ಕೊರೋನಾ ಹಬ್ಬುವುದು ತಡೆಗಟ್ಟಲು ಜನರ ಸಹಕಾರ ಅಗತ್ಯ ಆದರೆ ಜಿಲ್ಲಾಡಳಿತ ನಿರ್ಲಕ್ಷ್ಯ ಸಲ್ಲ; ಅವಿನಾಶ ಜಗನ್ನಾಥ

ಯಾದಗಿರಿ:ಎ.24: ಕೊರೋನ ಎರಡನೇ ಅಲೆ ಅತಿಬವೇಗವಾಗಿ ಹಬ್ಬುತ್ತಿದ್ದು ಇದರ ವಿರುದ್ಧ ಜಿಲ್ಲಾಡಳಿತ ಮತ್ತು ಸರ್ಕಾರ ಕ್ರಮ ಕೈಗೊಳ್ಳುತ್ತಿದ್ದು ಸರ್ಕಾರದ ಜೊತೆಗೆ ಸಾರ್ವಜನಿಕರು ಸಹ ಕೈಜೋಡಿಸಿ ಮಾತ್ರ ಕರೋನಗೆ ಸೆಡ್ಡು ಹೊಡೆಯಲು ಸಾಧ್ಯ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಯುವ ಘಟಕದ ಜಿಲ್ಲಾಧ್ಯಕ್ಷ ಅವಿನಾಶ್ ಜಗನ್ನಾಥ ಅಭಿಪ್ರಾಯ ಪಟ್ಟಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಯಾದಗಿರಿ ಜಿಲ್ಲಾಡಳಿತ ಕರೋನ ಎರಡನೇ ಅಲೆ ವಿರುದ್ಧ ಸಮರ್ಪಕವಾಗಿ ಜಿಲ್ಲಾಡಳಿತ ಕಾರ್ಯ ನಿರ್ವಹಿಸುವ ಮೂಲಕ, ಜನರಿಗೆ ಜಾಗೃತಿ ಮೂಡಿಸಿ ಜಿಲ್ಲೆಯ ಜನರ ಆರೋಗ್ಯ ಮತ್ತು ಜೀವನ ಕಾಪಾಡಬೇಕಾದ ಜವಬ್ದಾರಿ ಜಿಲ್ಲಾಡಳಿತದ ಮೇಲಿದೆ ಎಂದು ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದಾರೆ.
ಯಾದಗಿರಿ ಜಿಲ್ಲೆಯಲ್ಲಿ ಕರೋನ ಎರಡನೇ ಅಲೆ ಅಬ್ಬರಿಸುತ್ತಿದೆ. ಇದರ ನಡುವೆ ಯಾದಗಿರಿ ಜಿಲ್ಲಾಡಳಿತ ನಿರ್ಲಕ್ಷ್ಯ ಧೋರಣೆ ಗಾಯದ ಮೇಲೆ ಬರೆ ಎಳದಂತಾಗಿದೆ.
ಕಳೆದ ಬಾರಿ ಮಹಾರಾಷ್ಟ್ರದಿಂದ ಜಿಲ್ಲೆಗೆ ಬಂದವರಿಂದ ಸಾಕಷ್ಟು ನೋವನ್ನು ಯಾದಗಿರಿ ಜನ ಪಟ್ಟರು.ಈಗ ಮತ್ತೆ ಮಹಾರಾಷ್ಟ್ರದ ಕಂಟಕ ಜಿಲ್ಲೆಗೆ ಅಂಟುತ್ತಿದೆ. ಇಂತಹ ಹೊತ್ತಿನಲ್ಲಿ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಮತ್ತು ಪೆÇಲೀಸ್ ಇಲಾಖೆ ಸಮರ್ಥವಾಗಿ ಕೆಲಸ ಮಾಡಬೇಕು. ಇದರಿಂದಾಗಿ ಜಿಲ್ಲೆಯ ಜನರ ಧೈರ್ಯ ಮತ್ತು ಆತ್ಮವಿಶ್ವಾಸ ಹೆಚ್ಚುತ್ತದೆ. ರೈಲ್ವೆ ನಿಲ್ದಾಣದಲ್ಲಿ ಮಹಾರಾಷ್ಟ್ರದಿಂದ ಬಂದ ಪ್ರಯಾಣಿಕರು ಕೋವಿಡ್ ಟೆಸ್ಟ್ ಮಾಡಿಸಲು ಅ¸ಡ್ಡೆತನ ತೋರುತ್ತಿದ್ದಾರೆ, ಹೀಗಾಗಿ ಅವರಿಗೆ ಜಾಗೃತಿ ಮೂಡಿಸಲು ಮತ್ತು ಕಡಿಮೆ ಸಮಯದಲ್ಲಿ ಟೆಸ್ಟ್ ಮಾಡಲು ಹೆಚ್ಚುವರಿ ಕೋವಿಡ್ ಟೆಸ್ಟ್ ಸೆಂಟರ್ ನ್ನು ರೈಲ್ವೆ ನಿಲ್ದಾಣದಲ್ಲಿ ಆರಂಭಿಸಬೇಕು, ಇನ್ನು ಹೆಚ್ಚಿನ ಪೆÇಲೀಸ್ ಸಿಬ್ಬಂದಿ ನೇಮಮಾಡಬೇಕು. ಇನ್ನೂ ಈಗಾಗಲೇ ಆರಂಭಿಸಿರುವ ಚೆಕ್ ಪೆÇೀಸ್ಟ್ ಗಳಲ್ಲಿ ಸಿಬ್ಬಂದಿಗಳಿಗೆ ಮೂಲಭೂತ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ.
