ಕೊರೋನಾ ಸೋಂಕಿನಿಂದ ವೃದ್ಧೆ ನಿಧನ

ಕಲಬುರಗಿ.ಸೆ.21: ಕೊರೋನಾ ಸೋಂಕಿನಿಂದ ಕಲಬುರಗಿ ನಗರದ ಸಿ.ಐ.ಬಿ.ಕಾಲೋನಿಯ 65 ವರ್ಷದ ವೃದ್ಧೆ (P-485597) ಸೆ.14 ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಸೆ.21 ರಂದು ನಿಧನರಾಗಿರುವ ಬಗ್ಗೆ ಸೋಮವಾರ ವರದಿಯಾಗಿದ್ದು, ಇದರಿಂದ ಕೊರೋನಾ ಸೋಂಕಿಗೆ ಜಿಲ್ಲೆಯಲ್ಲಿ ಮೃತರಾದವರ ಸಂಖ್ಯೆ 259ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ವಾಸಿರೆಡ್ಡಿ ವಿಜಯಾ ಜ್ಯೋತ್ಸ್ನಾ ತಿಳಿಸಿದ್ದಾರೆ.