ಕೊರೋನಾ ಹೊಡೆದೋಡಿಸಲು ಲಸಿಕೆಯೇ ಮದ್ದು: ಶಿವಾನಂದ ಭುಯ್ಯಾರ

ವಿಜಯಪುರ, ಏ.6- ಶ್ರೀ ಅಂಭಾಭವಾನಿ ಸ್ತ್ರೀ ಶಕ್ತಿ ಸಂಘ, ವಿಜಯಪುರ ಇವರ ಸಹಯೋಗದಲ್ಲಿ ವಾರ್ಡ ಜಾಡರ ಓನಿಯಲ್ಲಿ ಕೊರೋನಾ ಲಸಿಕೆ ಕಾರ್ಯಕ್ರಮವು ಜರುಗಿತು. 85 ವರ್ಷದ ವಯಸ್ಸಿನ ವೃದ್ದೆಗೆ ಲಸಿಕೆ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಪ.ಪೂ. ಶ್ರದ್ದಾನಂದ ಸ್ವಾಮೀಜಿ ವಹಿಸಿದ್ದರು. ಅಧ್ಯಕ್ಷತೆಯನ್ನು ಉಮೇಶ ವಂದಾಲ ವಹಿಸಿ ಮಾತನಾಡುತ್ತ, ಕೊರೋನಾ ಲಸಿಕೆ ತಜ್ಞರ ತಂಡದಿಂದ ತಯಾರಾಗಿದ್ದು, ದೇಶದ ಹೆಮ್ಮೆಯ ಪ್ರಧಾನಿಗಳಾದ ನರೇಂದ್ರ ಮೋದೀಜಿಯವರು ಅತ್ಯಂತ ಮುತುವರ್ಜಿ ವಹಿಸಿ ಲಸಿಕೆಯನ್ನು ತಯಾರಿಸಿದ್ದು, ಲಸಿಕೆಯಿಂದ ಯಾವುದೇ ತರಹದ ಅಡ್ಡ ಪರಿಣಾಮ ಇರುವದಿಲ್ಲ. ಎಲ್ಲರು ದೈರ್ಯದಿಂದ ಲಸಿಕೆ ಹಾಕಿಕೊಳ್ಳುವಂತೆ ಸಲಹೆ ನೀಡಿದರು.
ಮುಖ್ಯ ಅತಿಥಿಗಳಾಗಿ ಶಿವಾನಂದ ಭುಯ್ಯಾರ ಮಾತನಾಡಿ, ಕೊರೋನಾ ವೈರಸ್ಸು ಆತಂಕಕಾರಿಯಾಗಿ 2ನೇ ಅಲೆಯನ್ನು ಹುಟ್ಟಿಸಿದ್ದು, ಇದರಲ್ಲಿ ಭಾರತ ದೇಶದಲ್ಲಿ ಸರಿ ಸುಮಾರು ದಿನಕ್ಕೆ 1 ಲಕ್ಷದಷ್ಟು ಲಸಿಕೆಯನ್ನು ಹಾಕುತ್ತಿದ್ದು ಹೆಮ್ಮೆಯ ವಿಷಯವಾಗಿದೆ. ಲಸಿಕೆ ಹಾಕಿಸಿಕೊಳ್ಳುವದರಿಂದ ಕೆಲವೊಂದು ಜನರಿಗೆ 2 ರಿಂದ 3 ದಿನ ಜ್ವರ, ಕೆಮ್ಮ, ನೆಗಡಿ ಅಂತಹ ಗುಣಲಕ್ಷಣಗಳನ್ನು ಕಂಡುಬರುತ್ತದೆ. ಆದ್ದರಿಂದ ಇದಕ್ಕೆ ಹೆದರುವ ಅಗತ್ಯವಿಲ್ಲ. ಅದೇ ರೀತಿ ವೈದ್ಯಾಧಿಕಾರಿಗಳು, ಹಾಗೂ ಆಶಾ ಕಾರ್ಯಕರ್ತೆಯರು, ನಸಿಂಗ್ ಸಿಬ್ಬಂದಿಗಳು, ಗಡಿಯಲ್ಲಿ ಯೋಧರಲ್ಲಿ ಕೆಲಸ ನಿರ್ವಹಿಸುವಂತೆ ತಮ್ಮ ಕೆಲಸವನ್ನು ನಿರ್ವಹಿಸುತ್ತಿದ್ದು, ತಮ್ಮ ಜೀವದ ಹಂಗನ್ನು ತೊರೆದು ನಮ್ಮ ಆರೋಗ್ಯದ ಹೊಣೆ ಹೊತ್ತಿದ್ದು, ಅವರೆಲ್ಲರಿಗೂ ಕೂಡಾ ಅಭಿನಂದನೆ ಸಲ್ಲಿಸುವುದರ ಮೂಲಕ 45 ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆ ಹಾಕಿಕೊಳ್ಳುವಂತೆ ತಿಳಿಸಿದರು. ಇದೇ ವೇಳೆಯಲ್ಲಿ ಸುಮಾರು 200 ಜನಕ್ಕೆ ಲಸಿಕೆ ಹಾಕಲಾಯಿತು.
ಈ ಸಂದರ್ಭದಲ್ಲಿ ತಾಲೂಕಾ ವೈದ್ಯಾಧಿಕಾರಿಗಳಾದ ಕವಿತಾ ದೊಡಮನಿ, ಡಾ. ಬಾಲಕೃಷ್ಣ, ಸ್ತ್ರೀ ಶಕ್ತಿ ಸಂಘದ ಅಧ್ಯಕ್ಷೆ ಅನ್ನಪೂರ್ಣ ರೆಬಿನಾಳ, ಓಣಿಯ ಹಿರಿಯರಾದ ಗುರುನಾಥ ಗಣಿ, ಈಶ್ವರಪ್ಪ ಗೊಳಸಂಗಿ, ಶಿವಾನಂದ ಬೆಳಗಲಿ, ಕಲಾವತಿ ನೀಲವಾಣಿ, ಮಂಜುಳಾ ಚವ್ಹಾಣ, ಅಶೋಕ ಗೊಳಸಂಗಿ, ಬಸವರಾಜ ಗೊಳಸಂಗಿ, ಸಂತೋಷ ಯಕ್ಕಪ್ಪಗೋಳ, ಅಪ್ಪು ಪೆದ್ದಿ, ಸ್ತ್ರೀ ಶಕ್ತಿ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.