ಕೊರೋನಾ ಹೆಚ್ಚಳ: ಜಿಮ್,ಈಜುಕೊಳ ಬಂದ್,‌ ಚಿತ್ರಮಂದಿರಗಳಲ್ಲಿ ಶೇ.50 ಸಾಮರ್ಥ್ಯ ಕ್ಕೆ ಆದೇಶ

ಬೆಂಗಳೂರು, ಏ.2- ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಕೊರೋನಾ ಸಂಖ್ಯೆ ನಿತ್ಯ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಮ್, ಈಜುಕೊಳಗಳನ್ನು ಸಂಪೂರ್ಣವಾಗಿ ಬಂದ್ ಮಾಡಿ ರಾಜ್ಯಸರ್ಕಾರ ಆದೇಶ ಹೊರಡಿಸಿದೆ.

ಇದರ ಜೊತೆಗೆ ಚಿತ್ರಮಂದಿರಗಳಲ್ಲಿ ಶೇಕಡ 50 ರಷ್ಟು ಸಾಮರ್ಥ್ಯವನ್ನು ಮಿತಿಗೊಳಿಸಿ ಸರ್ಕಾರ ಇಂದು ಆದೇಶ ಹೊರಡಿಸಿದೆ

ರಾಜ ಸರ್ಕಾರ ಹೊಸದಾಗಿ ಹೊರಡಿಸಿರುವ ಮಾರ್ಗಸೂಚಿಗಳು ಏಪ್ರಿಲ್ 20ರ ತನಕ ಅನ್ವಯವಾಗಲಿದೆ ಎಂದು ರಾಜ್ಯ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.

ಜಿಮ್ ಗಳು,ಈಜುಕೊಳ, ಪಾರ್ಟಿ ಹಾಲ್,ಕ್ಲಬ್ ಹೌಸ್ ಸಂಪೂರ್ಣವಾಗಿ ಬಂದ್ ಮಾಡುವಂತೆ ಸೂಚನೆ ನೀಡಲಾಗಿದೆ.

ಶೇ. 50 ರ ಸಾಮರ್ಥ್ಯ:

ರಾಜ್ಯದಲ್ಲಿ ಕೊರೊನಾ ಸೋಂಕು ನಿತ್ಯ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಚಿತ್ರಮಂದಿರಗಳಲ್ಲಿ ಶೇಕಡ 50ರಷ್ಟು ಪ್ರೇಕ್ಷಕರ ಸಾಮರ್ಥ್ಯವನ್ನು ಮಿತಿಗೊಳಿಸಿ ಆದೇಶ ಹೊರಡಿಸಲಾಗಿದೆ.

ಬೆಂಗಳೂರು ನಗರ, ಗ್ರಾಮಾಂತರ, ಮೈಸೂರು ಕಲಬುರ್ಗಿ, ದಕ್ಷಿಣ ಕನ್ನಡ, ಉಡುಪಿ ಬೀದರ್ ಧಾರವಾಡ ಜಿಲ್ಲೆಗಳಲ್ಲಿ ಶೇಕಡ 50 ರಷ್ಟು ಪ್ರೇಕ್ಷಕರ ಸಾಮರ್ಥ್ಯ ಕಡ್ಡಾಯವಾಗಿ ಪಾಲಿಸುವಂತೆ ಸರ್ಕಾರ ತನ್ನ ಆದೇಶದಲ್ಲಿ ತಿಳಿಸಿದೆ.

ಇದರ ಜೊತೆಗೆ ರಾಜಕೀಯ ಸಭೆ-ಸಮಾರಂಭಗಳು ಧಾರ್ಮಿಕ ಸಮಾರಂಭಗಳಲ್ಲಿ ಜನ ಸೇರುವುದನ್ನು ಕಡ್ಡಾಯವಾಗಿ ನಿಷೇಧ ಹೇರಲಾಗಿದೆ.

ಇದರ ಜೊತೆಗೆ ರ್ಯಾಲಿ ಪ್ರತಿಭಟನೆಗಳಿಗೆ ಕೂಡ ಸರ್ಕಾರ ನಿಷೇಧ ಏರಿದೆ.

ಆರರಿಂದ 9ನೇ ತರಗತಿಯ ಶಾಲೆಗಳಿಗೆ ಹಾಜರಾಗುವುದನ್ನು ಸರ್ಕಾರ ನಿಷೇಧಿಸಿದೆ ಆದ್ದರಿಂದ 12ನೇ ತರಗತಿಯ ಶಾಲೆಗಳು ಎಂದಿನಂತೆ ನಡೆಯಲಿವೆ

ಕಾಲೇಜು ತರಗತಿಗಳು ಕೂಡ ಬಂದ್ ಮಾಡಲಾಗಿದೆ. ಜೊತೆಗೆ ಎಂದಿನಂತೆ ಬೋರ್ಡ್ ಪರೀಕ್ಷೆಗಳು ಮತ್ತು ವಿಶ್ವವಿದ್ಯಾಲಯದ ಪರೀಕ್ಷೆಗಳು ಮುಂದುವರೆಯಲಿದೆ ಎಂದು ಸರ್ಕಾರ ತನ್ನ ಆದೇಶದಲ್ಲಿ ತಿಳಿಸಿದೆ