ಕೊರೋನಾ ಸೋಂಕು,ಸಾವು ಗಣನೀಯ ಇಳಿಕೆ, ಚೇತರಿಕೆ ಮತ್ತಷ್ಟು ಏರಿಕೆ

ಬೆಂಗಳೂರು, ಜೂ.8- ರಾಜ್ಯದಲ್ಲಿ ಕೊರೊನಾ ಸೋಂಕು ಸಂಖ್ಯೆ ದಿನನಿತ್ಯ ಗಣನೀಯವಾಗಿ ಇಳಿಕೆಯಾಗುತ್ತಿದ್ದು ಚೇತರಿಕೆ ಪ್ರಮಾಣ ದ್ವಿಗುಣವಾಗುತ್ತದೆ.

ಹಲವು ದಿನಗಳ ಬಳಿಕ ಸೋಂಕು ಸಂಖ್ಯೆ 10ಸಾವಿರಕ್ಕೂ ಒಳಗೆ ಹಾಗು ಸೋಂಕಿನಿಂದ ಸಾವನ್ನಪ್ಪುವವರ ಸಂಖ್ಯೆ ಇನ್ನೂರಕ್ಕೂ ಒಳಗೆ ದಾಖಲಾಗಿದೆ.

ರಾಜ್ಯದಲ್ಲಿ ಕೊರೋನಾ ಪಾಸಿಟಿವಿಟಿ ಪ್ರಮಾಣ ಶೇ.7.53 ರಷ್ಟಕ್ಕೆ ಕುಸಿದಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಹೊಸದಾಗಿ ಇಂದು 9808 ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು 23,449 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಇಂದು 179 ಮಂದಿ ಸಾವನ್ನಪ್ಪಿದ್ದಾರೆ.

ರಾಜ್ಯದಲ್ಲಿ ಇರುವರೆಗೆ ಒಟ್ಟಾರೆ ಸೋಂಕಿನ ಸಂಖ್ಯೆ 2,71,72,89 ಕ್ಕೆ ಏರಿಕೆಯಾಗಿದೆ. ಜೊತೆಗೆ ಚೇತರಿಸಿಕೊಂಡವರ ಸಂಖ್ಯೆ 2,46,01,65 ಹೆಚ್ಚಾಗಿದೆ. ಸೋಂಕಿನಿಂದ ಸಾವನ್ನಪ್ಪಿದ ಸಂಖ್ಯೆ 32,099 ಕ್ಜೆ ಏರಿಜೆಯಾಗಿದೆ.

1,30,224 ಮಂದಿಗೆ ಇಂದು ಪರೀಕ್ಷೆ ನಡೆಸಲಾಗಿದೆ ಇದುವರೆಗೂ ಒಟ್ಟು 3,08,62,227 ಮಂದಿಗೆ ಏರಿಕೆಯಾಗಿದೆ.

ಜಿಲ್ಲೆ ಎಷ್ಟು

 • ಬಾಗಲಕೋಟೆ- 46
 • ಬಳ್ಳಾರಿ – 212
 • ಬೆಳಗಾವಿ – 443
 • ಬೆಂಗಳೂರು ಗ್ರಾಮಾಂತರ- 125
 • ಬೆಂಗಳೂರು ನಗರ. – 2,028
 • ಬೀದರ್ 10
 • ಚಾಮರಾಜನಗರ- 106
 • ಚಿಕ್ಕಬಳ್ಳಾಪುರ- 173
 • ಚಿಕ್ಕಮಗಳೂರು- 287
 • ಚಿತ್ರದುರ್ಗ- 196
 • ದಕ್ಷಿಣ ಕನ್ನಡ – 525
 • ದಾವಣಗೆರೆ- 384
 • ಧಾರವಾಡ- 275
 • ಗದಗ- 78
 • ಹಾಸನ- 659
 • ಹಾವೇರಿ- 211
 • ಕಲಬುರಗಿ- 63
 • ಕೊಡಗು- 196
 • ಕೋಲಾರ- 298
 • ಕೊಪ್ಪಳ- 165
 • ಮಂಡ್ಯ- 387
 • ಮೈಸೂರು- 974
 • ರಾಯಚೂರು- 56
 • ರಾಮನಗರ – 42
 • ಶಿವಮೊಗ್ಗ- 703
 • ತುಮಕೂರು- 589
 • ಉಡುಪಿ- 205
 • ಉತ್ತರ ಕನ್ನಡ- 187
 • ವಿಜಯಪುರ – 152
 • ಯಾದಗಿರಿ- 33