ಕೊರೋನಾ ಹೆಚ್ಚಳ: ಜೆಇಇ ಮುಖ್ಯ ಪರೀಕ್ಷೆ‌ ಮುಂದೂಡಿಕೆ

ನವದೆಹಲಿ,ಮೇ.4- ದೇಶದಲ್ಲಿ ಕೊರೊನಾ ಸೋಂಕು ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮೊನ್ನೆಯಷ್ಟೇ ನೀಟ್- ಪಿಜಿ‌ ಪರೀಕ್ಷೆಯನ್ನು ಮುಂದೂಡಿದ್ದ ಕೇಂದ್ರ ಸರ್ಕಾರ ಇದೀಗೆ ಜೆಇಇ ಮುಖ್ಯ ಪರೀಕ್ಷೆಯನ್ನು ಮುಂಡೂಡಿದೆ.

ಮೇ 24,25,26,27 ಮತ್ತು 28 ರಂದು ದೇಶಾದ್ಯಂತ ಜೆಇಇ ಮುಖ್ಯ ಪರೀಕ್ಷೆಗೆ ದಿನಾಂಕ ನಿಗಧಿಯಾಗಿತ್ತು.ದೇಶದಲ್ಲಿ ಸೋ‌ಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜೆಇಇ ಮುಖ್ಯ ಪರೀಕ್ಷೆಯನ್ನು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಮುಂದೂಡಿದೆ.

ಪರೀಕ್ಷಾ ‌ದಿನಾಂಕವನ್ನು ಪರಿಸ್ಥಿತಿ ನೋಡಿಕೊಂಡು ದಿನಾಂಕ ಪ್ರಕಟಿಸಲಾಗುವುದು ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಖ್ ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು ಪರಿಸ್ಥಿತಿ ಆಧರಿಸಿ ಮುಂದಿನ ಪರೀಕ್ಷಾ ದಿನಾಂಕವು ಪ್ರಕಟಿಸಲಾಗುವುದು.ವಿದ್ಯಾರ್ಥಿಗಳು ಆತಂಕ ಪಡೆಯುವ ಅಗತ್ಯ‌ಇಲ್ಲ ಎಂದು ಅವರು ಹೇಳಿದ್ದಾರೆ.

ಜೆಇಇ ಪರೀಕ್ಷೆ ಗೆ ವಿದ್ಯಾರ್ಥಿಗಳು ಸಜ್ಜಾಗಿ,ಹಾಗು ಪರೀಕ್ಷೆ ‌ನಡೆಸುವ ಸಂಬಂದ ರಾಷ್ಟ್ರೀಯ ಪರೀಕ್ಷಾ ಆಯೋಗ ಕಾಲ ಕಾಲಕ್ಕೆ ಮಾಹಿತಿ ನೀಡಲಿದೆ ಎಂದು ತಿಳಿಸಿದ್ದಾರೆ.