ಕೊರೋನಾ ಸೋಂಕಿನಿಂದ ವೃದ್ಧ ನಿಧನ:151 ಪಾಸಿಟಿವ್

ಕಲಬುರಗಿ.ಏ.3: ಕೊರೋನಾ ಸೋಂಕಿನಿಂದ ಕಲಬುರಗಿ ಜಿಲ್ಲೆಯಲ್ಲಿ ಓರ್ವ ವೃದ್ಧ ನಿಧನರಾಗಿದ್ದಾರೆ ಎಂದು ಶನಿವಾರದ ಅರೋಗ್ಯ ಬುಲೆಟಿನ್ ತಿಳಿಸಿದೆ.
ಸಾರಿ ಹಿನ್ನೆಲೆಯಿಂದ ಕಲಬುರಗಿಯ ಕೆ.ಬಿ.ಎನ್ ಇಂಜಿನೀಯರ್ ಕಾಲೇಜು ಸಮೀಪದ ಬಿಲಾಲಾಬಾದ ಪ್ರದೇಶದ 85 ವರ್ಷದ ವೃದ್ಧ ಮಾ.26 ರಂದು ಖಾಸಗಿ ಅಸ್ಪತ್ರೆಗೆ ದಾಖಲಾಗಿ, ಏ.2 ರಂದು ನಿಧನ ಹೊಂದಿದ್ದಾರೆ.
ಇದರಿಂದ ಜಿಲ್ಲೆಯಲ್ಲಿ ಇದುವರೆಗೂ ಕೊರೋನಾ ಸೋಂಕಿನಿಂದ 346 ಜನ ನಿಧನರಾಗಿದ್ದಾರೆ.
ಇಂದು ಪ್ರಕಟವಾದ ಆರೋಗ್ಯ ಬುಲೆಟಿನ್ ನಲ್ಲಿ 151 ಪಾಸಿಟಿವ್ ಪ್ರಕರಣ ವರದಿಯಾಗಿದ್ದು , ಒಟ್ಟು ಕಲಬುರಗಿಯಲ್ಲಿ ಇದರೊಂದಿಗೆ 24369 ಪಾಸಿಟಿವ್ ಕೇಸ್ ಗ ಲಾದಂತಾಗಿದೆ. 93 ಜನ ಆಸ್ಪತ್ರೆ ಯಿಂದ ಇಂದು ಬಿಡುಗಡೆಯಾಗಿದ್ದಾರೆ. ಈ ವರೆಗೆ 22751 ಜನ ಆಸ್ಪತ್ರೆ ಯಿಂದ ಬಿಡುಗಡೆಯಾಗಿದ್ದಾರೆ.1272 ಜನ ಸಕ್ರಿಯ ರೋ ಗಿಗಳು ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.