ಹೀಗಾಗಿ ಎಲ್ಲಾ ಚೆಕ್ ಪೆÇೀಸ್ಟ್ ಗಳ ನೀರು, ನೆರಳು, ಪೌಷ್ಟಿಕ ಆಹಾರ ವ್ಯವಸ್ಥೆಯನ್ನು ಕರೋನ ವಾರಿಯರ್ಸ್ ಗೆ ಮಾಡಬೇಕು. ಬೀದಿಯ ವ್ಯಾಪಾರಸ್ಥರಿಗೆ ಕಳೆದ ಬಾರಿ ನಿಯೋಜಿಸಿದಂತೆ ಪ್ರತ್ಯೇಕ ಸ್ಥಳ ನಿಗದಿ ಮಾಡಬೇಕು. ನಗರದಲ್ಲಿ ಇನ್ನೂ ಹೆಚ್ಚಿನ ಕಠಿಣ ಕಾನೂನು ಕ್ರಮಗಳನ್ನು ಜಾರಿಗೆ ಮಾಡುವ ಜೊತೆಗೆ ಅಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡಬೇಕು. ಇನ್ನೂ ನೂತನ ಜಿಲ್ಲಾಸ್ಪತ್ರೆಗಳಲ್ಲಿ ಅವ್ಯವಸ್ಥೆಯ ಮಾತು ಕೇಳಿ ಬರುತ್ತಿವೆ. ಹೀಗಾಗಿ ಜಿಲ್ಲಾಡಳಿತ ಈ ಬಗ್ಗೆ ನಿಗಾ ವಹಿಸಿಬೇಕು. ಸಮಯದಿಂದ ಸಮಯಕ್ಕೆ ಬದಲಾಗುವ ಸರ್ಕಾರದ ಮಾರ್ಗ ಸೂಚಿಗಳನ್ನು ಜನರಿಗೆ ಮತ್ತು ವ್ಯಾಪಾರಸ್ಥರಿಗೆ ಶೀಘ್ರವಾಗಿ ಜಾಗೃತಿ ಮೂಡಸಬೇಕು
ಈ ಎಲ್ಲಾ ಕೆಲಸಗಳನ್ನು ಜಿಲ್ಲಾಡಳಿತ ಸಮರ್ಥವಾಗಿ ಅನುಷ್ಠಾನಕ್ಕೆ ತಂದಾಗ ಮಾತ್ರ ಜಿಲ್ಲೆಯನ್ನು ಕರೋನಾ ಮಹಾಮಾರಿಯಿಂದ ಕಾಪಾಡಲು ಸಾಧ್ಯ. ಜೊತೆಗೆ ಜನರು ಸಹ ನಮ್ಮ ಮುಂದಿನ ನೆಮ್ಮದಿಯ ನಾಳೆಗಳಿಗಗಾಗಿ ಇಂದು ಕಷ್ಟ ಅನುಭವಿಸುವುದು ತಪ್ಪಲ್ಲ ಎನ್ನುವುದು ಮನನ ಮಾಡಿಕೊಳ್ಳಬೇಕು ಎಂದು ಜನತೆಗೆ ಮನವಿ ಮಾಡಿದ್ದಾರೆ.
ಸ್ವಯಂ ನಿಬರ್ಂಧ ಹಾಕಿಕೊಂಡು ಮನೆಯಲ್ಲಿ ಇರಬೇಕು, ಹೊರಗಡೆ ಬಂದಾಗ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಮೂಲಕ ಸರ್ಕಾರ ಮತ್ತು ಜಿಲ್ಲಾಡಳಿತ ಜೊತೆಗೆ ನಾವು ಕೂಡ ಕರೋನ ವಿರುದ್ಧ ಹೋರಾಟ ನಡೆಸಬೇಕೆಂದು ಅವಿನಾಶ್ ಜಗನ್ನಾಥ ಮನವಿ ಮಾಡಿದ್ದಾರೆ.