ಕೊರೋನಾ ಸೋಂಕು ತಡೆಗೆ ಸರಳ ಮಾರ್ಗಸೂಚಿ : ಪರ್ವೀಜ

ಕಾಳಗಿ.ಏ.28 : ಕೊರೋನಾ ಮಹಾಮಾರಿ ಎರಡನೆಯ ಅಲೆ ದೇಶದಾದ್ಯಂತ ಉಲ್ಬಣಗೊಂಡಿದ್ದು ದೇಶದ ಜನತೆ ತುಂಬಾ ಭಯಭಿತಗೊಂಡಿದ್ದಾರೆ. ಕಡ್ಡಾಯವಾಗಿ ಮಾಸ್ಕ, ಸಾಮಾಜಿಕ ಅಂತರ ಕಾಪಾಡುವುದು ವಯಸ್ಕರ ವೃದ್ಧರ ಹಾಗೂ ಚಿಕ್ಕ ಚಿಕ್ಕ ಮಕ್ಕಳ ಯೋಗಕ್ಷೇಮ ಕೇಳುವುದು, ಸ್ವಚ್ಛತೆ ಕಾಪಾಡುವುದು,ಜನಸಂದಣಿ ಮಾಡದೆ ಇರುವುದು, ಗುಂಪು ಗುಂಪಾಗಿ ಚರ್ಚೆ ನಡೆಸುವುದು, ಸಾರ್ವಜನಿಕವಾಗಿ ಕಾರ್ಯಕ್ರಮ ಮಾಡದೆ ಇರುವುದು, ಅನವಶ್ಯಕವಾಗಿ ಮನೆಯಿಂದ ಹೊರಗಡೆ ಬರವುದು,ಕಡ್ಡಾಯವಾಗಿ ಕೋವಿಡ್ ಲಸಿಕೆ ಪಡೆಯುವುದು.ಒಟ್ಟಿನಲ್ಲಿ ಮಹಾಮಾರಿ ಕೊರೋನಾ ಎರಡನೆಯ ಅಲೆಯ ಸರಕಾರದ ಮಾರ್ಗಸೂಚಿಯಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸೋಣ ಎಂದು ಜೆಡಿಎಸ್ ಮುಖಂಡ ಅಂಜುಮ ಪರ್ವೀಜ ಹೇಳಿದರು.