ಕೊರೋನಾ ಸೋಂಕಿನಿಂದ ಮೂವರು ನಿಧನ:240 ಪಾಸಿಟಿವ್

ಕಲಬುರಗಿ.ಏ.8: ಕೊರೋನಾ ಸೋಂಕಿನಿಂದ ಕಲಬುರಗಿ ಜಿಲ್ಲೆಯಲ್ಲಿ ಮೂವರು ನಿಧನರಾಗಿದ್ದಾರೆ ಎಂದು ಗುರುವಾರದ ಅರೋಗ್ಯ ಬುಲೆಟಿನ್ ತಿಳಿಸಿದೆ.
ಸಾರಿ ಹಿನ್ನೆಲೆ ಜೊತೆಗೆ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಕಲಬುರಗಿಯ ತಿಲಕ್‌ ನಗರದ 65 ವರ್ಷದ ವೃದ್ಧ ಮಾ.28 ರಂದು ಖಾಸಗಿ ಅಸ್ಪತ್ರೆಗೆ ದಾಖಲಾಗಿ, ಏ.7 ರಂದು ನಿಧನ ಹೊಂದಿದ್ದಾರೆ.
ಅದೇ ರೀತಿ ಸಾರಿ ಹಿನ್ನೆಲೆ ಜೊತೆಗೆ ಹೃದ್ರೋಗ ಸಮಸ್ಯೆಯಿಂದ ಬಳಲುತ್ತಿದ್ದ ಕಲಬುರಗಿಯ ರಾಜಾಪುರದ 65 ವರ್ಷದ ವೃದ್ಧೆ ಏ.3 ರಂದು ಕೋವಿಡ್ ಅಸ್ಪತ್ರೆಗೆ ದಾಖಲಾಗಿ, ಏ.7 ರಂದು ನಿಧನ ಹೊಂದಿದ್ದಾರೆ.
ಅದೇ ರೀತಿ ಸಾರಿ ಹಿನ್ನೆಲೆಯಿಂದ‌ ಚಿಂಚೋಳಿ ತಾಲೂಕಿನ ಚಂದಾಪುರದ 76 ವರ್ಷದ ವೃದ್ಧ ಏ.6 ರಂದು ಕೋವಿಡ್ ಅಸ್ಪತ್ರೆಗೆ ದಾಖಲಾಗಿ ಅಂದೇ ನಿಧನ ಹೊಂದಿದ್ದಾರೆ.‌
ಇದರಿಂದ ಜಿಲ್ಲೆಯಲ್ಲಿ ಇದುವರೆಗೂ ಕೊರೋನಾ ಸೋಂಕಿನಿಂದ 358 ಜನ ನಿಧನರಾಗಿದ್ದಾರೆ
ಇಂದು ಪ್ರಕಟವಾದ ಆರೋಗ್ಯ ಬುಲೆಟಿನ್ ನಲ್ಲಿ 240 ಪಾಸಿಟಿವ್ ಪ್ರಕರಣ ವರದಿಯಾಗಿದ್ದು , ಒಟ್ಟು ಕಲಬುರಗಿಯಲ್ಲಿ ಇದರೊಂದಿಗೆ 25426 ಪಾಸಿಟಿವ್ ಕೇಸ್ ಗ ಲಾದಂತಾಗಿದೆ. 156 ಜನ ಆಸ್ಪತ್ರೆ ಯಿಂದ ಇಂದು ಬಿಡುಗಡೆಯಾಗಿದ್ದಾರೆ. ಈ ವರೆಗೆ 23431 ಜನ ಆಸ್ಪತ್ರೆ ಯಿಂದ ಬಿಡುಗಡೆಯಾಗಿದ್ದಾರೆ.1637 ಜನ ಸಕ್ರಿಯ ರೋ ಗಿಗಳು ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.