿಸ್ವಾರ್ಥ ಸಮಾಜಸೇವೆಯೇ ಇಂತಹ ಕೊರೊನಾ ಸಂದರ್ಭದಲ್ಲಿಯೂ ತಮ್ಮನ್ನು ಅಭಿನಂದಿಸಲು ನಮ್ಮನ್ನು ಕರೆತಂದಿದೆ ಎಂದು ಶುಭ ಹಾರೈಸಿದರು.
ಎ. ವಸಂತ್ ಕುಮಾರ್ ಅಭಿಮಾನಿಗಳ ಸಂಘದ ಜೆ ಎಸ್ ರಾಜೇಶ್ ಮಾತನಾಡುತ್ತಾ ಹಿಂದಿನ ಕರೋನಾ ಅಲೆಯಲ್ಲಿ ನಾವುಗಳು ಬಡಬಗ್ಗರಿಗೆ ಹಣ್ಣು ಹಂಪಲವನ್ನು ನಮ್ಮ ಸಂಘದಿಂದ ನೀಡಿದ್ದೇವೆ ಎಂದರು. ಈ ಸಂದರ್ಭದಲ್ಲಿ ಜನ ಸೇವಾ ಟ್ರಸ್ಟಿನ ಜೆ.ತಿಮಯ್ಯ ,ಜೆ.ಟಿ ಮಂಜುನಾಥ್, ಜೆ ಜಿ ಪ್ರೇಮ್, ಯಶ್ವಂತ್ ಕುಮಾರ್ ಮುಂತಾದವರು ಶುಭಕೋರಿದರು.